ಅಂಬೇಡ್ಕರ್ ನಗರ ಮಹಾದ್ವಾರ ಉದ್ಘಾಟನೆ
ಮಹಾಲಿಂಗಪುರ 15 : ಡಾ. ಬಿ ಆರ್ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಸಂಘ ಮಹಾಲಿಂಗಪುರ ಹಾಗೂ ಕೆಂಗೇರಿಮಡ್ಡಿ ನಾಗರಿಕರ ಸಹಯೋಗದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 130ನೇ ಜಯಂತಿ ಹಾಗೂ ಅಂಬೇಡ್ಕರ್ ನಗರ ಮಹಾದ್ವಾರ ಉದ್ಘಾಟನಾ ಸಮಾರಂಭ ನಗರದ ಕೆಂಗೇರಿಮಡ್ಡಿ ಬಡಾವಣೆಯಲ್ಲಿ ಜರುಗಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಜಾವೇದ್ ಭಾಗವಾನ್ , ನಗರ ಹಂಗಾಮಿ ಠಾಣಾಧಿಕಾರಿ ಆನಂದ ಅದಗೊಂಡ, ಶ್ರೀರಾಮಸೇನಾ ಹಿಂದುಸ್ತಾನ ಜಿಲ್ಲಾ ಪ್ರ. ಕಾರ್ಯದರ್ಶಿ ಸತೀಶ ಜಗದಾಳ, ಪಿಕೆಪಿಎಸ್ ಸದಸ್ಯ ಈರಪ್ಪ ದಿನ್ನಿಮನಿ , ಕಾಂಗ್ರೆಸ್ ಮುಖಂಡರಾದ ಅರ್ಜುನ್ ದೊಡಮನಿ, ಮಹಾಲಿಂಗಪ್ಪ ಲಾತೂರ್, ಮನೋಹರ್ ಶಿರೋಳ, ಲಕ್ಕಪ್ಪ ಲಾತೂರ, ಚೆನ್ನಪ್ಪ ರಾಮೋಜಿ, ಹುಸೇನ್ ರಾಯಚೂರ, ಶಿರಾಜ್ ಪಾಂಡು, ಡಾ.ಶಂಕರ್ ಹುಕ್ಕೇರಿ, ಚನ್ನಬಸು ಯರಗಟ್ಟಿ, ಅಲ್ಲಪ್ಪ ಲೋಕಪೂರ, ಶಿವಬಸು ಗೌಂಡಿ, ಪಾಪಾ ನಾಲಬಂದ, ಮಹಾದೇವ ಮಾವಿನಹಿಂಡಿ, ಸಮಾಜದ ಹಿರಿಯರಾದ ಪ್ರಕಾಶ್ ಪೂಜಾರಿ, ಅಪ್ಪಣ್ಣ ಭಜಂತ್ರಿ, ಪ್ರಶಾಂತ್ ಮುಖ್ಯನ್ನವರ್, ಪತ್ರಕರ್ತರಾದ ಜಯರಾಮ ಶೆಟ್ಟಿ, ಯುನುಸ್ ಪಠಾಣ ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಶ್ರೀಶೈಲ ದೊಡಮನಿ, ಉಪಾಧ್ಯಕ್ಷ ಮಧು ಮಾವಿನಹಿಂಡಿ, ಕಾರ್ಯದರ್ಶಿ ತಿಪ್ಪಣ್ಣ ಬಂಡಿವಡ್ಡರ, ನಾಗರಾಜ್ ಭಜಂತ್ರಿ, ಸುರೇಶ್ ಗೌಂಡಿ, ಚೆನ್ನಪ್ಪ ಮುಖ್ಯನ್ನವರ್, ದೀಪು ಮೇತ್ರಿ , ಮಹಾಲಿಂಗ ಬಂಡಿವಡ್ಡರ್, ಕೃಷ್ಣ ಕಳ್ಳಿಮನಿ, ನಿಂಗಪ್ಪ ಗೌಂಡಿ, ಗಣಪತಿ ಮಾವಿನಹಿಂಡಿ, ರಾಜು ಮುಖ್ಯನವರ್, ನಾಗಲಿಂಗ ಬಡಿಗೇರ್, ಚನ್ನಪ್ಪ ಗೌಂಡಿ, ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ನಿಯೋಜಿಸಿದರು.