ವಿದ್ಯಾರ್ಥಿಗಳನ್ನು ವಾಸ್ತವಿಕ ಜಗತ್ತಿಗೆ ಕರೆತರವುದು ಶಿಕ್ಷಕರ ಜವಾಬ್ದಾರಿ: ಡಾ. ವಿಷ್ಣುಶಿಂಧೆ
ಬಳ್ಳಾರಿ 01: ಟಿವಿ, ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಮಕ್ಕಳನ್ನು ಭ್ರಮಾಲೋಕದಲ್ಲಿ ಮುಳಗಿಸಿವೆ. ಇಂದು ಭ್ರಮಾ ಸಮುದ್ರದಲ್ಲಿ ಈಜುತ್ತಾ ವಾಸ್ತವಿಕತೆಯನ್ನು ಸಂಪೂರ್ಣವಾಗಿ ಮರೆತು ತಮ್ಮ ಭವಿಷ್ಯವನ್ನು ತಾವೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಕರಾದವರು ಮಕ್ಕಳನ್ನು ವಾಸ್ತವಿಕ ನೆಲಗಟ್ಟಿನೆಡೆ ಕರೆದು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪ್ರೇರೇಪಿಸವುದು ಕೆಲಸ ಅನಿವಾರ್ಯವಾಗಿ ಮಾಡಬೇಕಾಗಿದೆ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ವಿಷ್ಣುಶಿಂಧೆ ಅಭಿಪ್ರಾಯ ಪಟ್ಟರು.
ನಗರದ ಮೊಹಮ್ಮದಿಯ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ, ನೂತನ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅವರು ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಮತ್ತೋರ್ವ ಅತಿಥಿ ಡಾ. ಎಸ್.ಆರ್ ಜೋಶಿ ಪ್ರಾಂಶುಪಾಲರು ಇಂಡಿಯನ್ ಶಿಕ್ಷಣ ಮಹಾವಿದ್ಯಾಲಯ ಬೀದರ್ ಮಾತನಾಡಿ ಶಿಕ್ಷಕ ವೃತ್ತಿ ಜಗತ್ತಿನಲ್ಲೇ ಅತಿ ಪವಿತ್ರವಾದ ವೃತ್ತಿ, ಇಂತಹ ವೃತ್ತಿಗೆ ಕೌಶಲ್ಯ ಹಾಗೂ ಮಕ್ಕಳನ್ನು ವೈಜ್ಞಾನಿಕವಾಗಿ ಅರಿಯುವುದು ಅತಿ ಮುಖ್ಯ, ಬಿ.ಇಡಿ ಕೋರ್ಸ ಈ ಕೌಶಲ್ಯಗಳನ್ನು ಹಾಗೂ ವೃತ್ತಿ ತರಬೇತಿಯನ್ನು ವೈಜ್ಞಾನಿಕ ಹಾಗೂ ಸೂವ್ಯವಸ್ತೆಯಿಂದ ಕೊಡುತ್ತದೆ ಆದ್ದರಿಂದ ಈ ತರಬೇತಿಯನ್ನು ಅತ್ಯಂತ ಶ್ರದ್ಧೆಯಿಂದ ಕಲೆತು ಉತ್ತಮ ಶಿಕ್ಷಕರಾಗಿ ಎಂದರು.
ಮೊಹಮ್ಮದಿಯ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಮೌಲಾನ ಇದ್ರೀಸ್ ಅತಿಥಿಗಳನ್ನು ಅಭಿನಂದಿಸಿ, ಕಳೆದ ದಶಕಗಳಿಂದಲೂ ನಮ್ಮ ಮಹಾವಿದ್ಯಾಲಯ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ ಮುಂದೆಯೂ ಯಾವುದೇ ಕಾರಣಕ್ಕೂ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಇಲ್ಲಿ ಓದುತ್ತಿರುವ ಪ್ರತಿ ಮಕ್ಕಳು ನಮ್ಮ ಜವಾಬ್ದಾರಿ ಅವರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಸಂಸ್ಥೆಯ ಹೊಣೆ ಎಂದು ಪಾಲಕರನ್ನು ಹಾಗೂ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಡಾ. ಎಸ್.ಆರ್ ಜೋಶಿ ಪ್ರಾಂಶುಪಾಲರು ಇಂಡಿಯನ್ ಶಿಕ್ಷಣ ಮಹಾವಿದ್ಯಾಲಯ ಬೀದರ್, ಪ್ರಾಚಾರ್ಯರಾದ ಸುಜಾತಾ ಉಪನ್ಯಾಸಕರಾದ ನಾಗವೇಣಿ, ಮುಜಾಮಿಲ್, ಕರೀಮ್, ಯುನಿಸ್ ಅಲ್ಲಮನೂರು, ಪಾರ್ವತಿ, ಮಧುಲತಾ, 3ನೇ ಸೆಮಿಸ್ಟರ್ ಹಾಗೂ 1ನೇ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಮತ್ತು ಪಾಲಕರು ಇದ್ದರು.