ಬೆಳಗಾವಿ ಜಿಲ್ಲಾ ಆಸ್ಪತ್ರೆ ಲಿಪ್ಟ್ ನಲ್ಲಿ ಲಾಕ್ ಆದ ಉಸ್ತುವಾರಿ ಸಚಿವ ಸತೀಶ ಪುತ್ರ ರಾಹುಲ್ ಜಾರಕಿಹೊಳಿ
ಬೆಳಗಾವಿ : ನಗರದ ಜಿಲ್ಲಾ ಜಿಲ್ಲಾಸ್ಪತ್ರೆಯ ಲಿಪ್ಟ್ ಅರ್ಧದಲ್ಲಿ ಬಂದುಬಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಅರ್ಧ ಗಂಟೆ ಸಿಕ್ಕು ನರಳುವಂತಾಗಿರುವ ಘಟನೆ ವರದಿಯಾಗಿದೆ.
ನಗರದಲ್ಲಿ ಇಂದು ನಾಗ ಪಂಚಮಿ ಅಂಗವಾಗಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಾಲು ಹಂಚುವ ಕಾರ್ಯಕ್ರಮವನ್ನು ಹಮ್ಮಿಳ್ಳಲಾಗಿತ್ತು. ಈ ಅಂಗವಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ರಾಹುಲ್ ಜಾರಕಿಹೊಳಿ ಅವರು ಜಿಲ್ಲಾಸ್ಪತ್ರೆಯ ಲಿಪ್ಟ್ ನಲ್ಲಿ ಹೋಗಿತ್ತಿದ್ದಾಗ ಲಿಪ್ಟ್ ಮಾರ್ಗ ಮಧ್ಯದಲ್ಲಿ ಅರ್ಧಕ್ಕೆ ಬಂದುಬಿದ್ದಿದೆ.
ಇದರಿಂದ ರಾಹುಲ್ ಜಾರಕಿಹೊಳಿ ಮತ್ತು ಅವರ ಜೊತೆ ಇದ್ದ ಕೆಲ ಸಂಘಡಿಗರು ಲಿಪ್ಟ್ ನಲ್ಲಿ ಅರ್ಧ ಗಂಟೆ ಕಾಲ ಕಳೆಯುವಂತಾಯಿತು. ಬಳಿಕ ಸಮೀಪದಲ್ಲಿದ್ದ ಬಿಮ್ಸ್ ನ ಕೆಲ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಲಿಪ್ಟ್ ನ ಬಾಗಿಲು ತೆರೆದು ರಾಹುಲ್ ಜಾರಕಿಹೊಳಿ ಹಾಗೂ ಅವರ ಜೊತೆ ಇದ್ದವರನ್ನು ಹೊರಗೆ ಕರೆತಂದರು.