ಸ್ಮಾರ್ಟ್ ಸಿಟಿ ಬೆಳಗಾವಿಯಲ್ಲಿ ರಸ್ತೆಯೇ ಇಲ್ಲಿ ವಾಹನಗಳ ಪಾರ್ಕಿಂಗ್ ಅಡ್ಡೆ : ಇದ್ದು ಇಲ್ಲದಂತಾದ ಸಂಚಾರಿ ಪೊಲೀಸರು : ದಿನನಿತ್ಯ ನಾಗರಿಕರಿಗೆ ಕಿರಿ ಕಿರಿ ತಪ್ಪಿದ್ದಲ್ಲ

ಸ್ಮಾರ್ಟ್ ಸಿಟಿ ಬೆಳಗಾವಿಯಲ್ಲಿ ರಸ್ತೆಯೇ ಇಲ್ಲಿ ವಾಹನಗಳ ಪಾರ್ಕಿಂಗ್ ಅಡ್ಡೆ : ಇದ್ದು ಇಲ್ಲದಂತಾದ ಸಂಚಾರಿ ಪೊಲೀಸರು : ದಿನನಿತ್ಯ ನಾಗರಿಕರಿಗೆ ಕಿರಿ ಕಿರಿ ತಪ್ಪಿದ್ದಲ್ಲ

ಪಾರೇಶ ಭೋಸಲೆ

ಬೆಳಗಾವಿ : ಸ್ಮಾರ್ಟ್ ಸಿಟಿ ಹಾಗೂ ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಕೆಎಲ್ ಇ ಮುಂದಿನ ರಸ್ತೆಯು ಅಕ್ಷರಶಃ ವಾಹನಗಳ ನಿಲುಗಡೆಯ ಪಾರ್ಕಿಂಗ್ ಅಡ್ಡೆಯಾಗಿ ಮಾರ್ಪಟ್ಟಿದ್ದು, ವಾಹನಗಳನ್ನು ರಸ್ತೆಗಳಲ್ಲಿ ನಿಲುಗಡೆ ಮಾಡಿದರು ಇಲ್ಲಿ ಅವರನ್ನು ಕೇಳೊರು ಅಥವಾ ಹೇಳೊರು ಯಾರು ಇಲ್ಲದಂತಾಗಿದೆ. ಸಂಚಾರಿ ಪೊಲೀಸರಂತು ಇದಕ್ಕು ತಮಗೂ ಯಾವದೇ ರೀತಿಯ ಸಂಬಂದ ಇಲ್ಲದಂತೆ ವರ್ತಿಸುವದು ದುರ್ಧೈವದ ಸಂಗತಿಯಾಗಿದೆ. 


    ಹೌದು ಓದುಗರೆ ಬೆಳಗಾವಿ ನಗರಕ್ಕೆ ಹೆಬ್ಬಾಗಿಲು ಆಗಿರುವ ಕೆಎಲ್ ಇ ಎದುರುಗಿನ ನಡು ರಸ್ತೆಯ ಮೇಲೆ ಕಾರು ಸೇರಿದಂತೆ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಕೆಎಲ್ ಇ ಎದುರಿಗೆ ಕೂದಲು ಎಳೆಯ ಅಂತರದಲ್ಲಿ ವಾಹನಗಳ ನಿಲುಗಡೆಯ ಪಾರ್ಕಿಂಗ್ ಇದ್ದರೂ ಇಲ್ಲಿ ಯಾರು ತಿರುಗಿ ಕೂಡಾ ನೋಡುವದಿಲ್ಲ. 


    ಕೆಎಲ್ ಇ ಎದುರಿಗಿನ ರಸ್ತೆಯ ಮೇಲೆ ಕೆಲವು ದ್ವಿಚಕ್ರ ವಾಹನ ಸವಾರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಬೇರೆ ಊರುಗಳಿಗೆ ತೆರಳಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬರುವವರೆಗೆ ಸವಾರರಿಗೆ ಈ ರಸ್ತೆಯು ಸುರಕ್ಷಿತ ಸ್ಥಳವಾಗಿ ಮಾರ್ಪಟ್ಟಿದೆ. 

   ಬೇರೆ ಊರುಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕಾರ್ಯ ಮಾಡುವವರು ಹಾಗೂ ಆಸ್ಪತ್ರೆಗೆ ರೋಗಿಗಳನ್ನು ನೋಡಲು ಬರುವ ವಾಹನಗಳ ಸವಾರರಿಗು ವಾಹನ ನಿಲ್ಲಿಸಲು ಈ ರಸ್ತೆ ಹೇಳಿ ಮಾಡಿಸಿದ ಸ್ಥಳವಾಗಿದೆ. 


    ಈ ರಸ್ತೆಯಲ್ಲಿ ದಿನನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ಅಲ್ಲದೆ ಕೊಲ್ಲಾಪುರ, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಮಿರಜ್ ಸೇರಿದಂತೆ ಅನೇಕ ಭಾಗದ ಜನರು ಬೆಳಗಾವಿಗೆ ಆಗಮಿಸಬೇಕಾದರೆ ಇದೇ ರಸ್ತೆ ಯನ್ನು ಉಪಯೋಗಿಸುತ್ತಾರೆ. ಅಲ್ಲದೆ ಈ ರಸ್ತೆಯಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುತ್ತಿರುವದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದ್ದು, ಇಲ್ಲಿ ಯಾವ ಸಂಚಾರಿ ಪೊಲೀಸರು ಕೂಡಾ ತಿರುಗಿ ನೋಡುವದಿಲ್ಲ. ಇದರಿಂದ ಇದ್ದು ಇಲ್ಲದಂತಾಗಿರುವ ಸಂಚಾರಿ ಪೊಲೀಸರ ವಿರುದ್ದ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.


   ಬೆಳಗಾವಿ ನಗರಕ್ಕೆ ಇದೇ ಮುಖ್ಯ ರಸ್ತೆಯಾಗಿರುವದರಿಂದ ದಿನನಿತ್ಯ ನೂರಾರು ರೋಗಿಗಳನ್ನು ಹೊತ್ತು ಅಂಬ್ಯುಲನ್ಸ್ ಗಳು ಕೂಡಾ ಹಲವಾರು ಸಾಗುತ್ತವೆ. ಆದರೆ ಅಂಬ್ಯುಲನ್ಸ್ ಗಳಿಗೂ ಕೂಡಾ ಇಲ್ಲಿ ಹೋಗಲು ದಾರಿ ಇಲ್ಲದಂತಾಗಿದೆ.

ಸುದ್ದಿ ಓದಿ