ರಾಮ ಮಂದಿರ ಶಿಲಾನ್ಯಾಸ ಮಳೆ ನಡುವೆಯು ಕುಂದದ ಭಕ್ತರ ಉತ್ಸಾಹ
ಚಿಕ್ಕೋಡಿ, ಆಗಸ್ಟ್ 5: ಅಯೋದ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸದ ಕಾರ್ಯಕ್ರಮ ಕುರಿತು ಚಿಕ್ಕೋಡಿ ನಗರದಲ್ಲಿ ರಾಮನ ಭಕ್ತರು ಮಳೆಯ ನಡುವೆಯೂ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತಿಭಾವ ಮೇರೆದರು.
ರಾಮ ಮಂದಿರದ ಶಿಲಾನ್ಯಾಸದ ಐತಿಹಾಸಿಕ ಕಾರ್ಯಕ್ರಮ ನೇರಪ್ರಸಾರ ವಿಕ್ಷಣೆ ಮಾಡುತ್ತಾ ಪ್ರತಿ ದೇವಸ್ಥಾನದಲ್ಲಿ ಭಕ್ತರು ಪೂಜೆಯಲ್ಲಿ ನಿರತರಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೂ ಧಾರಾಕಾರ ಮಳೆ ಸುರಿಯುತ್ತಿದೆ.ಇಂತಹ ಮಳೆಯಲ್ಲಿಯೂ ಭಕ್ತರ ಉತ್ಸಾಹ ಕುಂದಿಲ್ಲ. ಎಲ್ಲರು ದೇವಸ್ಥಾನದಲ್ಲಿ ಪಾಲ್ಗೊಂಡ ರಾಮನಿಗೆ ಜೈಕಾರ ಹಾಕುತ್ತಿದ್ದಾರೆ.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಮುಖಂಡ ಸಂಜಯ ಅಡಕೆ. ವಿಠ್ಡಲಜೀ.ವಿನಾಯಕ ಮಾಳಿ.ಕೃಷ್ಣಾ ಮಾಳಿ.ಸಂತೋಷ ಓತಾರಿ ಮುಂತಾದವರು ಪಾಲ್ಗೊಂಡಿದ್ದರು.