24 ಗಂಟೆಯಲ್ಲಿ ಕಳ್ಳತನ ಪ್ರಕರಣ ಪತ್ತೆ ಹಚ್ವಿದ ಕಿತ್ತೂರು ಪೊಲೀಸರು : 31 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ವಶ

24 ಗಂಟೆಯಲ್ಲಿ ಕಳ್ಳತನ ಪ್ರಕರಣ ಪತ್ತೆ ಹಚ್ವಿದ ಕಿತ್ತೂರು ಪೊಲೀಸರು : 31 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ವಶ

ಬೆಳಗಾವಿ : ಮನೆಗಳ್ಳತನ ಮಾಡಿದ ಆರೋಪಿತರನ್ನು 24 ಗಂಟೆಗಳಲ್ಲಿ ಪತ್ತೆ ಹಚ್ವಿರುವ ಪೊಲೀಸರು ಬಂಧಿತ ಖದೀಮರಿಂದ 31 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ಮತ್ತು ಕಳ್ಳತನಕ್ಕೆ ಉಪಯೋಗಿಸಿದ್ದ ಬೈಕ್ ಹೀಗೆ ಒಟ್ಟು 1.82 ಲಕ್ಷ ಆಭರಣ ವಶಕ್ಕೆ ಪಡೆದಿದ್ದಾರೆ.


   ಇದೇ ದಿ. 27ರಂದು  ತಡರಾತ್ರಿ  ವೇಳೆಯಲ್ಲಿ ಖದೀಮರು ಜಿಲ್ಲೆಯ ಕಿತ್ತೂರ ಸೋಮವಾರ ಪೇಟೆಯಲ್ಲಿರುವ ಮಾನಾ ಜುವೆಲರ್ ಎನ್ನುವ ಬಂಗಾರದ ಅಂಗಡಿಯ ಶಟರ ಕೊಂಡಿಯನ್ನು ಮುರಿದು ಅಂಗಡಿಯ ಒಳಗೆ ಇದ್ದ 31 ಗ್ರಾಂ ಬಂಗಾರದ ಆಭರಣಗಳು ಹಾಗೂ 1 ಕಿಲೋ ಬೆಳ್ಳಿಯ ಆಭರಣಗಳ ಹೀಗೆ ಒಟ್ಟು 1.82.500 ರೂಪಾಯಿ ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಫರಾರಿಯಾಗಿದ್ದರು.

     ಈ ಕುರಿತು ಸುಬ್ರಮಣ್ಯಂ ಮಾರ್ತಾಂಡಪ್ಪಾ ಪತ್ತಾರ ಇವರು ಕಿತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಬೈಲಹೊಂಗಲ ಡಿಎಸ್ ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಕಿತ್ತೂರ ವೃತ್ತ ನಿರೀಕ್ಷಕ ಮಹಾಂತೇಶ ಹೊಸಪೇಟೆ ಮತ್ತು ಪ್ರವೀಣ ಗಂಗೋಳ, ಪಿ.ಎಸ್.ಐ (ಕಾ.ಸು) ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚಿಸಿ, ಸದರಿ ಪ್ರಕರಣದಲ್ಲಿಯಆರೋಪಿತರನ್ನು ಪ್ರಕರಣ ದಾಖಲಾದ 24 ಗಂಟೆಯೊಳಗಾಗಿ ಪತ್ತೆ ಮಾಡಿ ಕಳವು ಮಾಡಿದ್ದ 31 ಗ್ರಾಂ ಬಂಗಾರದ ಹಾಗೂ 1 ಕೆಜಿ ಬೆಳ್ಳಿ  ಹೀಗೆ ಒಟ್ಟು ಅ.ಕಿ 1,82,500 ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ ಎಚ್.ಎಫ್. ಡಿಲಕ್ಷ ಮೊಟಾರ ಸೈಕಲ್‌ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

    ಆರೋಪಿತರ ಈ ಪತ್ತೆ ಕಾರ್ಯದಲ್ಲಿ ಕಿತ್ತೂರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಬಿ.ಎಸ್.ಸಿದ್ದಾಳ ಸಿಹೆಚ್‌ಸಿ 2230, ಎಸ್.ಎಸ್.ಬಳ್ಳಾರಿ ಸಿಹೆಚ್‌ಸಿ 1724, ಆರ್.ಎಸ್.ಶೀಲಿ ಸಿಹೆಚ್‌ಸಿ 1299, ಬಿ.ಎಸ್.ಸಿದ್ದಾಳ ಸಿಹೆಚ್‌ಸಿ 2210. ಎಸ್.ಆರ್.ಮಠದ ಸಿಹೆಚ್‌ಸಿ 2564, ಎಸ್.ಬಿ.ಹುಣಶಿಕಟ್ಟಿ ಸಿಹೆಚ್‌ಸಿ 1051, ಎಸ್.ಎ.ದಫೇದಾರ ಸಿಪಿಸಿ 3046, ವಿ.ಐ.ಹಡಪದ ಸಿಪಿಸಿ 3163, ಎ.ಎಮ್.ಚಿಕ್ಕೇರಿ ಸಿಪಿಸಿ 3244, ಎಮ್.ಎಸ್.ಹಳ್ಳಿ ಸಿಪಿಸಿ 3472, ಎಮ್‌.ಸಿ.ಇಟಗಿ ಸಿಪಿಸಿ 3673, ಜೆ.ಜಿ.ಲಮಾಣಿ ಸಿಪಿಸಿ 3992 ಇವರನ್ನು ಎಸ್ ಪಿ ಡಾ. ಸಂಜೀವ ಪಾಟೀಲ ಹೆಚ್ಚುವರಿ ಎಸ್ ಪಿ ವೇಣುಗೋಪಾಲ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಸುದ್ದಿ ಓದಿ