ಕಾಳಿ ನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ, ಆದರೆ ಮಾಲಿನ್ಯ ಸಂಪೂರ್ಣ ನಿವಾರಣೆ ಆಗಿಲ್ಲ

ಕಾಳಿ ನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ, ಆದರೆ ಮಾಲಿನ್ಯ ಸಂಪೂರ್ಣ ನಿವಾರಣೆ ಆಗಿಲ್ಲ   Improvement in Kali River water quality, but pollution has not been completely eliminated

ಲೋಕದರ್ಶನ ವರದಿ 

ದಾಂಡೇಲಿ 01 : ದಾಂಡೇಲಿಯ ಜೀವನಾಡಿ ಕಾಳಿ ನದಿಯ  ನೀರಿನ ಗುಣ ಮಟ್ಟದ ಕುರಿತಂತೆ ಕೆಂದ್ರ ಮಾಲಿನ್ಯ ನಿಯಂತ್ರಣ  ಮಂಡಳಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳೀ ಪ್ರಕಟಿಸಿರುವ ಅಧಿಕೃತ ದಾಖಲೆಗಳು ನದಿಯ ಕೆಲವು ಪ್ರಮುಖ ನೀರಿನ ಗುಣಮಟ್ಟ ಸೂಚಕಗಳಲ್ಲಿ ಸುದಾರಣೆ ಕಂಡಿರುವದು ಸೂಚಿಸುತ್ತದೆ.  

ಆದರೆ ಕಾಲೀನದಿ ಸಂಪೂರ್ಣ ಮಾಲಿನ್ಯ ಮುಕ್ತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ದಾಂಡೇಲಿ ಹಾಗೂ ಕೆಳ ಹರಿವಿನ ಭಾಗಗಳಲ್ಲಿ ಕೈಗಾರಿಕಾ ಸಂಸ್ಕರಿಸಿದ ತ್ಯಾಜ್ಯ. ನಗರಗಳ ಒಳಚರಂಡಿ ನೀರು, ಕೃಷಿ ಪ್ರದೇಶಗಳಿಖಂದ ಹರಿದು ಬರುವ ರಾಸಾಯನಿಕಗಳು ಪ್ಲಾಸ್ಟೀಕ್ ಹಾಗೂ ಇತರ ಘನ ತ್ಯಾಜ್ಯಗಳು ನದಿಯ ಪರಿಸರದ ಮೇಲೆ ಇನ್ನೂ ಒತ್ತಡ ಬೀರುತ್ತದೆ. ಎಮದು ವಿವಿಧ ಅಧ್ಯಯನಗಳು ಮತ್ತು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿಪಟ್ಟಿದ್ದಾರೆ.  

ಲಭ್ಯವಿರುವ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ನದಿಯ ಹೆಚ್ಚಿನ ಮಾದರಿಗಳಲ್ಲಿ ಜೈವಿಕ ಆಮ್ಲಜನಕದ ಬೇಡಿಕೆ 0.1 ರಿಂದ 1.1 ಗ್ರಾಂ/ಲೀಟರ್ ನಡುವೆ ದಾಖಲಾಗಿದ್ದು  ಸ್ಥಳೀಯ ಬಮಟ್ಟದ ಮಾಲಿನ್ಯದಲ್ಲಿ ಒತ್ತಡ ಇರಬಹುದೆಂಬ ಸೂಚನೆಯೂ ನೀಡಿದೆ. ಈ ಮೌಲ್ಯವು ಇಡೀ ನದಿಯ ಸ್ಥಿತಿಯನ್ನು ಪ್ರತಿನಿಧಿಸುವದಿಲ್ಲ. ಅದು ನಿರ್ಧಿಷ್ಟ ಸ್ಥಳ ಮತ್ತು  ಸಮಯದಲ್ಲಿ ಸಂಗ್ರಹಿಸಿದ ಮಾದರಿಗೆ ಮಾತ್ರ  ಸಂಭಂದಿಸಿದೆ.

ಕೆ.ಎಸ್‌.ಪಿ.ಸಿ.ಬಿ ರಾಷ್ಟ್ರೀಯ ನೀರಿನ ಗುಣಮಟ್ಟದ ಮೇಲ್ವೀಚಾರಣಾ ಕಾರ್ಯಕ್ರಮದಡಿ ಕಾಳಿ ನದಿಯ ವಿವಿಧ ಕೇಂದ್ರಗಳಲ್ಲಿ ನಿಯಮಿತವಾಗಿ  ಹಾಗೂ ಕೋಳಿಫಾರಂ ಬ್ಯಾಕ್ಟೀರಿಯಾ  ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ನೀರಿನ ಗುಣ ಮಟ್ಟವನ್ನು ಪರೀಶೀಲಿಸುತ್ತಿದೆ. ಪರಿಸರ ತಜ್ಞರ ಅಭಿಪ್ರಾಯದಂತೆ ನದಿಯ ಆ ಆರೋಗ್ಯವನ್ನು ಕೇವಲ ಆಧಾರದ ಮೇಲೆ ನಿರ್ಧರಿಸುವದು ಸಾಕಾಗುವದಿಲ್ಲ.

ಹೆವಿ ಮೆಟಲ್ಗಳು ಜೀವ ವೈವಿಧ್ಯ, ಮೀನು ಸಂಪತ್ತು ಹಾಗೂಋತುಮಾನಕ್ಕೆ ಅನುಗುಣವಾಗಿ ನೀರಿನ ಗುಣಮಟ್ಟದಲ್ಲಿ ಆಗುವ ಬದಲಾವಣೆಗಳನ್ನು ನಿರಮತರವಾಗಿ ಅಧ್ಯಯನ ಮಾಡಬೇಕಿದೆ. ಒಟ್ಟಾರೆ, ಅಧಿಕೃತ ದಾಖಲೆಗಳ ಪ್ರಕಾರ ಕಾಳಿ ನದಿಯ ನೀರಿನ ಗುಣಮಟ್ಟದಲ್ಲಿ ಸುಧಾರಣೆ ಕಂಡಿದ್ದರೂ, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ನಿರಮತರ ಮೇಲ್ವೀಚಾರಣೆ, ಕೈಗಾರಿಕೆಗಳ ತ್ಯಾಜ್ಯ ವಿಸರ್ಜನೆ ಮೇಲೆ ಕಟ್ಟು ನಿಟ್ಟಿನ ನಿಗಾ ಹಾಗೂ ನೀರಿನ ಗುಣಮಟ್ಟದ ಅಂಕಿ ಅಂಶಗಳನ್ನು ಸಾರ್ವಜನಿಕವಾಗಿ, ಪಾರದರ್ಶಕವಾಗಿ ಪ್ರಕಟಿಸುವದು ಅಗತ್ಯವಾಗಿದೆ.