ಬಳ್ಳಾರಿ

ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನ ಸಾಹಿತ್ಯ ಪ್ರಾಮುಖ್ಯತೆ: ಶರಣಪ್ಪ ಅಭಿಮತ

ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನ ಸಾಹಿತ್ಯ ಪ್ರಾಮುಖ್ಯತೆ: ಶರಣಪ್ಪ ಅಭಿಮತ

ಬಳ್ಳಾರಿ 09: ರಾಷ್ಟ್ರೀಯ ಬಸವದಳ ಬಸವೇಶ್ವರನಗರ ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕವು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದತ್ತಿ ಉಪನ್ಯಾಸ ಕಾರ್ಯಕ್ರಮದ ಪ್ರಾರಂಭದಲ್ಲಿ ಜಿಲನ್ ಬಾಷಾ ಪ್ರಾರ್ಥಿಸಿದರು, ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ ವಿ ಗಣ್ಯಮಾನ್ಯರನ್ನು ಸ್ವಾಗತಿಸಿದರು. ಅಖಂಡ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿಷ್ಟಿ ರುದ್ರ​‍್ಪ ಪ್ರಾಸ್ತಾವಿಕ ನುಡಿಗಳಾಡಿದರು.   ಇದೆ ವೇಳೆಯಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ವಕೀಲರು ಹಾಗೂ ಯೋಗ ಸಾಧಕರಾದ ಕಣೆಕಲ್ ಎರ್ರಿಸ್ವಾಮಿ ಉದ್ಘಾಟಿಸಿ ನಮ್ಮ ಉದ್ಘಾಟನಾ ನುಡಿಯಲ್ಲಿ ವಚನ ಸಾಹಿತ್ಯಗಳು ಜನರ ಬದುಕನ್ನು ಕಟ್ಟಿಕೊಡುತ್ತವೆ, ಜೊತೆಗೆ ಸಮಾಜಿಕ ಕಳಕಳಿ, ಸಾಮಾಜಿಕ ಚಿಂತನೆಯನ್ನು ಮಾಡುವಲ್ಲಿ ಸಹಕಾರಿಯಾಗುತ್ತವೆ ಎಂದು ನುಡಿದರು.      

ದತ್ತಿ ಉಪನ್ಯಾಸ ನೀಡಿದ ಕನ್ನಡ ಉಪನ್ಯಾಸಕರಾದ ಶರಣಪ್ಪ ರವರು 12ನೇ ಶತಮಾನದ ವಚನಗಳು ಸಾಮಾಜಿಕ ಚಳುವಳಿ ಮಾಡಲು ಪ್ರೋತ್ಸಾಹ ನೀಡುತ್ತವೆ. ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನಗಳು ಕಾರಣಗಳಾಗಿವೆ, ವಚನಗಳು ಸರ್ವಕಾಲಿಕ, ವಚನಗಳು ಅನರ್ಗ್ಯ ರತ್ನಗಳಿದ್ದಂತೆ ಲೋಕದ ಡೊಂಕನ್ನು ತಿದ್ದುವುದರ ಜೊತೆಗೆ ಮನುಷ್ಯನ ಡೊಂಕನ್ನು ತಿದ್ದಲು ಸಹಕಾರಿಯಾಗಿವೆ. ಸೌಜನ್ಯ ತಾಳ್ಮೆ ದೊಡ್ಡ ಆಸ್ತಿಗಳು. ತಮ್ಮ ಜೀವನದಲ್ಲಿ ನಿಸ್ವಾರ್ಥ ಮನೋಭಾವಗಳನ್ನು ರೂಢಿಸ್ಕೊಳ್ಳಬೇಕು ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ದೂರದರ್ಶನ ವರದಿಗಾರರಾದ ಎಸ್ ಕಿನ್ನೂರೇಶ್ವ ಉಪಸ್ಥಿತರಿದ್ದರು. ರಾಷ್ಟ್ರೀಯ ಬಸವದಳದ ರಾಜ್ಯ ಉಪಾಧ್ಯಕ್ಷರಾದ ಕೆ ವಿ ರವಿಶಂಕರ್ ತಮ್ಮ ಮುಖ್ಯ ಅತಿಥಿಗಳ ನುಡಿಯಲ್ಲಿ ಬಸವಣ್ಣನ ಅನುಭವ ಚರ್ಚೆಯಾಗುತ್ತಿದ್ದ ವಿಷಯಗಳು ಇಂದಿನ ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಸ್ತ್ರೀ ಅಸಮಾನತೆ, ಜಾತಿ ಅಸಮಾನತೆ, ಲಿಂಗ ಬೇಧ ಅಸಮಾನತೆ ಎಲ್ಲರಲ್ಲಿ ಹೊರಟು ಹೋಗಿ ಸಮಾನತೆಯ ತತ್ವಗಳು ಪ್ರತಿಯೊಬ್ಬರಲ್ಲಿ ಹಾಸು ವಕ್ಕಾಗಬೇಕು.      

ಮುಖ್ಯ ಅತಿಥಿಗಳಾಗಿ ಆಗಮಿಸಿದ ಟಿ.ಮಲ್ಲಿಕಾರ್ಜುನ್ ತಮ್ಮ ಅತಿಥಿಗಳ ನುಡಿಯಲ್ಲಿ ವಚನಗಳು ಮನುಷ್ಯನ ಜೀವನಕ್ಕೆ, ನಾವು ನೀವೆಲ್ಲರೂ ಬಸವಣ್ಣನವರ ಆದರ್ಶಗಳನ್ನು ಪಾಲಿಸೋಣ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ ಹಂಪನ ಗೌಡ್ರು ಅಧ್ಯಕ್ಷೀಯ ನುಡಿಯಲ್ಲಿ ಇಂದಿನ ತಲೆಮಾರಿಗೆ ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರಬೇಕು. ವಚನ ಸಾಹಿತ್ಯ ಎಂತಹ ಕ್ರೂರಿಯನ್ನು ಮನುಷ್ಯನನ್ನಾಗಿ ಮಾಡುತ್ತದೆ ಎಂದು ನುಡಿದರು.  ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎನ್ ಡಿ ವೆಂಕಮ್ಮ, ಅಜಯ್ ಬಣಕಾರ್, ಅಬ್ದುಲ್ ಐ, ಪ್ರಭು ಸರ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು, ಸಾಹಿತ್ಯ ಅಭಿಮಾನಿಗಳು ಶರಣಪ್ಪ, ಚಾಂದ್ ಭಾಷ್, ಕೆ ವಿ ನಾಗರೆಡ್ಡಿ ಇತರರು  ಉಪಸ್ಥಿತರಿದ್ದರು. 


ಸುದ್ದಿ ಓದಿ