32 ಗ್ರಾಮಗಳಿಗೆ ಕೇಂದ್ರದ ಜಲಮಿಷನ್ ಯೋಜನೆ ಅನುಷ್ಠಾನ: ಶಾಸಕ ದುರ್ಯೋಧನ
ಚಿಕ್ಕೋಡಿ 02: ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಕರೋಶಿ ಜಿಪಂ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 6 ಕೋಟಿ ರೂ ಮಂಜೂರಾಗಿದೆ. ತಾಲೂಕಿನ 32 ಗ್ರಾಮಗಳಿಗೆ ಕೇಂದ್ರದ ಜಲಮಿಷನ್ ಯೋಜನೆ ಅನುಷ್ಠಾನವಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ತಾಲೂಕಿನ ಕರೋಶಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಅವರು, ರಾಯಬಾಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬರಪೂರ ಅನುದಾನ ನೀಡಿದೆ. ಬರುವ ಎರಡು ತಿಂಗಳ ಒಳಗಾಗಿ ಕ್ಷೇತ್ರದ ಎಲ್ಲ ರಸ್ತೆಗಳನ್ನು ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಕರೋಶಿ ಜಿಪಂ ಕ್ಷೇತ್ರ ವ್ಯಾಪ್ತಿಯ ಬಂಬಲವಾಡ-ಕರೋಶಿ ರಸ್ತೆ ಡಾಂಬರೀಕರಣಕ್ಕೆ 1 ಕೋಟಿ ರೂ. ಹತ್ತರವಾಟ-ನಾಯಿಂಗ್ಲಜ್ ಘಾಟವರೆಗೆ 3 ಕೋಟಿ ರೂ. ವಡ್ರಾಳ-ತೋರಣಹಳ್ಳಿ ರಸ್ತೆ ಕಾಮಗಾರಿಗೆ 2 ಕೋಟಿ ರೂ, ಒಟ್ಟು 6 ಕೋಟಿ ರೂ ಅನುದಾನ ಮಂಜೂರಾಗಿದೆ. ಟೆಂಡರ ಸಹ ಕರೆಯಲಾಗಿದ್ದು, ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕ್ಷೇತ್ರದ ರಸ್ತೆಗಳು ಹೈಟಿಕದಿಂದ ಕೂಡಿರಬೇಕು. ಜನರ ಸುಗಮ ಸಂಚಾರ ಒದಗಿಸಲು ಸರಕಾರದ ಮೇಲೆ ಒತ್ತಡ ಹಾಕಿ ಅನುದಾನ ಮಂಜೂರು ಮಾಡಿಸಿಕೊಂಡು ಬರಲಾಗಿದೆ. ತೋಟಪಟ್ಟಿಗಳಲ್ಲಿ ವಾಸ ಮಾಡುವ ಜನರ ಸಂಚಾರಕ್ಕೆ ರಸ್ತೆಗಳು ಅವಶ್ಯಕವಾಗಿದ್ದವು. ಆನರ ಬೇಡಿಕೆ ಅನುಸಾರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
32 ಗ್ರಾಮಗಳಲ್ಲಿ ಜಲಮಿಷನ್ ಯೋಜನೆ ಅನುಷ್ಠಾನ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಮಿಷನ್ 5050 ಯೋಜನೆಯಡಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಳ ಜೋಡನೆಗೆ 30 ಕೋಟಿ ರೂ ಮಂಜೂರಾಗಿದೆ. ಟೆಂಡರ ಪ್ರಕ್ರಿಯೆ ಅನುಸಾರ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಮಹೇಶ ಭಾತೆ. ಜಿಪಂ ಸದಸ್ಯೆ ಲಕ್ಷ್ಮೀ ಕುರಬರ. ಗ್ರಾಮ ಅಧ್ಯಕ್ಷ ಸಾವಿತ್ರಿ ಜೇಧೆ. ವಿಜಯ ಕೋಟಿವಾಲೆ. ರವಿ ಹಿರೇಕೊಡಿ. ಬಸು ಮಾಳಗೆ. ಸುರೇಶ ಕೇಸ್ತಿ. ಜ್ಞಾನೇಶ್ವರ ಖಾಡೆ.ಸಂಜು ಕಾಂಬಳೆ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಬಿ.ಬಿ.ಬೇಡಕಿಹಾಳೆ. ಎಸ್.ಎಸ್.ಹೊಸಮನಿ.ಎ.ಐ.ಕಾಕೋಳೆ ಮುಂತಾದವರು ಇದ್ದರು.