ಮಹಲಿಂಗಪುರ

ಮಂಜೂರಾದ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ : ಗುರುಲಿಂಗಪ್ಪ ಪೂಜಾರಿ

ಮಂಜೂರಾದ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ : ಗುರುಲಿಂಗಪ್ಪ ಪೂಜಾರಿ
ಮಹಾಲಿಂಗಪುರ : ಚಿಮ್ಮಡ ಗ್ರಾಮಪಂಚಾಯತಿಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ಅಧ್ಯಕ್ಷ ಗುರುಲಿಂಗಪ್ಪ ಪೂಜಾರಿ ಮಾತನಾಡಿದರು.

ಚಿಮ್ಮಡ ಗ್ರಾಮ ಪಂಚಾಯತಿ ಸಮಾನ್ಯ ಸಭೆ 

ಮಹಾಲಿಂಗಪುರ 23: ಗುರುಲಿಂಗಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಮೀಪದ ಚಿಮ್ಮಡ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಬುಧವಾರ ಮುಂಜಾನ ಸಾಮಾನ್ಯ ಸಭೆ ಜರುಗಿತು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು 2021-22 ಸಾಲಿನ ಮಹಾತ್ಮಾ ಗಾಂಧಿ ನರೇಗಾ ಕ್ರಿಯಾ ಯೋಜನೆಯ ಅಂದಾಜು 11ಲಕ್ಷ 90ಸಾವಿರ ರೂ ಗಳ ಒಟ್ಟು 7ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ, ಮೂತ್ರಾಲಯ ಮತ್ತು ಶೌಚಾಲಯಗಳ ನಿರ್ಮಾಣ, ಅಂದಾಜು 3ಲಕ್ಷ ರೂಗಳಲ್ಲಿ 2ಸರ್ಕಾರಿ ಶಾಲೆಯ ಮೈದಾನ ದುರುಸ್ಥಿ, ಮಳೆ ನೀರು ಕೋಯ್ಲು, 12 ಸಾವಿರ ರೂಗಳಲ್ಲಿ ಸರ್ಕಾರಿ ಶಾಲೆಯ ತೋಟ ನಿರ್ಮಾಣವಲ್ಲದೆ ಒಟ್ಟು 17 ಕಡೆಗಳಲ್ಲಿ ಅಂದಾಜು 13ಲಕ್ಷ 90ಸಾವಿರ ರೂಗಳಲ್ಲಿ ಚಿಮ್ಮಡ ಗ್ರಾಮದ ರೈತರ ತೋಟಗಳ ರಸ್ತೆಗಳ ರಿಪೇರಿ, ಗರಸಿನ ರಸ್ತೆ ಹಾಗೂ ಸಿ.ಸಿ ರಸ್ತೆಗಳ ನಿರ್ಮಾಣಕ್ಕಾಗಿ ಮತ್ತು 4 ಹೈಮಾಸ್ಟ್‌ ವಿದ್ಯುತ ಕಂಬಗಳಿಗಾಗಿ ಒಟ್ಟು 5 ಲಕ್ಷ ರೂಗಳು ಸರ್ಕಾರದ ಮಂಜೂರಾತಿ ದೊರಕಿದ್ದು ಬಂದಿದ್ದು ಗ್ರಾಮ.ಪಂಚಾಯತ ಸದಸ್ಯರು ತಮ್ಮ ತಮ್ಮ ವಾರ್ಡಗಳಲ್ಲಿ ಕಾಮಗಾರಿಗಳನ್ನು ಕೂಡಲೆ ಪ್ರಾರಂಭಿಸಬೇಕು ಎಂದರು.  

ಪಿಡಿಓ ಎ.ಎಸ್‌. ರೂಗಿ ಮಾತನಾಡುತ್ತಾ ಚಿಮ್ಮಡ ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯ ಹಿಂದಿರುವ ಕೆರೆಯನ್ನು ಅಭಿವೃದ್ಧಿ ( ಪಿಚ್ಚಿಂಗ್) ಮಾಡಲು 29ಲಕ್ಷ ರೂ, ಗ್ರಾಮದ ವಿವಿಧೆಡೆಗಳಲ್ಲಿ ಚರಂಡಿ ನಿರ್ಮಾಣಕ್ಕಾಗಿ 12ಲಕ್ಷ 50ಸಾವಿರ ರೂ, ಗ್ರಾಮದಲ್ಲಿ 15 ಕಿ.ಮಿ. ಸಸಿ ನೆಡಲು 1ಲಕ್ಷ 59ಸಾವಿರ ರೂ, ಪ್ರಭು ದೇವರ ಗುಡಿ ಆವರಣದಲ್ಲಿ ಬ್ಲಾಕ್ ಪ್ಲಾಂಟೇಶನ್ ಮಾಡಲು 10 ಲಕ್ಷ, ರೈತರ ಜಮೀನುಗಳಲ್ಲಿ ಅರಣ್ಯೀಕರಣಕ್ಕಾಗಿ ಸಸಿ ನೆಡುವುದಕ್ಕಾಗಿ 9ಲಕ್ಷ, ಗಾಂವಠಾಣ ಜಾಗೆ ಮತ್ತು ಸಮೂದಾಯ ಪ್ರಾಥಮಿಕ ಕೇಂದ್ರ, ಪಿ.ಕೆ.ಪಿ.ಎಸ್ ಆವರಣದಲ್ಲಿ ಮತ್ತು ವಿವಿಧ ಕಡೆಗಳಲ್ಲಿ ಸಸಿ ನೆಡಲು 10 ಲಕ್ಷ ರೂ ಗಳು, ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ 7 ಲಕ್ಷ ರೂ, ಗ್ರಾಮದ ವಿವಿಧೆಡೆಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣಕ್ಕಾಗಿ 10 ಲಕ್ಷ 26 ಸಾವಿರ ರೂ ಹೀಗೆ ಇನ್ನೂ ಹಲವಾರು ಕಾಮಗಾರಿಗಳಿಗೆ ಸರ್ಕಾರದ ಅನುಮತಿ ದೊರೆತಿದ್ದು ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೋಳಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಸದಸ್ಯ ಮಹಾಲಿಂಗ ಮಾಯನ್ನವರ ಸರ್ಕಾರಿ ಶಾಲೆಗಳಲ್ಲಿ ಶೌಚ್ಚಾಲಯ ಮತ್ತು ಮುತ್ರಾಲಯಗಳ ನಿರ್ಮಾಣಕ್ಕಾಗಿ ಬರಿ 1 ಲಕ್ಷ 70 ಸಾವೀರ ರೂ ಮಾತ್ರ ಮಂಜೂರಿಯಾಗಿದ್ದು ಈ ಹಣದಲ್ಲಿ ಶೌಚ್ಚಾಲಯ ಮತ್ತು ಮೂತ್ರಿಗಳನ್ನು ಅಷ್ಟು ಗುಣಮಟ್ಟದ್ದಾಗಿ ಮಾಡಲು ಸಾಧ್ಯವಿಲ್ಲ. ಈ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಹಣ ಬೇಕಾಗುತ್ತದೆ.ಇಲ್ಲವಾದರೆ ಈ ಕಾಮಗಾರಿಗಳು ಕಳಪೆ ಮಟ್ಟದ್ದಾಗುತ್ತವೆ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪಿ.ಡಿ.ಓ ರೂಗಿಯವರು ಉತ್ತರಿಸಿ ಬಂದ ಅನುದಾನದಲ್ಲಿ ಕಾಮಗಾರಿಗಳನ್ನು ಮುಗಿಸಿ, ಮಿಕ್ಕಿದ್ದನ್ನು ಹೆಚ್ಚಿನ ಅನುಮೋದನೆ ಪಡೆದು ಮಾಡೋಣವೆಂದರು.  

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಗ್ರಾ.ಪಂ ಉಪಾಧ್ಯಕ್ಷೆ ರೇಣುಕಾ ಮಾಯನ್ನವರ, ಸದಸ್ಯರಾದ ಮನೋಜ ಹಟ್ಟಿ,ಪೈಗಂಬರ ಮೋಪಗಾರ, ಪ್ರೇಮಾ ಗೋವಿಂದಗೋಳ, ಆಶಾ ಧಡೂತಿ, ಭಾರತಿ ಬರಗಲ, ಸಾಯವ್ವ ಮೇದಾರ, ಮಾಲಾ ಮೋಟಗಿ, ಪ್ರಕಾಶ ಪಾಟೀಲ, ಪದ್ಮಾವತಿ ಬಜಂತ್ರಿ, ನಾಗಪ್ಪ ಆಲಕನೂರ, ಕೇಶವಮೂರ್ತಿ ವಂದಾಲ, ಪರವ್ವ ಹಳೇಮನಿ, ಮಂಜುಳಾ ದೊಡವಾಡ, ರಮೇಶ ಮೇತ್ರಿ,ಆನಂದ ಕವಟಕೊಪ್ಪ,ಸಿದಿಗಿರೆಪ್ಪ ಜಾಗನೂರ, ದಾನವ್ವ ಪೂಜಾರ, ತುಕಾರಾಂ ದೊಡಮನಿ,ಬಾಳೇಶ ಬ್ಯಾಕೋಡ, ಬಂಗಾರೆವ್ವ ಜಾಲಿಕಟ್ಟಿ, ಯಮನಪ್ಪ ಮಾದರ, ಚನ್ನಪ್ಪ ಪೂಜಾರಿ, ಪರವ್ವ ಮಠಪತಿ, ಯಮನವ್ವ ದೊಡವಾಡ ಮತ್ತು ಪ್ರಭು ಚಿಮ್ಮಡ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ