ಬಳ್ಳಾರಿ

ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆ ನೀಡಿ: ಕಲ್ಡಿ ವಲಿಸಾಬ್

ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆ ನೀಡಿ: ಕಲ್ಡಿ ವಲಿಸಾಬ್

ಲೋಕದರ್ಶನ ವರದಿ 

ಕಂಪ್ಲಿ 28: ಮೈಸೂರಿನಲ್ಲಿ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರದ ಆಪರಾಧಿಗಳಿಗೆ ತ್ವರಿತವಾಗಿ ಮಾದರಿ ಶಿಕ್ಷೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಲ್ಡಿ ವಲಿಸಾಬ್ ಒತ್ತಾಯಿಸಿದರು. 

ಪಟ್ಟಣದಲ್ಲಿ ಶನಿವಾರ ಪತ್ರಿಕಾ ಹೇಳಿಕೆ ನೀಡಿ, ಮಹಿಳೆ, ಮಕ್ಕಳ ಮೇಲಿನ ಆತ್ಯಾಚಾರ, ಹಲ್ಲೆ, ಶೋಷಣೆ ಎಸಗಿದವರಿಗೆ ತ್ವರಿತ ಶಿಕ್ಷೆಯಾಗಬೇಕು. ಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜು, ಹಾಸ್ಟೇಲ್‌ಗಳಲ್ಲಿನ ಹೆಣ್ಣು ಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಮಹಿಳಾ ನಿರ್ಲಕ್ಷ್ಯ ಧೋರಣೆ ಹೇಳಿಕೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದಾಜ್ಲೆ ಅವರಿಗೆ ಶೋಭೆ ತರುವಂತಹದ್ದಲ್ಲ. ಸಚಿವ ಸ್ಥಾನದಲ್ಲಿರುವವರು ತಮ್ಮ ಮಾತುಗಳ ಮೇಲೆ ನಿಗಾಯಿರಬೇಕು. ಹೈದ್ರಾಬಾದಿನಲ್ಲಿ ಜರುಗಿದ ವೈದ್ಯೆಯ ಅತ್ಯಚಾರ ಪ್ರಕರಣದಲ್ಲಿ ಪೊಲೀಸರು ತೋರಿದ ದಿಟ್ಟತನ ಮಾದರಿಯಾಗಿದ್ದು ಇದೇ ಕ್ರಮ ಅನುಸರಿಸಲಿ ಎಂದರು. 


ಸುದ್ದಿ ಓದಿ