ಅಕ್ರಮ ಕಳ್ಳಬಟ್ಟಿ ಅಡ್ಡೆ, ಮನೆ ಮೇಲೆ ಪೊಲೀಸರ ದಾಳಿ : 12 ಲಕ್ಷದ 5.7 ಸಾವಿರ ಲೀಟರ್‌ ಸಾರಾಯಿ ವಶ

ಅಕ್ರಮ ಕಳ್ಳಬಟ್ಟಿ ಅಡ್ಡೆ, ಮನೆ ಮೇಲೆ ಪೊಲೀಸರ ದಾಳಿ : 12 ಲಕ್ಷದ 5.7 ಸಾವಿರ ಲೀಟರ್‌ ಸಾರಾಯಿ ವಶ

ಬೆಳಗಾವಿ : ಗುಡ್ಡುಗಾಡ ಪ್ರದೇಶದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಿದ್ದ ಅಡ್ಡೆ ಮತ್ತು ಮನೆಗಳ ಮೇಲೆ ಬಹುದೊಡ್ಡ ದಾಳಿ ಮಾಡಿರುವ ಬೆಳಗಾವಿ ಪೊಲೀಸರು 12 ಲಕ್ಷ ಮೌಲ್ಯದ 5.7 ಸಾವಿರ ಲೀಟರ್ ಸಾರಾಯಿ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


     ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಡಿಸಿಪಿ ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ 200 ಜನ ಪೊಲೀಸ್ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. 

    200 ಲೀಟರ್ ಕಳ್ಳಬಟ್ಟಿ ಇರುವ 26 ಬಾರಲ್ ಗಳು ಮತ್ತು 30 ಲೀಟರ್ ಇರುವ 17 ಬಾರಲ್  ಕಳ್ಳಬಟ್ಟಿ ಸಾರಾಯಿ ಹೀಗೆ ಒಟ್ಟು 5700 ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ. ಇದರ ಮೊತ್ತ ಅಂದಾಜು 12 ಲಕ್ಷ ರೂಪಾಯಿ ಮೌಲ್ಯದ ಕಳ್ಳಬಟ್ಟಿ ಸಾರಾಯಿ ಇದಾಗಿದೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


   ಶನಿವಾರ ಬೆಳ್ಳಂಬೆಳ್ಳಿಗೆ ಬೆಳಗಾವಿ ಪೊಲೀಸರು ಬಹುದೊಡ್ಡ ಕಾರ್ಯಚರಣೆ ನಡೆಸಿದ್ದು, ಅಕ್ರಮವಾಗಿ ಸಂಗ್ರಹಸಿದ್ದ ಮನೆ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ.

ಪೊಲೀಸ ಆಯುಕ್ತರ ಹೇಳಿಕೆ ; 

   ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ, ಈ ದಾಳಿಯಲ್ಲಿ ಒಟ್ಟು 5700 ಲೀಟರ್ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದೆವೆ. 

  ಕೆಲವು ಮನೆಗಳ ಮೇಲೂ ಸಹ ದಾಳಿ ಮಾಡಿ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದೆವೆ. ಒಂದು ವಾರದ ಹಿಂದೆ ನಮಗೆ ಅಕ್ರಮ ಕಳ್ಳಬಟ್ಟಿ ಬಗ್ಗೆ ಮಾಹಿತಿ ಬಂದಿತ್ತು. ಆದರೆ ಇಂದು ಕಾರ್ಯಾಚರಣೆ ಮಾಡಿದ್ದೆವೆ. 

    ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತೇವೆ. ಕಳ್ಳಬಟ್ಟಿ ತಯಾರಕರು ಪೊಲೀಸರು ಬಂದ ತಕ್ಷಣ ಎಲ್ಲರೂ ಓಡಿ ಹೋಗಿದ್ದಾರೆ. ದಾಳಿ ಕಾಲಕ್ಕೆ ಒಬ್ಬ ಆರೋಪಿ ಮಾತ್ರ ಸಿಕ್ಕಿದ್ದಾನೆ, ಕೆಲವು ದಿನಗಳಿಂದ ಇಲ್ಲಿ ಧಂಧೆ ನಡೆಯುತ್ತಿದೆ. ಇನ್ನೂಳಿದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತೇವೆ ಎಂದು ಆಯುಕ್ತ ಸಿದ್ದರಾಮಪ್ಪ ಅವರು ತಿಳಿಸಿದ್ದಾರೆ.

 

ಸುದ್ದಿ ಓದಿ