ಮಹಲಿಂಗಪುರ

ಸಂಚಾರಿ ನಿಯಮ ಪಾಲಿಸದಿದ್ದರೆ ಪ್ರಾಣಕ್ಕೆ ಸಂಚಕಾರ: ಗಚ್ಚಣ್ಣವರ

ಸಂಚಾರಿ ನಿಯಮ ಪಾಲಿಸದಿದ್ದರೆ ಪ್ರಾಣಕ್ಕೆ ಸಂಚಕಾರ: ಗಚ್ಚಣ್ಣವರ

ಮಹಾಲಿಂಗಪುರ 25: ಸಂಚಾರಿ ನಿಯಮ ಪಾಲಿಸದಿದ್ದರೆ ಪ್ರಾಣಕ್ಕೆ ಸಂಚಕಾರ ಎಂದು ಆರಕ್ಷಕ ಸಿಬ್ಬಂದಿ ವೈ.ವೈ.ಗಚ್ಚಣ್ಣವರ ಹೇಳಿದರು. ಸ್ಥಳೀಯ ಕೆಎಲ್‌ಇ ಸಂಸ್ಥೆಯ ಪಪೂ ಕಾಲೇಜಿನಲ್ಲಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜೀವನದಲ್ಲಿ ನೈತಿಕ ನಿಯಮ ಮತ್ತು ರಸ್ತೆಯಲ್ಲಿ ಸಂಚಾರ ನಿಯಮ ಪಾಲಿಸಿದರೆ ಜೀವನ ಸುರಕ್ಷಿತ ಎಂದರು. 

ವಾಹನವನ್ನು ರಸ್ತೆಗಿಳಿಸುವ ಮುನ್ನ ಅದರ ನೋಂದಣಿ, ವಿಮೆ ಮತ್ತು ಚಾಲನಾ ಪರವಾಣಗಿ ಪತ್ರ ಕಡ್ಡಾಯವಾಗಿಟ್ಟುಕೊಂಡಿರಬೇಕು. ಯುವಕರು ವ್ಹೀಲಿಂಗ್ ಎಂಬ ಕ್ರೇಜ್ ನಲ್ಲಿ ಮೈಮರೆತು ಅಪಘತಗಳಿಗೆ ಅವಕಾಶ ನೀಡಬಾರದು. ಪಾದಚಾರಿಗಳು ಸುರಕ್ಷೆ ದೃಷ್ಟಿಯಿಂದ ಪುಟ್‌ಪಾತ್‌ನಲ್ಲೇ ಸಂಚರಿಸಬೇಕು. ಇಂದಿನ ಮೋಸದ ಜಗತ್ತಿನಲ್ಲಿ ಯುವಕ-ಯುವತಿಯರು ನೈತಿಕತೆಯ ಚೌಕಟ್ಟನ್ನು ಮೀರಬಾರದು, ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳಬಾರದು ಎಂದರು.  

ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಪಟ್ಟಣದಲ್ಲಿ ಒತ್ತುವರಿಯಾದ ಪುಟ್‌ಪಾತ್ ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳ ಪರವಾಗಿ ಮನವಿ ಮಾಡಿದರು. ನಂತರ ನಡೆದ ಸಂವಾದದಲ್ಲುಇ ವಿದ್ಯಾರ್ಥಿಗಳು ಕಾನೂನು ಮತ್ತು ಅಪರಾಧಗಳ ಕುರಿತು ಕೇಳಿದ ಪ್ರಶ್ನೆಗೆ ಪೊಲೀಸ್ ಸಿಬ್ಬಂದಿ ಸಮಾಧಾನಕರ ಉತ್ತರ ನೀಡಿದರು. ಪ್ರಾಚಾರ್ಯ ಎಲ್‌.ಬಿ.ತುಪ್ಪದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಆರ್‌.ಎಸ್‌.ಕಲ್ಲೋಳಿ, ಬಿ.ಬಿ.ಯಲ್ಲಟ್ಟಿ, ಬಿ.ಎನ್‌.ಹಂದಿಗುಂದ, ಬಿ.ಎಂ.ಸಿದ್ನಾಳ ಮತ್ತಿತರರು ಇದ್ದರು. 


ಸುದ್ದಿ ಓದಿ