ನಾಡದ್ರೋಹಿಗಳ ಕರಾಳ ದಿನಕ್ಕೆ ಅನುಮತಿ ನೀಡಿದರೆ ರಾಜ್ಯವಿಡಿ ಹೋರಾಟ : ಕರವೇ ಎಚ್ಚರಿಕೆ
ಬೆಳಗಾವಿ : ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ನಾಡದ್ರೋಹಿ ಎಮ್‌ಇಎಸ್ ಪುಂಡರಿಗೆ ಕರಾಳ ದಿನ ಆಚರಣೆಗೆ ಅನುಮತಿ ನೀಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಪದಾಧಿಕಾರಿಗಳು ಗುರುವಾರ ಬೆಗಾವಿ ಪೊಲೀಸ ಆಯುಕ್ತರ ಕಚೇರಿ ಎದರು ಪ್ರತಿಭಟನೆ ನಡೆಸಿದರು.
ಗುರುವಾರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಪೊಲೀಸ ಆಯುಕ್ತರ ಕಚೇರಿ ಎದುರಲ್ಲಿ ಜಮಾವಣೆಗೊಂಡ ಪದಾಧಿಕಾರಿಗಳು ಕೆಲಹೊತ್ತು ಪ್ರತಿಭಟನೆ ನಡೆಸಿ, ಕನ್ನಡಗರು ಎಲ್ಲರು ಸೇರಿ ಕರ್ನಾಟಕ ರಾಜೋತ್ಸವವನ್ನು ಆಚರಣೆ ಮಾಡುವ ಸಂದರ್ಭದಲ್ಲಿ ರಾಜೋತ್ಸವದ ವಿರುದವಾಗಿ ನಾಡದ್ರೋಹಿ ಎಮ್‌ಇಎಸ್ ಪುಂಡರು ಕರಾಳ ದಿನಾಚರಣೆ ಆಚರಣೆ ಮಾಡುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಇದ್ದುಕೊಂಡು ಕರ್ನಾಟಕದ ಅನ್ನ ಉಂಡು ನಾಡಿಗೆ ದ್ರೋಹ ಮಾಡುತ್ತಿರುವ ನಾಡದ್ರೋಹಿಗಳಿಗೆ ಯಾವದೇ ಕಾರಣಕ್ಕೆ ಕರಾಳ ದಿನಾಚರಣೆಗೆ ಅವಕಾಶ ನೀಡಿದಂತೆ ಕರವೇ ಪದಾಧಿಕಾರಿಗಳು ಒತ್ತಾಯಿಸಿದರು. ಒಂದು ವೇಳೆ ಅವಕಾಶ ನೀಡಿದ್ದಲ್ಲಿ ಮುಂದೆ ಆಗುವ ಘಟನೆಗಳಿಗೆ ಜಿಲಾಡಳಿತ ಹೊಣೆಯಾಗಬೇಕಾಗುತ್ತೆ ಎಂದು ಎಚ್ಚರಿಸಿದರು.
ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ದ್ರೋಹ ಬಗೆಯುವ ಕರಾಳ ದಿನಾಚರಣೆಗೆ ಈ ವರ್ಷ ಯಾವುದೇ ಕಾರಣಕ್ಕೂ ಬೆಳಗಾವಿ ನಗರ ಪೋಲೀಸ್ ಇಲಾಖೆಯು ಅನುಮತಿ ನೀಡಬಾರದು. ಅನುಮತಿ ನೀಡುವದಿಲ್ಲ ಎಂದು ಸುಳ್ಳು ಹೇಳಿ ಪೋಲೀಸ್ ಇಲಾಖೆಯು ಮದ್ಯರಾತ್ರಿ ಅನುಮತಿ ನೀಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತದೆ. ಅದೇ ರೀತಿ ಈ ಬಾರಿ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಈ ಕುರಿತು ನಾವು ರಾಜ್ಯದ ಗೃಹ ಮಂತ್ರಿಗಳಿಗೂ ಮತ್ತು ಮುಖ್ಯಮಂತ್ರಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ. ಕನ್ನಡಿಗರ ಮನವಿಯನ್ನು ದಿಕ್ಕರಿಸಿದರೆ ಸರ್ಕಾರದ ವಿರುದ್ಧ ಮತ್ತು ಪೋಲೀಸ್ ಇಲಾಖೆಯ ಕನ್ನಡ ವಿರೋಧಿ ಧೋರಣೆಯ ವಿರುದ್ದ ಕರವೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಾಜ್ತೋತ್ಸವದ ದಿನದಂದು ಕರಾಳ ದಿನಾಚರಣೆ ಮಾಡುತ್ತೇವೆ ಎಂದು ತಮ್ಮ ಬಳಿ ಬರುವ ಎಂಈಎಸ್ ನಾಯಕರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಅವರನ್ನು ಮುಂಜಾಗ್ರತವಾಗಿ ಬಂಧಿಸುವ ಮೂಲಕ ಕನ್ನಡದ ನೆಲದಲ್ಲಿ ಕನ್ನಡದ ಹಿತ ಕಾಯಬೇಕೆಂದು ವಿನಂತಿಸಿಕೊAಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ, ಜಿಲ್ಲಾ ಉಪಾಧ್ಯಕ್ಷ ಗಣೇಶ ರೋಕಡೆ, ಧಶರಥ ಬನೋಶಿ, ಬಾಳು ಜಡಗಿ, ಹೋಳೆಪ್ಪಾ ಸುಲಧಾಳ, ಸತೀಶ ಗುಡದವರ, ರಮೇಶ್ ಯರಗಣ್ಣವರ, ರುದ್ರಗೌಡ ಪಾಟೀಲ್, ಅಭಿಷೇಕ ಅಗಸಗಿ, ಅರ್ಜುನ ಕಾಂಬಳೆ, ಲೋಕೇಶ್ ರಾಠೋಡ, ಇಸ್ಮಾಯಿಲ್ ಮುಲ್ಲಾ, ಶ್ರೀಧರ್ ಕುರುಬರ, ಮಡಿವಾಳಿ ಗುಣಪ್ಪಾಚಿ, ರೋಖಾ ಲೋಕರಿ, ಮಹಾದೇವಿ ಕುರಬೇಟ, ಮಧು ಇಟಗಿ, ರೂಪಾಲಿ ಬಾರಿಗಡ್ಡಿ ಇವರುಗಳು ಉಪಸ್ಥಿತರಿದ್ದರು.