ಹಗರಿಬೊಮ್ಮನಹಳ್ಳಿ

ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ: ಅಶೋಕ ಭೀಮಾನಾಯ್ಕ

ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ: ಅಶೋಕ ಭೀಮಾನಾಯ್ಕ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 29: ಯುವಕರು ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಅಶೋಕ ಭೀಮಾನಾಯ್ಕ ಹೇಳಿದರು. 


ತಾಲೂಕಿನ ಸಿಗೇನಹಳ್ಳಿ-1 ಗ್ರಾಮದಲ್ಲಿ ನಡೆದ ವಾಲಿಬಾಲ್ ಟೂರ್ನಿಯ ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಈ ಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಖೋಖೋ ಪಂದ್ಯಾಟಗಳಲ್ಲಿ ವಿಶೇಷ ಚಾಕಚಕ್ಯತೆಯುಳ್ಳ ಆಟಗಾರರು ಇದ್ದಾರೆ. ಕ್ರೀಡೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ಆರೋಗ್ಯದಲ್ಲಿ ಸಮತೋಲನ ಹೊಂದಬಹುದು. ಕ್ಷೇತ್ರದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಭಾಗದ ಹೋಬಳಿ ಪ್ರದೇಶದಲ್ಲಿ ಹೊನಲು ಬೆಳಕಿನ ಖೋಖೋ ಪಂದ್ಯಾಟವನ್ನು ಶೀಘ್ರದಲ್ಲಿ ಏರಿ​‍್ಡಸಲಾಗುವುದು. ಯುವಕರು ಕ್ರೀಡೆಗಳ ಮೂಲಕ ಚಟುವಟಿಕೆಯಿಂದ ಇರಲಿ ಎಂಬುವ ಉದ್ದೇಶದಿಂದ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು. ಟೂರ್ನಿಯಲ್ಲಿ  15 ಗ್ರಾಮಗಳ ವಾಲಿಬಾಲ್ ತಂಡಗಳು ಭಾಗವಹಿಸದ್ದವು. ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್, ಪಿಕಾರ್ಡ್‌ ಬ್ಯಾಂಕ್ ನಿರ್ದೇಶಕ ಬಿ.ದೇವಿಪ್ರಸಾದ ಮಾತನಾಡಿದರು. 


ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಮೈಲಾರ ಶಿವಕುಮಾರ, ಹೆಚ್‌.ದೊಡ್ಡಬಸಪ್ಪ, ಕಾಶೀಂಸಾಬ್, ಗೌರಜ್ಜನವರ ಗೀರೀಶ್, ಮೋದಿನ್‌ಸಾಬ್, ಯುವ ಮುಖಂಡರಾದ ದೌಲ್‌ಸಾಹೇಬ್, ನಬೀಸಾಬ್, ಸೈದಾವಲಿ, ಸಿದ್ದಕಲಿ, ಹೆಚ್‌.ದೊಡ್ಡಬಸಪ್ಪ, ಸುಭಾನಿ, ಹೊನ್ನರಾಜು, ಬೀಬಿಜಾನ್, ಮೆಹಬೂಬ್‌ಭಾಷ, ರಾಜಸಾಹೇಬ್ ಇತರರಿದ್ದರು. 


ಸುದ್ದಿ ಓದಿ