ಹುಕ್ಕೇರಿ

ಇಬ್ರಾಹಿಮ್ ಖಾಜಿ ನಿಧನ

ಇಬ್ರಾಹಿಮ್ ಖಾಜಿ ನಿಧನ

ಹುಕ್ಕೇರಿ ಅಕ್ಟೋಬರ್ 5 -- ಇಲ್ಲಿಯ ಮುಸ್ಲಿಮ್ ಸಮಾಜದ ಗಣ್ಯರೂ, ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದ ಇಬ್ರಾಹಿಮ್ ಖಾಜಿ -- ೬೯ , ಅವರು ತೀವ್ರ ಹೃದಯಾಘಾತದಿಂದ ರವಿವಾರ ರಾತ್ರಿ ನಿಧನರಾದರು.

ಅವರಿಗೆ ಇಬ್ಬರು ಪುತ್ರರು,ಪುತ್ರಿಯರು ಇರುವರು.ಅವರ ಅಂತ್ಯಕ್ರಿಯೆಯು ಇಂದು ಮುಂಜಾನೆ ಜರುಗಿತು.ಸೌಮ್ಯ ಸ್ವಭಾವದ,ಸಜ್ಜನರಾಗಿದ್ದ ಅವಕು  ಪಟ್ಟಣದಲ್ಲಿ ಮಾಮು ಎಂದೇ ಚಿರಪರಿಚಿತರಾಗಿದ್ದ ಅವರು ಹಳೇ ಬಸ್ ನಿಲ್ದಾಣದ ಬಳಿ ಚಪ್ಪಲಿ,ಬೂಟ ಅಂಗಡಿ ಹೊಂದಿದ್ದರು.

ಇಬ್ರಾಹಿಮ್ ಖಾಜಿ ಅವರ ನಿಧನಕ್ಕೆ ಕಾಂಗ್ರೆಸ್ ಹುಕ್ಕೇರಿ ಘಟಕದ ಅಧ್ಯಕ್ಷ ಅಶೋಕ ಅಂಕಲಿ,  ಪ್ರಮುಖರಾದ ಡಾ.ಎಸ್.ಕೆ.ಮಕಾನದಾರ,ಎಸ್. ಆರ್.ಕರೋಶಿ,ರವಿ ಕರಾಳೆ  ಪ್ರಕಾಶ ದೇಶಪಾಂಡೆ,ಡಿ.ಆರ್ ಖಾಜಿ,ಇರ್ಶಾದ ಮೊಕಾಶಿ,ಸಲೀಮ ಕಳಾವಂತ ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ