ಐಪಿಎಲ್ 2022: ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಅಡ್ಡಿಯಾಗುತ್ತಾ ಮಳೆ?
ಕೋಲ್ಕತ್ತಾ: ಮೇ 24: ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್
ರಾಯಲ್ಸ್ ನಡುವಿನ IPL 2022 ಕ್ವಾಲಿಫೈಯರ್ 1 ಪಂದ್ಯಕ್ಕೆ ಮಳೆ ಅಡ್ಡಿಯಾಗುವ
ಆತಂಕವಿದೆ. ಟಾಸ್ ಹಾಕಲು ಕೆಲವೇ ಗಂಟೆ ಬಾಕಿಯಿರುವಾಗ ಕೋಲ್ಕತ್ತಾದಲ್ಲಿ ಮಳೆಯಾಗುತ್ತಿದ್ದು ಆಟಗಾರರು
ಚಿಂತೆಯಲ್ಲಿದ್ದಾರೆ. ತಾವು ತಂಗಿರುವ ಹೋಟೆಲ್ ನಿಂದ ರಾಜಸ್ಥಾನ್ ರಾಯಲ್ಸ್ ತಮ್ಮ ಮಳೆ ಬೀಳುತ್ತಿರುವ
ವೀಡಿಯೊವನ್ನು ಸೆರೆಹಿಡಿದು ಹಂಚಿಕೊಂಡಿದೆ. ಇದರಿಂದ
ಕ್ರಿಕೆಟ್ ಅಭಿಮಾನಿಗಳು ಆತಂಕದಲ್ಲಿದ್ದು ಮಳೆ ನಿಲ್ಲುವಂತೆ ಪ್ರಾರ್ಥಿಸಿದ್ದಾರೆ.
ಅಕ್ಯುವೆದರ್ ವೆಬ್ಸೈಟ್ ಪ್ರಕಾರ ಇಂದು ಮಧ್ಯಾಹ್ನ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ರಾತ್ರಿ 8 ಗಂಟೆಗೆ (IST) ಗುಡುಗು ಸಹಿತ ಮೋಡ ಕವಿದ ವಾತಾವರಣ ಇರಲಿದೆ ಎಂದು ವೆಬ್ಸೈಟ್ ಹೇಳುತ್ತದೆ.
ಮಳೆಯಾದಲ್ಲಿ ನಿಗದಿತ ಸಮಯದಲ್ಲಿ ತಂಡಗಳು ಆಟವಾಡಲು ಸಾಧ್ಯವಿಲ್ಲ. ನಂತರ ಸೂಪರ್ ಓವರ್ ಎರಡು ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತದೆ.
ಒಂದು ವೇಳೆ ಸೂಪರ್ ಓವರ್ ಕೂಡ ಸಾಧ್ಯವಾಗದಿದ್ದಲ್ಲಿ, ಲೀಗ್ ಹಂತವು ಆದ್ಯತೆ ಪಡೆಯುತ್ತದೆ ಮತ್ತು ವಿಜೇತರನ್ನು ನಿರ್ಧರಿಸುತ್ತದೆ.
ಅಗತ್ಯವಿದ್ದಲ್ಲಿ ಪ್ಲೇಆಫ್ ಪಂದ್ಯದ ಓವರ್ಗಳ ಸಂಖ್ಯೆಯನ್ನು ಪ್ರತಿ ತಂಡಕ್ಕೂ ಐದು ಓವರ್ಗಳವರೆಗೆ ಇಳಿಸಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗುತ್ತೆ. ಎಲಿಮಿನೇಟರ್ ಮತ್ತು ಪ್ರತಿ ಕ್ವಾಲಿಫೈಯರ್ ಪ್ಲೇಆಫ್ ಪಂದ್ಯಗಳಿಗೆ, ಮೂಲ ದಿನದ ಹೆಚ್ಚುವರಿ ಸಮಯದ ಅಂತ್ಯದ ವೇಳೆಗೆ ಐದು ಓವರ್ ಗಳ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ, ತಂಡಗಳು ಅನುಮತಿಸಿದಲ್ಲಿ ಸೂಪರ್ ಓವರ್ ಅನ್ನು ಅನ್ನು ಆಡುತ್ತವೆ. ಸೂಪರ್ ಓವರ್ ಸಾಧ್ಯವಾಗದಿದ್ದಲ್ಲಿ ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಟೇಬಲ್ನಲ್ಲಿ ಗರಿಷ್ಠ ಸ್ಥಾನ ಗಳಿಸಿದ ತಂಡವನ್ನು ಸಂಬಂಧಿತ ಪ್ಲೇಆಫ್ ಪಂದ್ಯ ಅಥವಾ ಫೈನಲ್ನ ವಿಜೇತ ಎಂದು ಘೋಷಿಸಲಾಗುತ್ತದೆ.
ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 2 ಮತ್ತು ಫೈನಲ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.