ಮುದ್ದೆಬಿಹಾಲ್

ಕಾಂಗ್ರೆಸ್ ಪಕ್ಷದ ಟಿಕೇಟ್ ನನಗೆ ಸಿಗಲಿದೆ: ಸೇವಕ ಮಲ್ಲಿಕಾರ್ಜುನ

ಕಾಂಗ್ರೆಸ್ ಪಕ್ಷದ ಟಿಕೇಟ್ ನನಗೆ ಸಿಗಲಿದೆ: ಸೇವಕ ಮಲ್ಲಿಕಾರ್ಜುನ

ಮುದ್ದೇಬಿಹಾಳ: ನಾನೂ ಕೂಡ ಮೂಲ ಕಾಂಗ್ರೇಸ್ಸಿನವನು ಮಾತ್ರವಲ್ಲದೇ ಹಿಂದುಳಿದ ವರ್ಗದವನಾಗಿದ್ದು ಸಧ್ಯ 2023ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪಧರ್ಿಸಲು ಎಲ್ಲ ಅರ್ಹತೆಹೊಂದಿದವನಾಗಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ನನಗೆ ಸಿಗಲಿದೆ ಎಂಬದು ವಿಶ್ವಾಸವಿದೇ ಎಂದು ಸಮಾಜ ಸೇವಕ ಮಲ್ಲಿಕಾಜರ್ುನ ಮದರಿ ಹೇಳಿದರು.

ತಾಲೂಕಿನ ಸರೂರು ಗ್ರಾಮದಲ್ಲಿ ಹಾಲುಮತ ಗುರುಪೀಠ ರೇವಣ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳುವ ಮೂಲಕ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ಮತಕ್ಷೇತ್ರದಲ್ಲಿ ಈ ಬಾರಿ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಇಲ್ಲಿಯ ತನಕವೂ ಮೇಲ್ವರ್ಗದವರೇ ಈ ಮತಕ್ಷೇತ್ರದಲ್ಲಿ ಹೆಚ್ಚುಕಾಲ ಆಡಳಿತ ನಡೆಸುತ್ತಲೆ ಬಂದಿದ್ದಾರೆ ಕಾರಣ ಈ ಬಾರಿ ಮತಕ್ಷೇತ್ರದ ಬಹುತೇಕ ಎಲ್ಲ ಹಿಂದುಳಿದ ವರ್ಗದ ಮತದಾರರು ಹಾಗೂ ಮುಖಂಡರು ಈ ಬಾರಿ ಚುನಾವಣೆಯಲ್ಲಿ ತಾವು ಸ್ಪಧರ್ಿಸಿದರೇ ಖಂಡಿತ ನಿಮಗೆ ಬೆಂಬಲಿಸಿ ಗೆಲ್ಲಿಸುವುದಾಗಿ ಒತ್ತಾಯಿಸುತ್ತಿದ್ದಾರೆ. 

ಈ ನಿಟ್ಟಿನಲ್ಲಿ ನಾನು ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಅದರಂತೆ ಕಳೆದ ತಿಂಗಳ ಯತಾಲೂಕಿನ ಬಹುತೇಕ ಎಲ್ಲ ಹಿಂದುಳಿದ ಪ್ರಭಲ ನಾಯಕರು ಹಾಗೂ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಮಾಜಿಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರವನ್ನು ಭೇಟಿ ಮಾಡಿ ಟಿಕೇಟ್ ನೀಡುವಂತೆ ಒತ್ತಾಯಿಸಲಾಗಿದೆ ಅವರೂ ಕೂಡ ಸಮ್ಮತಿಸಿದ್ದಾರೆ ಮಾತ್ರವಲ್ಲದೇ ಸವರ್ೇ ನಡೆಸಲಾಗುವುದು ಆ ವೇಳೆ ಯಾರು ಅರ್ಹರು ಯಾರನ್ನು ಜನರು ಬೆಂಬಲಿಸುತ್ತಾರೆ ಎಂಬುದನ್ನು ಮಾಹಿತಿ ಪಡೆದು ಟಿಕೇಟ ಘೋಷಣೆ ಮಾಡುವುದಾಗಿ. ನಮ್ಮನ್ನು ಕೆಲವರು ಬಿಜೆಪಿ ಬಿ ಟೀಮ್ ಎಂದು ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಾರೆ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸದೇ ಇರೋದೇ ಒಳ್ಳೆಯದು ಎಂದು ಹೇಳಿದ್ದಾರೆ.

ಕಾರಣ ಇಂದಿನಿಂದಲೇ ಹಾಲುಮತ ಗುರುಪೀಠ ರೇವಣಸಿದ್ದೇಶ್ವರ ದೇವಸ್ಥಾನದಿಂದ  ಮತಕ್ಷೇತ್ರದ ಮತದಾರರ ಬಳಿ ತೆರಳಿ ಚುನಾವಣಾ ಪ್ರಚಾರ ಅವರ ಅಭಿಪ್ರಾಯದಂತೆ ಮುಂದಿನ ನಡೆ ಪ್ರದರ್ಶಿಸಲಾಗುವುದು ಎಂದರು.

ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ ಹಾಗೂ ಹಾಲುಮತ ಸಮಾಜದ ಹಿರಿಯ ಮುಖಂಡ ಬಿ ಜಿ ಜಗ್ಗಲ ಅವರು ಮಾತನಾಡಿ ಸ್ವಾತಂತ್ರ್ಯ ಬಂದಾಗಿನಿಂದ ಈ ಮತಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು ರಾಜಕೀಯವಾಗಿ ಮೇಲೆ ಬರಬಾರದು ಎಂಬ ಉದ್ದೇಶದಿಂದ ಮೇಲ್ವರ್ಗದವರು ನಮ್ಮವರನ್ನೇ ನಮ್ಮಿಂದ ಒಡೆದು ತಾವು ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಲೆ ಅಧಿಕಾರ ಹಿಡಿಯುತ್ತಲೇ ಬಂದಿದ್ದಾರೆ. ಹಾಗಾಗಿ ಹಿಂದುಳಿದ ಸಮಾಜದವರು ಇಲ್ಲಿತನಕ ಯಾರೂ ಕೂಡ ಒಬ್ಬರೂ ಎಂ ಎಲ್ ಎ ಆಗಲು ಸಾಧ್ಯವಾಗಿಲ್ಲ ಇನ್ನುಮುಂದೆ ಯಾವೂದೇ ಕಾರಣಕ್ಕೂ  ಹಾಗಾಗಲು ಬಿಡುವುದಿಲ್ಲ ಸಧ್ಯ ಮತಕ್ಷೇತ್ರದಲ್ಲಿ ಎಲ್ಲ ಹಿಂದುಳಿದ ಸಮಾಜದವರು ಒಗ್ಗಟ್ಟಾಗಿ ಮಲ್ಲಿಕಾಜರ್ುನ ಮದರಿಯನ್ನು ಗೆಲ್ಲಿಸಲು ತಿಮರ್ಾನಿಸಿದ್ದಾರೆ ಎಂದರು.

ಈ ವೇಳೆ ಸರೂರ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು, ರೇವಣಯ್ಯ ಗುರುಗಳು, ಸಿದ್ದಯ್ಯ ಗುರುವಿನ, ಸಿದ್ದಯ್ಯ ಗುರುವಿನ ಮೇಲಿನಮಠ, ಶಿವಯ್ಯ ಗುರುವಿನ, ಗುರುಸಿದ್ದಯ್ಯಾ ಗುರುವಿನ, ಮಲ್ಲಿಕಾಜರ್ುನ ಗುರುವಿನ, ಸಿ ಎಂ ಶಿರೋಳ,  ಪಕೀರಪ್ಪ ಚಲವಾದಿ, ಪ್ರೇಮಶಿಂಗ ಚವ್ಹಾಣ,  ವಲ್ಲಿಸಾಬ ನಾಯ್ಕೋಡಿ, ಪರಶುರಾಮ ನಾಗರಬೆಟ್ಟ, ಸಂತೋಷ ನಾಯ್ಕೋಡಿ, ಮಲ್ಲಣ್ಣ ಕೆಸರಟ್ಟಿ. ರವಿ ಜಗಲಿ ಸೇರಿದಂತೆ ಹಲವರು ಇದ್ದರು


ಸುದ್ದಿ ಓದಿ