ಶಾಸಕ ಪಾಟೀಲ(ನಡಹಳ್ಳಿ)ಯವರ ತಾರತಮ್ಮ ನೀತಿ ಖಂಡಿಸುತ್ತೇನೆ: ಶಾಂತಗೌಡ
----------
ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಗುರ್ತಿಸದೇ ಸ್ಥಳೀಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ತಮ್ಮ ಕೈಗೊಂಬೆಯಂತೆ ವರ್ತಿಸುವ ಅವರ ಮನೆಯಲ್ಲಿ ಜಮಖಾನೆ ಹಾಸುವ ಮತ್ತು ಟಿಂಎ ಎಸ್ಪಿ ಎನ್ನುವ ಕಾರ್ಯಕರ್ತರಿಗೆ ಮಾತ್ರ ವಿವಿಧ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತಿದೆ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ ತಾರತಮ್ಮ ನೀತಿಯನ್ನು ಬಲವಾಗಿ ಖಂಡಿಸುತ್ತೇನೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ಕಡಿಕಾರಿದರು.
ಪಟ್ಟಣದ ಪೊಲಿಸ್ ಠಾಣೆ ಎದುರಿಗಿರುವ ತಮ್ಮ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದ ಪ್ರದಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಹಿಡಿದು ಪ್ರಸ್ತುತ ಇಂದು ಪ್ರದಾನಿ ನರೇಂದ್ರ ಮೋದಿಯವರೆಗೂ ಸಂಘಪರಿವಾದವರಿಂದ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದ ಹಿನ್ನೇಲೆಯಲ್ಲಿ ಇಂದು ದೇಶದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ.
ಅದರಂತೆ ಮುದ್ದೇಬಿಹಾಳ ಮತಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಜನ ಹಿರಿಯ ಮುಖಂಡರು, ಕಾರ್ಯಕರ್ತರು, ಸಂಘದ ತತ್ವ ಸಿದ್ದಾಂತವನ್ನೇ ನಂಬಿ ಸೈಕಲ್ ಮೇಲೆ ಸವಾರಿ ಮಾಡಿ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಆದರೇ ಕಳೇದ 2018ರಲ್ಲಿ ಕಾಂಗ್ರೇಸ್ ನಿಂದ ಬಿಜೆಪಿ ಜಿಗಿದು ಸಧ್ಯ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡಿರುವ ಹಾಲಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ತಮ್ಮ ಗೆಲುವಿಗೆ ಕಾರಣಿಕರ್ತರಾಗಿದ್ದ ಮೂಲ ಬಿಜೆಪಿ ಮುಖಂಡರನ್ನು, ಕಾರ್ಯಕರ್ತರನ್ನು ಕಡೆಸುತ್ತಿರುವುದು ಮಾತ್ರವಲ್ಲದೇ ನಾನು ಯಾರ ಸಹಾಯವೂ ಇಲ್ಲದೇ ಸ್ವಯಂ ಪ್ರೇರಿತವಾಗಿ ತಮ್ಮ ಬಲದ ಮೇಲೆ ಶಾಸಕನಾಗಿದ್ದೇನೆ ಟೀ ಎ ಎಸ್ ಪಿ ಎನ್ನುವವರಿಗೇ ಮಾತ್ರ ಮಣೆ ಹಾಕಿ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಕೀಳಾಗಿ ಕಾಣುತ್ತಿರುವುದನ್ನು ಕಂಡು ನನ್ನ ಮನಸ್ಸಿಗೆ ನೋವನ್ನುಂಟು ಮಾಡಿದೆ ಎಂದರು.
ಸಧ್ಯ ಮತಕ್ಷೇತ್ರದ ತಾಲೂಕಾ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸದೇ ಹಲವು ವರ್ಷಗಳಿಂದ ಪಕ್ಷದ ಹಾಗೂ ಸಂಘದ ಏಳಿಗೆಗೆ ಶ್ರಮಿಸಿದ ಮುದ್ದೇಬಿಹಾಳ ತಾಲೂಕಾ ಮಂಡಲದ ಅಧ್ಯಕ್ಷರಾಗಿದ್ದ ಪರುಶುರಾಮ ಪವಾರವರನ್ನು ಹಾಗೂ ಈ ಹಿಂದೆ ಪ್ರದಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದು ಹೆಬ್ಬಾಳ, ಹಾಗೂ ಮಂಜುನಾಥ ಶೇಟ್ಟಿಯವರನ್ನು ಯಾವೂದೇ ಮುನ್ಸೂಚನೆ ಇಲ್ಲದೆ, ಕಾರ್ಯಕಾರಿಣಿ ಸದಸ್ಯರಿಗಾಗಲಿ ಅಥವಾ ಹಿರಿಯ ಮುಖಂಡರ ಗಮನಕ್ಕೆ ತರದೇ ಧೀಡೀರನೇ ತಮ್ಮ ಕೈಗೊಂಬೆಯಂತೆ ವರ್ತಿಸುವ ಅವರ ಮನೆಯಲ್ಲಿ ಜಮಖಾನೆ ಹಾಸುವ ಮತ್ತು ಟಿಂ ಎ ಎಸ್ ಪಿ ಎನ್ನುವ ಕಾರ್ಯಕರ್ತರಿಗೆ ಮಂಡಲ ಅಧ್ಯಕ್ಷ ಸ್ಥಾನ ಸೇರಿದಂತೆ ಪ್ರದಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡುವ ಮೂಲಕ ಮೂಲ ಬಿಜೆಪಿ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದು ಸರಿಯಲ್ಲ.
ಸಧ್ಯ ಮತಕ್ಷೇತ್ರದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರಿಗೆ ಇಷ್ಟೇಲ್ಲ ನೋವನ್ನುಂಟು ಮಾಡುವ ರೀತಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಣ್ಣಾರೆ ಕಂಡರೂ ಹಿರಿಯ ಮುಖಂಡರಾದ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿಯವರು,ಶಿವಶಂಕರಗೌಡ ಹಿರೇಗೌಡರವರು, ಸೇರಿದಂತೆ ಅನೇಕ ಮುಖಂಡರು ವಿರೋಧಿಸದೇ ಯಾಕೆ ಮೌನ ತಾಳಿದ್ದಾರೆ ಎಂಬುದು ತಿಳಿಯದಾಗಿದೆ. ಈ ವೇಳೆ ವಿಜಯಪುರ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ(ಕೂಚಬಾಳ) ಅವರು ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರ ಅಣತೆಯಂತೆ ಬೇಕು ಅಂದಾಗ ಪದಾಧಿಕಾರಿಗಳನ್ನು ಇಟ್ಕೋಳ್ಳುವುದು ಬೇಡವೆಂದಾಗ ತೆಗೆದು ಹಾಕುವುದು ಮಾಡುತ್ತಿದ್ದಾರಲ್ಲ ಇವರಾದ್ರೂ ಕಾರ್ಯಕರ್ತರ ಸಂಕಷ್ಟ ಅರ್ಥ ಮಾಡಿಕೊಳ್ಳಬೇಕಿತ್ತಲ್ಲವೇ.? ಯಾಕೇ ಯಾರೂ ಕೂಡ ಈ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವರಿಷ್ಟರ ಗಮನಕ್ಕೆ ತರುವ ಪ್ರಯತ್ನ ಮಾಡಿಲ್ಲ.
ಪಕ್ಷದ ಚಿನ್ಹೇ ಮೂಲಕ ಶಾಸಕರಾಗಿ ಗೆದ್ದು ಬಂದಿರುವ ಶಾಸಕರು ತಮ್ಮ ಪುತ್ರನ ಹಾಗೂ ತಮ್ಮ ಫೋಟೋಗಳನ್ನು ಬಳಸಿದ್ದ ಬ್ಯಾನರ್ ಗಳನ್ನು ಹಾಕಿದ್ದು ಗಮನಿಸಿದರೇ ಮೂಲ ಬಿಜೆಪಿ ಕಾರ್ಯಕರ್ತರನ್ನು ಮುಖಂಡರನ್ನು ಕಡೆಗಣಿಸಿದ್ದಾರೆ ಎಂಬು ಮೇಲ್ನೋಟಕ್ಕೆ ಕಂಡುಬರುತ್ತದೆ ಇವರಿಗೆ ಕೇವಲ ಟೀಂ ಎ ಎಸ್ ಪಿ ಎನ್ನುವ ಕಾರ್ಯಕರ್ತರಿಗೆ ಮಾತ್ರ ಕರೆಯುತ್ತಾರೆ ಬಿಜೆಪಿ ಪಕ್ಷವೆಂದವರಿಗೆ ಮಾತಗಳನ್ನಾಡುವುದಿರಲಿ ಯಾವೂದೇ ಗೌರವವೂ ಕೊಡುವುದಿಲ್ಲ. ಪಕ್ಷದ ಎಲ್ಲ ಚಟುವಟಿಕೆಗಳು ಅವರ ಸ್ವಂತ ಗ್ರಹಕಚೇಯಲ್ಲಿಯೇ ನಡೆಯಬೇಕು ಎಲ್ಲರೂ ಅಲ್ಲಿಗೇ ಬರಬೇಕು ಎನ್ನುವ ಭಾವನೆ ಅವರದ್ದಾಗಿದೆ.
ಈ ನಿಟ್ಟಿನಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ಶಾಸಕ(ನಡಹಳ್ಳಿ)ಯವರಿಗೆ ಬಿಜೆಪಿ ಪಕ್ಷದ ಟಿಕೇಟ್ ನೀಡದೇ ಪ್ರಾಮಾಣಿಕ ಹಾಗೂ ಪಕ್ಷದ ಸಂಘದ ತತ್ವಸಿದ್ದಾಂತಗಳನ್ನು ಒಪ್ಪಿಕೊಂಡ ಯೋಗ್ಯ ಪ್ರಾಮಾಣಿಕ ರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಬೇಕು. ಇಲ್ಲದಿದ್ದರೇ ಮತಕ್ಷೇತ್ರದ ಬಹುತೇಕ ಎಲ್ಲ ಮುಖಂಡರು ಎಲ್ಲರೂ ಒಗ್ಗಟ್ಟಾಗಿ ಪಕ್ಷಾತೀತವಾಗಿ ಬೇರೆಯೊಬ್ಬ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ಗೆಲ್ಲಿಸುವ ಮೂಲಕ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರನ್ನು ಸೋಲಿಸಲು ಮುಂದಾಗಬೇಕಾಗುತ್ತದೆ ಎಂದು ಹರಿಹಾಯ್ದರು.
ಅದತರಂತೆ ಮತಕ್ಷೇತ್ರದಲ್ಲಿ ಪ್ರತಿ ಗ್ರಾಮಗಳ ಪ್ರಗತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಪುರೈಸಲು ಜಲಜೀವನ ಮಶಿನ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಲ್ಲಿ ನಿರ್ಮಿಸಲಾಸಲಾಗಿದೆ ಮುಂಬರುವ ದಿನಗಳಲ್ಲಿ ಸಂಪೂರ್ಣ ದಾಖಲೆಗಳೊಂದಿಗೆ ಶಾಸಕರ ಇನ್ನಷ್ಟು ಬ್ರಷ್ಟಾಚಾರ ಬಯಲಿಗೆಳೆಯುತ್ತೇನೆ ಎಂದರು.
ಈ ವೇಳೆ ಹುಲಗಪ್ಪ ನಾಯಕಮಕ್ಕಳ ಸೇರಿದಂತೆ ನಹಲವರು ಇದ್ದರು.