ನಾನು ಮಹಾರಾಷ್ಟ್ರ ಪರ : ಮತ್ತೆ ಗಡಿ ಗಲಾಟೆಗೆ ಸಾತೇರಿ ತುಪ್ಪ, ಸ್ಥಳದಲ್ಲಿದ್ದು ಮೌನವಾದ ಕನ್ನಡಿಗರ ವಿರುದ್ದ ಕೆಂಗಣ್ಣು
ಬೆಳಗಾವಿ : "ನಾನು ಮಹಾರಾಷ್ಟ್ರ ರಾಜ್ಯದ ಪರವಾಗಿದ್ದೇನೆ" ಎಂದು ಪತ್ರಿಕಾಗೋಷ್ಠಿಯ ವೇದಿಯಲ್ಲಿ ಮಾಜಿ ಮಹಾಪೌರ ನಾಗೇಶ ಸಾತೇರಿ ಹೇಳುವ ಮೂಲಕ ಮತ್ತೆ ಬೆಳಗಾವಿ ಗಡಿ ವಿವಾದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಆದರೆ ಸ್ಥಳದಲ್ಲಿ ಉಪಸ್ಥಿತರಿದ್ದ ಕನ್ನಡಪರ ಮಾಜಿ ಮಹಾಪೌರ, ನಗರಸೇವರು ಇದರ ಬಗ್ಗೆ ಮೌನ ವಹಿಸಿರುವದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಂಗಳವಾರ ಬೆಳಗಾವಿಯಲ್ಲಿ ಮಾಜಿ ಮಹಾಪೌರ ಹಾಗೂ ಉಪಮಹಾಪೌರ ಮತ್ತು ನಗರಸೇವಕರ ಸಭೆ ನಡೆಸಲಾಯಿತು. ಈ ಸಭೆಯು ಬೆಳಗಾವಿ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದರು ಅದರ ಕುರಿತು ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ಮಾಜಿ ಶಾಸಕ ಹಾಗೂ ಮಾಜಿ ಮಹಾಪೌರ ರಮೇಶ ಕುಡಚಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ಈ ಹಿಂದೆ ಕೆಲವರು ಮಹಾಪೌರ ಆಗಿದ್ದಾಗ ಅಭಿವೃದ್ಧಿ ಪರ ಕೆಲಸ ಮಾಡಲಿಲ್ಲ ಕೇವಲ ಮಹಾರಾಷ್ಟ್ರ ಸೇರತೇವೆ ಅಂತಾ ಹೇಳತಾ ಇದ್ದರು ಎಂಬ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾಜಿ ಮಹಾಪೌರ ನಾಗೇಶ ಸಾತೇರಿ ಅವರು ಅಭಿವೃದ್ಧಿ ವಿಷಯವಾಗಿ ಕರೆದ ಸಭೆಯನ್ನು ಲೆಕ್ಕಿಸದೆ ನಾನು ಈಗಲಾದರು ಮಹಾರಾಷ್ಟ್ರ ಪರವಾಗಿದ್ದೇನೆ ಎಂದು ಕೂಗಿ ಹೇಳಿಸರು.
ಅವರು ಅಷ್ಠೇಲ್ಲಾ ಹೇಳುತ್ತಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಕನ್ನಡಪರವಾಗಿದ್ದ ಮಾಜಿ ಶಾಸಕ ರಮೇಶ ಕುಡಚಿ ಆಗಲಿ ಅಥವಾ ಕನ್ನಡಪರ ಮಹಾಪೌರ, ನಗರಸೇವಕರಾಗಲಿ ಇದರ ಕುರಿತು ಚಕಾರ ಎತ್ತಲಿಲ್ಲ ಎನ್ನುವ ಪ್ರಶ್ನೆಯು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.