ಶಿಗ್ಗಾವ್

ಉಪಚುನಾವಣೆಗೆ ನಾನು ಕೂಡ ಬಿಜೆಪಿ ಆಕಾಂಕ್ಷಿ : ಶಿವಾನಂದ ಮ್ಯಾಗೇರಿ

ಉಪಚುನಾವಣೆಗೆ ನಾನು ಕೂಡ ಬಿಜೆಪಿ ಆಕಾಂಕ್ಷಿ : ಶಿವಾನಂದ ಮ್ಯಾಗೇರಿ

ಶಿಗ್ಗಾವಿ 07: ಶ್ರಾವಣ ಮಾಸ ಅಂದರೆ ಒಳ್ಳೆಯದನ್ನು ಕೇಳುವುದು ಒಳ್ಳೆಯದು ಕಲಿಸುವ ಕಲಿಯುವ ಮಾಸವಾಗಿದೆ ಈ ತಿಂಗಳಲ್ಲಿ ಎಲ್ಲರೂ ಮನೆ ಗುಡಿ ಮಠಗಳಲ್ಲಿ ಪೂಜೆ ಅಭಿಷೇಕ ಪ್ರಸಾದ ಪ್ರವಚನ ಪುರಾಣ ದೇವನಾಮಸ್ಮರಣೆಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದೇ ಶ್ರಾವಣ ಮಾಸ ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ತಾಲೂಕಿನ ಚಿಕ್ಕಮಲ್ಲೂರ ಗ್ರಾಮದ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಅಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದರ್ಶನ ಮತ್ತು ಆಶೀರ್ವಾದ ಪಡೆದು ಹಿರಿಯರೊಂದಿಗೆ ಮಾತನಾಡಿದ ಅವರು ನಮ್ಮ ಕ್ಷೇತ್ರದ ಉಪಚುನಾವಣೆ ಬಂದಿದ್ದು 16 ವರ್ಷದಿಂದ ಹಿಂದುಳಿದ ಕ್ಷೇತ್ರದ ಹಣೆಪಟ್ಟಿ ಕಿತ್ತೆಸೆದು ಅಭಿವೃದ್ಧಿ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಂಸದ ಬಸವರಾಜ್ ಬೊಮ್ಮಾಯಿ ಅವರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಲ್ಲುತ್ತದೆ. ಅವರು ಮಾಡಿದ ಅಭಿವೃದ್ಧಿ ಮುಂದುವರೆಯಬೇಕಾಗಿದೆ. ಅದಕ್ಕೆ ಇವರಿಬ್ಬರ ಮಾರ್ಗದರ್ಶನ ಬೇಕೇ ಬೇಕು ಶಿಗ್ಗಾವಿ ಉಪಚುನಾವಣೆಗೆ ನಾನು ಕೂಡ ಬಿಜೆಪಿ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದೇನೆ. ಈ ವಿಷಯವನ್ನು ಮಾಜಿ ಮುಖ್ಯಮಂತ್ರಿ ಸಂಸದ  ಬಸವರಾಜ ಬೊಮ್ಮಾಯಿಯವರಿಗೂ ಹಾಗೂ ಕೇಂದ್ರ ಸಚಿವ ಪ್ರಲ್ಲಾದಜೋಶಿ ಅವರಿಗೂ ಭೇಟಿ ನೀಡಿ ಬೇಡಿಕೆ ಇಟ್ಟಿದ್ದೇನೆ ಇದಕ್ಕೆ ಅವರು ನೀನು 20 ವರ್ಷದಿಂದ ಪಕ್ಷದೊಳಗೆ ನಿಷ್ಠೆಯಿಂದ ಕೆಲಸ ಮಾಡಿದ್ದಿ ಎಂದು ಬೆಂಬಲದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ ಬಸವರಾಜ ಬೊಮ್ಮಾಯಿ ಅವರು ಹಾಗೂ ಪ್ರಹ್ಲಾದ್ ಜೋಶಿಯವರ ಮಾರ್ಗದರ್ಶನದಲ್ಲಿ ಸೇವೆ ಮಾಡುತ್ತೇನೆ. ಪಕ್ಷದಲ್ಲಿ ಅಮೋಘ ಸೇವೆ ಸಂಘಟನೆ ಹೋರಾಟ ಮಾಡುತ್ತಾ ಬಂದಿದ್ದೇನೆ. 

 ಕಾರ್ಯಾಲಯ ಕಾರ್ಯದರ್ಶಿ, ತಾಲೂಕ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ 2020 ಫೆಬ್ರುವರಿಯಿಂದ ಇಲ್ಲಿವರೆಗೆ ತಾಲೂಕ ಅಧ್ಯಕ್ಷನಾಗಿ ಎರಡು ಅವಧಿ ಸೇವೆ ಮಾಡುತಿದ್ದೇನೆ ಪಕ್ಷದ ವರಿಷ್ಠರು ಮತ್ತು ಪಕ್ಷ ನೀಡಿದ ಜಿಲ್ಲಾ ತಾಲೂಕು ರಾಜ್ಯಮಟ್ಟದ ಎಲ್ಲಾ ಜವಾಬ್ದಾರಿಗಳನ್ನು ನಿಯತ್ತಾಗಿ ನಿಷ್ಠೆಯಿಂದ ಪಕ್ಷದ ತತ್ವ ಸಿದ್ಧಾಂತದ ಆಧಾರದ ಮೇಲೆ ನಿರ್ವಹಿಸಿದ್ದೇನೆ. ಕ್ಷೇತ್ರದ ಜನತೆಗೆ ನಾನು ಚಿರಪರಿಚಿತ ಇದ್ದೇನೆ.  

ನಾನು ಹಳ್ಳಿಗೆ ಹೋಗಿ ವಿಷಯ ಪ್ರಸ್ತಾಪಿಸಿದಾಗ ತಕ್ಷಣ  ಕ್ಷೇತ್ರದ  ಜನತೆ ಪ್ರೀತಿಯಿಂದ  ನನಗೆ ಬೆಂಬಲ ಸೂಚಿಸಿದ್ದಾರೆ ಆದಕಾರಣ ಪಕ್ಷ ಮತ್ತು ಪಕ್ಷದ ವರಿಷ್ಠರು ಕ್ಷೇತ್ರದಾದ್ಯಂತ ಸಮೀಕ್ಷೆ ಮಾಡಿ ಸೇವೆಯನ್ನು ಗುರುತಿಸಿ ನನಗೆ ಟಿಕೆಟ್ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಅಂತಿಮವಾಗಿ ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು. 


ಸುದ್ದಿ ಓದಿ