ನಾನು ಟಿಕೇಟ್ ಆಕಾಂಕ್ಷಿ, ಯಾರಿಗೇ ಸಿಗಲಿ ಪಕ್ಷಕ್ಕೆ ದುಡಿಯುವೆ: ಲಕ್ಷ್ಮಿನಾರಾಯಣ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 30: ಹಲವು ವರ್ಷಗಳಿಂದ ಪ್ರಮಾಣಿಕವಾಗಿ ಬಿಜೆಪಿ ಪಕ್ಷಕ್ಕೆ ದುಡಿದಿದ್ದೇನೆ ಹಾಗಾಗಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಫರ್ಧಿಸಲು ನಾನು ಆಕಾಂಕ್ಷಿಯಾಗಿದ್ದೆನೆ, ಟಿಕೇಟ್ ಯಾರಿಗೆ ನೀಡಬೇಕು ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಯಾರಿಗೇ ಸಿಗಲಿ ಪಕ್ಷಕ್ಕೆ ದುಡಿಯುವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ವಿಷೇಶ ಪೂಜೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿ ಬಿಜೆಪಿ ಪಕ್ಷದಿಂದ ಮಾತ್ರ ದೇಶ ಹಾಗೂ ರಾಜ್ಯಕ್ಕೆ ಉತ್ತಮ ಭವಿಷ್ಯವಿದೆ, ಈ ಭಾಗವನ್ನು ಹೈದರಾಬಾದ್ ಕರ್ನಾಟಕಕ್ಕೆ ಸೇರಿಸುವಲ್ಲಿ ನಾನು ಶ್ರಮ ವಹಿಸಿದ್ದೆನೆ ಎಂದರು, ಕ್ಷೇತ್ರವನ್ನು ಅಭಿವೃಧ್ಧಿ ಹೊಂದಬೇಕಾದರೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ, ಅನುದಾನಗಳ ಸಮರ್ಕ ಬಳಕೆಯಿಂದ ಮಾತ್ರ ಅಭಿವೃಧ್ಧಿ ಸಾಧ್ಯವಾಗುತ್ತದೆ. ಇಲಾಖಾವಾರು ನೀಡುವ ಅನುದಾನವನ್ನು ಬಳಸಬೇಕೆಂದರೆ ಮೊದಲು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಬೇಕಿದೆ ನಾನು ಸರಕಾರದ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಹಾಗಾಗಿ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು ಅದರ ಸಮರ್ಕ ಬಳಕೆಗೆ ಈ ಕ್ಷೇತ್ರದಲ್ಲಿ ಅನುವು ಮಡಿಕೊಡುವಂತೆ ಮನವಿ ಮಾಡಿದರು, ಮದ್ಯವರ್ತಿಗಳ ಹಾವಳಿಗೆ ತಡೆ ಹಾಕಲು ನರೇಂದ್ರ ಮೋದಿ ನೇರವಾಗಿ ರೈತರಿಗೆ ಅನುದಾನ ದೊರಕುವಂತೆ ಮಾಡಿದರು.ದೇಶ ಸೇರಿದಂತೆ ರಾಜ್ಯದ ಪ್ರತಿಯೊಂದು ಮನೆಗಳಿಗೆ ನೀರು ದೊರಕುವಂತೆ ಜಲಜೀವನ್ ಮಿಷನ್ ರೂಪಿಸಿದ್ದಾರೆ ಇನ್ನು ಅನೇಕ ಯೋಜನೆಗಳನ್ನು ರೂಪಿಸಿ ವಿಶ್ವವೇ ಭಾರತದತ್ತ ನೋಡುವಂತೆ ಮಡಿದ್ದು ನರೇಂದ್ರ ಮೋದಿ ಎಂದರು. ಕ್ಷೇತ್ರದ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ ವರಿಷ್ಠರು ನನ್ನು ಪ್ರಾಮಾಣಿಕ ತನವನ್ನು ಗುರುತಿಸಿ ನನಗೆ ಟಿಕೆಟ್ ನೀಡಿದರೆ ಎಲ್ಲರನ್ನು ಗಣನೆಗೆ ತೆಗೆದುಕೊಂಡು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಕ್ಷೇತ್ರದಲ್ಲಿನ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಯಾರು ಇಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ ನಾನು ವೈಯಕ್ತಿಕವಾಗಿ ಇಲ್ಲಿಗೆ ಬಂದಿದ್ದೇನೆ ಮುಂದಿನ ದಿನಗಳಲ್ಲಿ ಪಕ್ಷ ಯಾರಿಗೆ ಡಿಕೇಟ್ ನೀಡುತ್ತದೆ ಎಂಬುದು ನೋಡಬೇಕಿದೆ, ಟಿಕೇಟ್ ಯಾರಿಗೇ ನೀಡಲಿ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುವೆ, ಕ್ಷೇತ್ರದಲ್ಲಿ ನನ್ನ ಹಾಗೂ ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರ, ಕಾರ್ಯಕರ್ತರ ನಡುವೆ ಯಾವುದೇ ಭೀನ್ನಾಭಿಪ್ರಯಾ ಇಲ್ಲ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಮಾದಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಜಗನ್ನಾಥ್, ನಿವೃತ್ತಮ ಪಿಎಸ್ಐ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಸಿದ್ದೇಶ್, ವಕೀಲರಾದ ಸುಧಾ, ಗ್ರಾ.ಪಂ.ಸದಸ್ಯ ಪೂಜಾರ್ಪ, ಡಿಎಸ್ಎಸ್ನ ಉಮೇಶ ಇದ್ದರು. ಹನುಮಂತಪ್ಪ ಗದುಗಿನ ನಿರೂಪಿಸಿದರು.