ಮುದ್ದೆಬಿಹಾಲ್

ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಹುಸೇನ ಮುಲ್ಲಾ ರಾಜೀನಾಮೆ

ತಾಲೂಕ ಅಧ್ಯಕ್ಷ ಸ್ಥಾನಕ್ಕೆ ಹುಸೇನ ಮುಲ್ಲಾ ರಾಜೀನಾಮೆ

ಮುದ್ದೇಬಿಹಾಳ:  ತಾಲೂಕಿನ ಕಾಳಗಿ ಗ್ರಾಮದ ಹುಸೇನ್ ಮುಲ್ಲಾ, ಇವರು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಸುಮಾರು 14 ವರ್ಷಗಳ ಕಾಲ ನಿರಂತರ ಸಾಮಾಜಿಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಸಂಘದಲ್ಲಿ ಸದಸ್ಯನಾಗಿ, ಕಾರ್ಯದರ್ಶಿಯಾಗಿ ತಾಲೂಕಾ ಅಧ್ಯಕ್ಷನಾಗಿ ಈ ಒಕ್ಕೂಟದಲ್ಲಿ ಕಾರ್ಯನಿರ್ವಹಿಸಿದ್ದೇನೆ.ಸದ್ಯ ನನ್ನ ವೈಯಕ್ತಿಕ ಕಾರ್ಯಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಲು ತೊಂದರೆಯಾಗುತ್ತಿದ್ದು, ಇನ್ನೋಬ್ಬರಿಗೆ ಅನುಕೂಲವಾಗಲೆಂದು ಇಂದು ನಾನು ನನ್ನ ಮನಸಾರೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ