ಸೌಂದತ್ತಿ

ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಹುಂಡಿ ಎಣಿಕೆ ಪೂರ್ಣ

ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಹುಂಡಿ ಎಣಿಕೆ ಪೂರ್ಣ

60 ದಿನಗಳ ಅವಧಿಯಲ್ಲಿ 1.68 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹ 

ಉಗರಗೋಳ 18: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಬುಧವಾರ ಹುಂಡಿ ಎಣಿಕೆ ಪೂರ್ಣಗೊಂಡಿದ್ದು, 60 ದಿನಗಳ ಅವಧಿಯಲ್ಲಿ 1.68 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. 

2023ರ ನವೆಂಬರ್ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಹುಂಡಿಯಲ್ಲಿ ಹಾಕಿರುವ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಎಣಿಸಲಾಯಿತು. ಈ ಬಾರಿ 1.39 ಕೋಟಿ ನಗದು, 25.72 ಲಕ್ಷ ಮೌಲ್ಯದ ಚಿನ್ನಾಭರಣ, 3.28 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ. ಅಲ್ಲದೆ, ಕೀನ್ಯಾ, ಸಿಂಗಾಪುರ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೆಟ್ಸ್‌ ಮತ್ತಿತರ ದೇಶಗಳ ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿವೆ. 

ಕರ್ನಾಟಕ ಮಾತ್ರವಲ್ಲದೆ;ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಯಲ್ಲಮ್ಮ ದೇವಿ ಸನ್ನಿಧಿಗೆ ಆಗಮಿಸುತ್ತಾರೆ. ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ದೇವಿಗೆ ಕಾಣಿಕೆ ಅರ​‍್ಿಸಿ ಭಕ್ತಿ ಮೆರೆಯುತ್ತಾರೆ. 

ಯಲ್ಲಮ್ಮ ದೇವಸ್ಥಾನ, ಜಿಲ್ಲಾಧಿಕಾರಿ ಕಛೇರಿ, ಧಾರ್ಮಿಕ ದತ್ತಿ ಇಲಾಖೆ, ಸವದತ್ತಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ಹಂತಗಳಲ್ಲಿ ಹುಂಡಿ ಎಣಿಸಲಾಯಿತು. 

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ಪುಂಡಲೀಕ ಮೇಟಿ, ರಮೇಶ ಗೋಮಾಡಿ, ಕಾರ್ಯನಿರ್ವಾಹಕ ಅಧಿಕಾರಿ ಎ??ಪಿಬಿ ಮಹೇಶ, ಅಧೀಕ್ಷಕರಾದ ನಾಗರತ್ನಾ ಚೋಳಿನ, ಸಂತೋಷ ಶಿರಸಂಗಿ, ಬೆಳಗಾವಿ ಮುಜರಾಯಿ ಇಲಾಖೆ ಬಾಳೇಶ ಅಬ್ಬಾಯಿ, ರೇಣುಕಾ ಶಿಂತ್ರಿ, ತಹಶೀಲ್ದಾರ ಕಛೇರಿಯ ಎ.ಎಚ್‌.ಬ್ಯಾಹಟ್ಟಿ, ಅಭಿಯಂತರ ಎ.ವಿ.ಮೂಳ್ಳೂರ, ಡಿಆರ್ ಚವ್ಹಾಣ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಎಂ.ಪಿ.ದ್ಯಾಮನಗೌಡ್ರ, ಪ್ರಭು ಹಂಜಗಿ, ವಿ.ಆರ್‌.ನೀಲಗುಂದ, ಮಲ್ಲಯ್ಯ ತೊರಗಲ್ಲಮಠ, ಸದಾನಂದ ಈಟಿ, ಎಎಸ್‌ಆಯ್ ಎಸ್‌.ಆರ್‌.ಗಿರಿಯಾಲ, ಪಿ ಎಫ್ ಗೊವನಕೊಪ್ಪ, ಪಂಡಿತ ಯಡೂರಯ್ಯ, ಪಿ ರಾಜಶೇಖರಯ್ಯ ದೇವಸ್ಥಾನ ಸಿಬ್ಬಂದಿ ಕೇನರಾ ಭ್ಯಾಂಕ್ ಸಿಬ್ಬಂದಿ ಇದ್ದರು. 

“ಯಲ್ಲಮ್ಮನಗುಡ್ಡಕ್ಕೆ ಬರುವ ಆದಾಯ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಈ ಹಣದಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುವುದು. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ದೇವಸ್ಥಾನ ವೈವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮತ್ತು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ ತಿಳಿಸಿದರು. 


ಸುದ್ದಿ ಓದಿ