ಹುಕ್ಕೇರಿ ಪೊಲೀಸರ ಕಾರ್ಯಾಚರಣೆ : ಇಬ್ಬರು ಟ್ರ್ಯಾಕ್ಟರ್ ಕಳ್ಳರ ಬಂಧನ ; ಟ್ರ್ಯಾಕ್ಟರ ವಶ
ಬೆಳಗಾವಿ : ಇತ್ತೀಚಿಗೆ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದಲ್ಲಿ ಕಳ್ಳತನವಾಗಿದ್ದ ಟ್ರ್ಯಾಕ್ಟರ್ ಪತ್ತೆ ಮಾಡುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದು, ಈ ಪ್ರಕರಣ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.
ಜಿಲ್ಲೆಯ ಗೋಕಾಕ ತಾಲೂಕಿನ ಫಾಮಲ್ ದಿನ್ನಿ ಗ್ರಾಮದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಹಾಗೂ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ಶಿವಾನಂದ ಕರಿಕಟ್ಟಿ(22) ಇವರಿಬ್ಬರು ಈ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿತರಾಗಿದ್ದಾರೆ.
ಏಪ್ರೀಲ್ ದಿ. 28ರಂದು ರಾತ್ರಿ ಹುಕ್ಕೇರಿ ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಕಳ್ಳತನವಾಗಿರುವ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ ಅವರು ಹೆಚ್ಚುವರಿ ಎಸ್.ಪಿ ಎಂ. ವೇಣುಗೋಪಾಲ ಗೋಕಾಕ ಡಿಎಸ್ ಪಿ ದೂದಪೀರ್ ಮುಲ್ಲಾ ಇವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಸಿಪಿಐ ಎಂ.ಎಂ. ತಹಶೀಲ್ದಾರ ಅವರು ದಿ. 6ರಂದು ಈ ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣ ಇಬ್ಬರು ಆರೋಪಿತರನ್ನು ಬಂದಿಸಿದ್ದಾರೆ. ಅಲ್ಲದೆ ಈ ಇಬ್ಬರು ಆರೋಪಿತರಿಂದ ಕಳ್ಳತನವಾಗಿದ್ದ ರೂ.2,50,000 ಮೌಲ್ಯದ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ನ ಇಂಜಿನ್ ವಶಪಡಿಸಿಕೊಂಡಿದ್ದಾರೆ.
ಈ ಕಳ್ಳತನ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿರುವ ಎಮ್. ಎಮ್ ತಹಶಿಲ್ದಾರ. ಪಿ.ಐ ಹುಕ್ಕೇರಿ ಹಾಗೂ ಸಿಬ್ಬಂದಿ ಜನರಾದ ಎ.ಎಸ್.ಸನದಿ, (ಎ.ಎಸ್.ಐ), ಕೆ.ಎನ್. ಪಿಂಜಾರ, (ಎ.ಎಸ್.ಐ) ಸಿ.ಡಿ.ಪಾಟೀಲ ಸಿಎಚ್‌ಸಿ ಬ.ನಂ.1361, ಜಿ.ಎಸ್.ಕಾಂಬಳೆ ಸಿಪಿಸಿ 3255, ಎಸ್.ಆರ್.ರಾಮದುರ್ಗ ಸಿಪಿಸಿ 1512, ಯು.ವಾಯ್.ಅರಭಾಂವಿ ಸಿಪಿಸಿ 3769, ಎ.ಎಲ್.ನಾಯಕ ಸಿ.ಪಿ.ಸಿ 3277, ಎಂ.ಎಸ್.ಕಣ್ಣೂರ ಸಿಪಿಸಿ ಬ.ನಂ.3042 ಹಾಗೂ ಜಿಲ್ಲಾ ಪೊಲೀಸ್ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗ ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಬೆಳಗಾವಿ ಎಸ್.ಪಿ. ಡಾ. ಸಂಜೀವ ಪಾಟೀಲ ಅವರು ಶ್ಲಾಘಿಸಿರುತ್ತಾರೆ.