ಹುಕ್ಕೇರಿ ಪಟ್ಟಣದಲ್ಲಿ ಇಂದು ಸೀಲಡೌನ ಆದ ಪ್ರದೇಶಗಳು
ಹುಕ್ಕೇರಿ -- ಪಟ್ಟಣದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರಲ್ಲಿ ಭಯ ಮನೆಮಾಡಿದೆ.
ಹುಕ್ಕೇರಿ, ಜುಲೈ 21: ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ನಿವೃತ್ತ ಬ್ಯಾಂಕ ಉದ್ಯೋಗಿಯೊಬ್ಬರು ಕೊರೋನಾದಿಂದ ಹೆಳಗಾವಿಯಲ್ಲಿ ಮೃತಪಟ್ಟಿದ್ದು ನಿನ್ನೆ ಆ ಪ್ರದೇಶದ ಒಂದು ಭಾಗವನ್ನು ಸೀಲಡೌನ ಮಾಡಲಾಗಿದೆ.ಇಂದು ನಾಯಿಕ ಗಲ್ಲಿಯ ೬ಂ ವರ್ಷದ ಓರ್ವ ಮಹಿಳೆ ಹಾಗೂ ಗಜಬರವಾಡಿ ಸಮೀಪದ ರಾಹುಲ ನಗರದ 55 ವರ್ಷದ ಓರ್ವ ಮಹಿಳೆಗೆ ಸೋಂಕು ಧೃಡಪಟ್ಟಿದ್ದು ಇವರಿಬ್ಬರನ್ನು ಬಿಮ್ಸಗೆ ಈ ಸಂಜೆ ದಾಖಲಿಸಲಾಗಿದೆ. ಇವೆರಡೂ ಪ್ರದೇಶಗಳ ಒಂದೊಂದು ಭಾಗವನ್ನು ಸೀಲಡೌನ ಮಾಡಲಾಗಿದೆ.ಇದರಿಂದಾಗಿ ಪಟ್ಟಣದಲ್ಲಿ ಇಬ್ಬರು ಸಾವಿಗೀಡಾಗಿ ೬ ಜನ ಸೋಂಕಿತರು ಪತ್ತೆಯಾಗಿದ್ದಾರಲ್ಲದೆ ೫ ಕಡೆಗಳಲ್ಲಿ ಸೀಲಡೌನ ಮಾಡಿದಂತಾಗಿದೆ.
ಚೋದ್ಯವೆಂದರೆ ಕಳೆದ ಮಂಗಳವಾರದಂದು ಪಾಜಿಟಿವ ಬಂದಿದ್ದ ಪುರಸಭೆಯ ಇಬ್ಬರು ನೌಕರರನ್ನು ಬಿಮ್ಸಗೆ ಅಂದೇ ಸಂಜೆ ಕರೆದೊಯ್ಯಲಾಗಿತ್ತು.ಮೂರೂವರೆ ದಿನ ಅವರಿಬ್ಬರನ್ನು ಇಟ್ಟುಕೊಂಡು ಶನಿವಾರ ಅವರನ್ನು ಅವರಲ್ಲಿಯ ರೋಗ ಲಕ್ಷಣಗಳು ಕಡಿಮೆಯಾಗಿವೆಂದು ಹೇಳಿ ಮರಳಿ ಕಳಿಸಲಾಗಿದೆ..ಆದರೆ ಇವರಿಬ್ಬರನ್ನು ಕ್ಯಾರಗುಡ್ಡದಲ್ಲಿ ಕೊರಂಟೈನ ಕೇಂದ್ರದಲ್ಲಿರಿಸಲಾಗಿದೆ.
ಹದಿನೈದು ದಿನಗಳ ಹಿಂದೆ ಕೆಲವರ ಗಂಟಲುದ್ರವವನ್ನು ಪರೀಕ್ಷೆಗೆ ಕಳಿಸಿದ್ದು ಅವು ಈಗ ಪಾಜಿಟಿವ್ಹ ಬರುತ್ತಿದ್ದು ಇವರನ್ನು ಬಿಮ್ಸಗೆ ಸೇರಿಸಲಾಗುತ್ತಿದೆ.ಆದರೆ ೧೫ ದಿನಗಳಲ್ಲಿ ಇವರಲ್ಲಿಯ ರೋಗ ಲಕ್ಷಣಗಳು ಕಡಿಮೆಯಾಗಿ ಅವರು ತಂತಾನೆ ಗುಣಮುಖರಾಗುತ್ತಾರೆ.ಅಲ್ಲಿ ಇವರನ್ನು ಪರೀಕ್ಷೆಗೊಳಪಡಿಸಿದ ನಂತರ ಇವರಲ್ಲಿಯ ರೋಗ ಲಕ್ಷಣಗಳು ಕಂಡುಬರುವದಿಲ್ಲ.ಹೀಗಾಗಿ ಮೂರ್ನಾಲ್ಕು ದಿನಗಳಲ್ಲಿ ಇವರನ್ನು ಮರಳಿ ಕಳಿಸಲಾಗುತ್ತಿದೆ .ಅದರೆ ಇದ ಜನರಲ್ಲಿ ಭೀತಿ ಮೂಡಿಸುವಲ್ಲಿ ಕಾರಣವಾಗುತ್ತಿದೆ.ಈ ವಿಷಯದಲ್ಲಿ ಡಾಕ್ಟರರು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ.