ಸಣ್ಣ ಮಳೆಗೆ ಗುಂಡಿಯಾಗಿ ಮಾರ್ಪಾಡಾದ ಆಸ್ಪತ್ರೆ ರಸ್ತೆ
ಕೊಟ್ಟೂರು 25 : ಕೊಟ್ಟೂರಿನ ರಸ್ತೆಗಳಲ್ಲಿ, ಈಗ ನಾವು ಹೇಳ ಹೊರಟಿರುವುದು ಕೂಡ ಒಂದು ಪ್ರಮುಖ ರಸ್ತೆ, ಯಾಕೆಂದರೆ ಈ ರಸ್ತೆ ಮಾರ್ಗವನ್ನು ಬಳಸಿ, ನಂಬಿಕೊಂಡು ಕೊಟ್ಟೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ, ಸರ್ಕಾರಿ ಸಾರ್ವಜನಿಕ ಗ್ರಂಥಾಲಯಕ್ಕೆ, ಕೊಟ್ಟೂರು ನಗರದ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ, ತಾಲ್ಲೂಕು ಅಫೀಸ್ಗೇ, ಇನ್ನೂ ಹರಪನಹಳ್ಳಿ ರಸ್ತೆಗೇ, ಬನಶಂಕರಿ ದೇವಸ್ಥಾನಕ್ಕೆ, ಬನಶಂಕರಿ ಕಲ್ಯಾಣ ಮಂಟಪ, ಮರಿಕೊಟ್ಟೂರೇಶ್ವರ ದೇವಸ್ಥಾನಕ್ಕೆ ಹೋಗುವ ಕೂಡು ರಸ್ತೆಯೂ ಕೂಡ ಹೌದು. ಕೊಟ್ಟೂರಿನ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ, ಟ್ಯೂಟೋರಿಯಲ್ ಶಿವಣ್ಣ ಎಂದೇ ಹೆಸರು ಗಳಿಸಿರುವ ಎಂ.ಶಿವಣ್ಣ ಮತ್ತು ಅವರಿಂದ ಪಾಠ ಕಲಿತು ಉನ್ನತ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿರುವ ಮೈದೂರು ಶಿವಣ್ಣರ ಮನೆ ಮುಂಭಾಗ ಈ ರೀತಿ ಗುಂಡಿಮಯವಾದರೂ ಸಹ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ ಅಂದರೆ ಇನ್ನೂ ಯಾವ ರಸ್ತೆ ಕಣ್ಣಿಗೆ ಬೀಳಬಹುದುಯೆಂಬುದು ಅನೇಕ ಬುದ್ಧಿ ಜೀವಿಗಳ ಪ್ರಶ್ನೆಯಾಗಿದೆ
ನಾವು ಬರೆಯುವುದು, ಹೇಳುವುದು ಸುಮ್ಮನೇ ಅಧಿಕಾರಿಗಳಿಗೆ ಲೆಕ್ಕಾಕ್ಕೇ ಇಲ್ಲಾ, ಅದಕ್ಕಾಗಿ ಚಿತ್ರ ಸಮೇತ ವರದಿ ಮಾಡಿದರೂ ಸಹ ಕ್ಯಾರೇ ಅನುತ್ತಿಲ್ಲ, ಸ್ವಲ್ಪ ಮಳೆ ಬಂದರೂ ಸಹ ಕೊಚ್ಚೆ ನೀರಿನಿಂದ ಗುಂಡಿಯಾಗಿ ಪರಿವರ್ತನೆಯಾಗುತ್ತದೆ. ಅನೇಕ ಸಂಭಂದಪಟ್ಟ ಅಧಿಕಾರಿಗಳು ಇದೇ ರಸ್ತೆಯ ಮೂಲಕ ಸಂಚಾರಿಸಿದರೂ, ನೋಡಿದರೂ ನೋಡದ ರೀತಿ ಅದೇ ಅವರೇ ಪ್ರಯಾಸುಪಟ್ಟು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಅವರಿಗೂ ಕೂಡ ಅನಾಹುತವಾಗುವ ಮೊದಲೇ ಸರಿಪಡಿಸಬೇಕಾದ ಅನಿವಾರ್ಯತೆ ಇದೆ.
ಸರ್ಕಾರಿ ಅಸ್ಪತ್ರೆಗೇ ಹಾಗೂ ಖಾಸಗಿ ಶಾಲಾಗೇ ಹೋಗುವ ಪ್ರಮುಖ ಮಾರ್ಗವಾಗಿರುವುದರಿಂದ, ಅಟೋ ರಿಕ್ಷಾಗಳ ಮೂಲಕ ಸರ್ಕಾರಿ ಅಸ್ಪತ್ರೆಗೇ ಹೋಗುವ ಅನೇಕ ರೋಗಿಗಳು ಗರ್ಭೀಣಿ ಸ್ರೀಯರು ಅತಂಕದಲ್ಲಿ ಪ್ರಯಾಣ ಮಾಡುವ ಅನಿವಾರ್ಯತೆ ಇದ್ದು, ಈ ಜಾಗ ಬರುತ್ತಿದ್ದ ಹಾಗೇ ಅತಂಕ ಪಟ್ಟು ಚಾಲಕರಿಗೆ ಮೆಲ್ಲನೇ ಸಾಗು ಎಂದು ಸೂಚನೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಸಾರ್ವಜನಿಕರು ಈ ರಸ್ತೆಯ ಮೂಲಕವೇ ಕೊಟ್ಟೂರಿನ ಪ್ರಮುಖ ನೀರಿನ ಘಟಕವಾಗಿರುವ ಬನಶಂಕರಿ ಗುಡಿ ಹತ್ತಿರವಿರುವ ಘಟಕದಲ್ಲಿ ನೀರು ತರಲು ಹೋಗುತ್ತಿದ್ದು ಪ್ರಯಾಸ ಪಟ್ಟು ಸಂಚರಿಸುತ್ತಿದ್ದರೂ ಸಹ ಅಧಿಕಾರ ಗಳ ಗಮನ ಸೆಳೆಯುವಲ್ಲಿ ವಿಫಲರಾಗಿ ಪ್ರಯಾಸಪಟ್ಟು ಹಿಡಿಶಾಪ ಹಾಕುತ್ತಾ ಪ್ರಯಾಣಿಸುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಎಲ್ಲಾ ರಸ್ತೆಗಳನ್ನು ಫಾಸ್ಟ್ ಚೆಕ್ ಮಾಡುವ ಅವಶ್ಯಕತೆ ಇದೆ.
ಚಿತ್ರದಲ್ಲಿ ನೀವು ನೋಡಿತ್ತಿರುವಂತೆ ಇಲ್ಲಿ ನಿಂತ ನೀರು ಹರಿದುಹೋಗಲು ಸರಿಯಾದ ದಾರಿ ಇಲ್ಲದೇ ಸ್ವಲ್ಪ ಮಳೆ ಬಂದು ನಿಂತರೂ ಸಹ 4-5 ದಿನಗಳ ಕಾಲ ನೀರು ಹಾಗೇ ಇದ್ದು ಗಬ್ಬು ಗಲೀಜು ಆಗಿ ನಾರುತ್ತಿರುವುದಲ್ಲದೇ ಸೊಳ್ಳೆಗಳಿಗೆ ಹಾಗೂ ಇತರೇ ಹುಳಹುಪಡಿಗಳಿಗೆ ಸ್ವರ್ಗವಾಗಿ ಪರಿಣಮಿಸಿವೆ, ಅಲ್ಲದೇ ಡೆಂಗ್ಯೂ ಬಗ್ಗೆ ವಿಪರೀತ ಅತಂಕ ಇದ್ದು ಈಗಲೂ ಅನೇಕ ಕೇಸ್ ಗಳು ದಾಖಾಲಾಗುತ್ತಿದ್ದು ಸ್ವಲ್ಪ ಸ್ಥಿತಿವಂಥ ನಾಗರೀಕರು ದಾವಣಗೇರಿ, ಹೊಸಪೇಟೆ ಆಸ್ಪತ್ರೆ ಗಳ ಸದ್ದೀಲ್ಲದೇ ಪ್ರಯಾಣಿಸುತ್ತಿದ್ದಾರೆ. ಬಡವರು ಇತರೇ ಸಾಮಾನ್ಯ ರೋಗಿಗಳು ಇದೇ ರಸ್ತೆಯ ಮೂಲಕವೇ ಕೊಟ್ಟೂರಿನ ಸರ್ಕಾರಿ ಅಸ್ಪತ್ರೆಗೇ ಹೋಗಬೇಕಾದ ಪರಸ್ಥಿತಿ ಇದೆ
ಸಂಭಂಧಪಟ್ಟ ಅಧಿಕಾರಿ ವರ್ಗದವರು ಸರಿಪಡಿಸುತಾರೆಂಬ ನೀರೀಕ್ಷೆಯಲ್ಲಿ ಸುತ್ತ ಹಿ ಮುತ್ತಲಿನ ನಿವಾಸಿಗಳೂ ಹಾಗೂ ಈ ರಸ್ತೆ ಆಶ್ರಯಿಸಿ ನಂಬಿ ಪ್ರಯಾಣ ಮಾಡುತ್ತಿರುವ ಬನಶಂಕರಿ ಅಮ್ಮನವರ ದೇವಸ್ಥಾನಕ್ಕೇ ಹೋಗುವ ಭಕ್ತಾಧಿಗಳು, ಹರಪನಹಳ್ಳಿ ರಸ್ತೆಗೇ ಹೋಗುವ ವಾಹನ ಸವಾರರು, ಸೈಕಲ್ ಮೇಲೆ ಸ್ಕೂಲ್ಗೇ ಹೋಗುವ ಚಿಕ್ಕ ಮಕ್ಕಳು ಯಾವಾಗ ರಸ್ತೆ ಸರಿಯಾಗುತ್ತೇ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಾ ದಿನಾ ದೂಡುತ್ತಿದ್ದಾರೆ ಕೂಡಲೇ ರಸ್ತೆ ಸರಿಪಡಿಸಿದ್ದಲ್ಲಿ ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳಲು ಸಹ ನಾಗರೀಕರು ತಯಾರಿದ್ದಾರೆ. ಇನ್ನೂ ಸ್ವಲ್ಪ ಹಾಳಾಗಿ ಓಡಾಡಲು ಬಾರದ ರೀತಿ ಅಗುವ ಮೊದಲೇ ಇಲ್ಲಿ ನುಡು ರಸ್ತೆಯಲ್ಲೇ ನಿಲ್ಲುವ ನೀರನ್ನು ಕಾಲುವೆಗೇ ಹರಿಯುವಂತೆ ಮಾಡಿ ಸೊಳ್ಳಗಳಿಂದ ಗಬ್ಬುನಾತದಿಂದ ರಕ್ಷಿಸುತಾರೆಂಬುದು ಎಲ್ಲರ ನೀರೀಕ್ಷೆಯಾಗಿದೆ.