ಮಾಸಾಬಿ ದಗರ್ಾದ ಉರುಸ ಆಚರಣೆ
ಲೋಕದರ್ಶನ ವರದಿ
ಹುಕ್ಕೇರಿ: ಹೂವಿನಕೇರಿ ಹುಕ್ಕೇರಿಯ ಹಿಂದೂ-ಮುಸ್ಲಿಮ ಬಾಂಧವರ ಆರಾಧ್ಯ ದೇವಿ ಪೀರ ಮಾಸಾಬಿ ದಗರ್ಾದ ಸಂದಲ ಹಾಗೂ ಉರುಸ ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ಹಾಗೂ ಶನಿವಾರದಂದು ಭಕ್ತಿ, ಶೃದ್ಧೆ ಹಾಗೂ ಉತ್ಸಾಹದ ವಾತಾವರಣದಲ್ಲಿ ಆಚರಿಸಲಾಯಿತು.
ದಿ.23ರಂದು ಮಧ್ಯಾಹ್ನ ದಗರ್ಾದ ಬಳಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಸಂದಲ ಹಾಗೂ ರಾತ್ರಿ ಕವ್ವಾಲಿ ಕಾರ್ಯಕ್ರಮ ನಡೆದವು. ಬೆಳಗಿನ ಜಾವ ಪೋಲಿಸ ಇಲಾಖೆ ವತಿಯಿಂದ ವಾದ್ಯ ಮೇಳದೊಂದಿಗೆ ಕುದುರೆ ಮೇಲೆ ಗಲೀಪ ಹಾಗೂ ಹೂವಿನ ಚಾದರ ತಂದ ನಂತರ ವೃತ್ತ ಪೋಲಿಸ ನಿರೀಕ್ಷಕರಾದ ಎಸ್.ಕೆ. ಹೊಳೆನ್ನವರ, ಅಜರ್ುನ ಮಸರಗುಪ್ಪಿ ಹಾಗೂ ಇತರ ಸಿಬ್ಬಂದಿ ಮಾಸಾಬಿ ದಗರ್ಾಕ್ಕೆ ಗಲೀಪ ಹಾಗೂ ಹೂವಿನ ಚಾದರ ಹೊದಿಸಿ ಪೂಜೆ ಸಲ್ಲಿಸಿದ ನಂತರ ಅಡಕೆ ಮನೆಯವರಿಂದ ಗಲೀಪ ಹೊದಿಸಲಾಯಿತು. ಉರುಸ ನಿಮಿತ್ತ ದಗರ್ಾಕ್ಕೆ ಬಣ್ಣ ಹಾಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಈ ಉರುಸ ನಂತರ ನಗರದ ಪೀರಪನ್ನಾ ಹಾಗೂ ಹಜಬರವಾಡಿಯ ಗಂಜುಲ ಬಹಾರ ದಗರ್ಾದ ಉರುಸ ನಡೆಯಲಿವೆ. ಹಿಂದೂ-ಮುಸ್ಲಿಮ ಭಾವೈಕ್ಯತೆಯ ಹುಕ್ಕೇರಿ ನಗರದಲ್ಲಿ ಪೀರ ಮಾಸಾಬಿ ದಗರ್ಾದ ಉರುಸ ಶಾಂತಿಯುತವಾಗಿ ಜರುಗಿತು.