ಶಿಗ್ಗಾವ್

ಸಾಧಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮ

ಸಾಧಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 12:  ಕಲಾವಿದರು ಈ ನಾಡಿನ ಆಸ್ತಿ ನಿಜವಾದ ಕಲಾವಿದರಿಗೆ ಬೆಲೆ ಸಿಕ್ಕಾಗ ಮಾತ್ರ ಅವರ ಶ್ರಮ ನಿಜಕ್ಕೂ ಸಾರ್ಥಕ ಎಂದು ಕರ್ನಾಟಕ  ಜಾನಪದ ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ ಅವರು ಹೇಳಿದರು.

 ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ನಡೆದ ಸಾಧಕರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನ ಕಲಾವಿದರೊಂದಿಗೆ ಅವಿನಾಭಾವ ಸಂಬಂಧ ಹೊಂದಿ ಅವರೊಂದಿಗೆ ನಿರಂತರ ಸಂಪರ್ಕದೊಂದಿಗೆ ಕಲಾವಿದರ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದೆನೆ ಕಲಾವಿದರು ತಮ್ಮ ಇಡಿ ಜೀವನವನ್ನೆ ಕಲಾ ಸೇವೆಗೆ ಮುಡಿಪಾಗಿಟ್ಟಿರುತ್ತಾರೆ ಅವರ ಸೇವೆಗಿಂತ ನಮ್ಮ ಸೇವೆ ಏನು ಅಲ್ಲ ಹಾಗಾಗಿ ನಾಡಿನ ಕಲಾ ಶ್ರೀಮಂತಿಕೆಗೆ ಹುಲಸೋಗಿ ಗ್ರಾಮದ ಕಲಾವಿದರ ಕೊಡುಗೆ ಅಪಾರ ಎಂದರು.

 ಮುಖ್ಯ ಅತಿಥಿಗಳಾಗಿದ್ದ ಕಲಾವಿದರು ಹಾಗೂ ನಾಟಕ ಅಕಾಡಮಿ ಮಾಜಿ ಸದಸ್ಯ ಶಿವಣ್ಣ ಅರಳಿಹೊಂಡ ಅವರು ಮಾತನಾಡಿ ಹುಲಸೋಗಿ ಗ್ರಾಮವು ಇಂದು ಅಂತರಾಷ್ರ್ಟೀಯ ಮಟ್ಟಕ್ಕೆ ಗುರುತಿಸಿಕೊಳ್ಳಲು ದಿ.ಟಿ.ಬಿ ಸೊಲಬಕ್ಕನವರ ಅವರು ಕಾರಣ ಅವರ ಮಾರ್ಗದರ್ಶನದಲ್ಲಿ ಇಂದು ಈ ಗ್ರಾಮದ ಅನೇಕ ಕಲಾವಿದರು ಗ್ರಾಮದ ಕೀತರ್ಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ ಎಂದರು. 

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರುದ್ರಗೌಡ್ರ ಪಾಟೀಲ ಅವರು ಮಾತನಾಡಿ ನಾನು ಗ್ರಾಮ ಪಂಚಾಯತ ಸದಸ್ಯನಾದ ಮೇಲೆ ಹುಲಸೋಗಿ ಗ್ರಾಮದ ಅನೇಕ ಹಿರಿಯರ ಪರಿಚಯವಾಗಿ ಅವರೊಂದಿಗೆ ಇಲ್ಲಿಯ ಕಲೆ ಮತ್ತು ಕಲಾವಿದರ ಸಾಧನೆ ಇಡಿ ಪ್ರಪಂಚಕ್ಕೆ ಗೊತ್ತಿರುವಂತಹದ್ದು ಹಾಗಾಗಿ ನಾನು ಕೂಡಾ ಕಲೆ ಮತ್ತು ಕಲಾವಿಧರಿಗೆ ನನ್ನ ಕೈಲಾದ ಸಹಾಯ ಮಾಡಲು ಸಧಾ ಸಿದ್ದನಾಗಿರುತ್ತೆನೆ ಎಂದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಪಕ್ಕಿರೇಶ ಕೊಂಡಾಯಿ ಇಂದು ನಾಡಿನಾಧ್ಯಂತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸುವುದು ಮತ್ತು ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಹಾಗಾಗಿಯೇ ಅನೇಕ ಪ್ರಶಸ್ತಿ ಪಡೆದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. 

 ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಡಾ.ಶ್ರೀಶೈಲ್ ಹುದ್ದಾರ ವೇಧಾರಾಣಿ ಧಾಸನೂರ ಜಯದೇವ ಅಗಡಿ ಎ.ಪಿ.ಎಮ್.ಸಿ ಸದಸ್ಯ ತಿಪ್ಪಣ್ಣ ಸಾತಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ರ್ಕತ ಕಲಾವಿದರಾದ ಕೊಟ್ರೇಶ ಮಾಸ್ತರ ಬೆಳಗಲಿ ಬಸವರಾಜ ಶಿಗ್ಗಾಂವ ಸಿದ್ಲಿಂಗಪ್ಪ ನೆರೆಗಲ್ ಗೋವಿಂದಪ್ಪ ತಳವಾರ ಚಂದ್ರಶೇಖರಯ್ಯ ಗುರಯ್ಯನವರ ಶಂಕರ ಅರ್ಕಸಾಲಿ ಸುರೇಂದ್ರ ಹುಲ್ಲಂಬಿ  ಪಕ್ಕಿರೇಶ ಬಿಸೆಟ್ಟಿ ಶರೀಫ ಮಾಕಪ್ಪನವರ ಬಸವರಾಜ ಕರಡಿ ರಾಮಣ್ಣ ಕುರುಬರ ಹಾಗೂ ಇತರರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸೀತವ್ವ ಗಾಜೂನವರ ನಾಗರಾಜ ಸಿಂಧೆ ರಾಜಪ್ಪ ಕೊಕಾಟಿ ಪರಶುರಾಮ ಕೊಂಡಾಯಿ ಹಾಗೂ ಇತರರು ಉಪಸ್ಥಿತರಿದ್ದರು ಶಿವಕುಮಾರ ಬನ್ನೂರ ಕಾರ್ಯಕ್ರಮ ನಿರೂಪಿಸಿದರು 

ಸುದ್ದಿ ಓದಿ