ಶಿಗ್ಗಾವ್

ಮುಖ್ಯೋಪಾಧ್ಯಾಯ ದಂಪತಿಗಳಿಗೆ ಗೌರವ ಡಾಕ್ಟರೇಟ್

ಮುಖ್ಯೋಪಾಧ್ಯಾಯ ದಂಪತಿಗಳಿಗೆ ಗೌರವ ಡಾಕ್ಟರೇಟ್

ಲೋಕದರ್ಶನ ವರದಿ

ಶಿಗ್ಗಾವಿ 31: ಶಿಗ್ಗಾವಿ ತಾಲೂಕಿನ ಹೋತನಹಳ್ಳಿಯಲ್ಲಿರುವ ಸರ್ಕಾರಿ  ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ವಿನೋದ ಎನ್ ಪಾಟೀಲ್ ಹಾಗೂ ಸವಣೂರಿನ ದಿ ಲಯನ್ಸ್ ವಿದ್ಯಾಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸನಗೌಡ ದ್ಯಾಮನಗೌಡ್ರು ದಂಪತಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಧಾನ ಮಾಡಲಾಗಿದೆ.

ಹುಬ್ಬಳ್ಳಿಯ ಜನನಿ ಗ್ರೂಪ್ ಆಫ್ ಎಜುಕೇಶನ್ ಸಂಸ್ಥೆಯ ಡಿನ್ ಆಗಿರುವ ಡಾಕ್ಟರ್ ಎಸ್ ಬಿ ಯಾದವಾಡ ಅನುಮೋದಿಸಿದ್ದು ಶಿಗ್ಗಾವಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಶಿಕ್ಷಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಅಭಿನಂದಿಸಿದ್ದಾರೆ 

ಸುದ್ದಿ ಓದಿ