ಬಳ್ಳಾರಿ

ಹೊನ್ನೂರಸ್ವಾಮಿ ವೈ. ಅವರಿಗೆ ಪಿಎಚ್‌.ಡಿ ಪ್ರದಾನ

ಹೊನ್ನೂರಸ್ವಾಮಿ ವೈ. ಅವರಿಗೆ ಪಿಎಚ್‌.ಡಿ ಪ್ರದಾನ

ಬಳ್ಳಾರಿ 30: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪೂರ್ಣಕಾಲಿಕ ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ ಹೊನ್ನೂರಸ್ವಾಮಿ ವೈ. ಅವರು "ಅಪರೇಷನಲ್ ಪರ್ಫಾರ್ಮನ್ಸ್‌ ಆಫ್ ಆನ್ಲೈನ್ ಎಜುಕೇಶನ್ ಅಪ್ಸ್‌ - ಎ ಸ್ಟಡಿ ಆಫ್ ಸೆಲೆಕ್ಟ್‌ ಅಪ್ಸ್‌ ಆಕ್ಟಿಂಗ್ ಇನ್ ಕಲ್ಯಾಣ ಕರ್ನಾಟಕ ರೀಜನ್"  ಪ್ರೌಢ ಪ್ರಬಂಧ ಪ್ರಸ್ತುತಪಡಿಸಿದ ನಂತರ, ಪಿಎಚ್‌.ಡಿ ಪದವಿ ಪ್ರದಾನಮಾಡಲಾಗಿದೆ.  

ಈ ಮಹತ್ವದ ಪ್ರೌಢ ಪ್ರಬಂಧವು ಆನ್ಲೈನ್ ಶಿಕ್ಷಣ ಅಪ್‌ಗಳ ಕಾರ್ಯಕ್ಷಮತೆ ಕುರಿತು ಹೊಸ ಪರಿಚಯವನ್ನು ಒದಗಿಸುವಂತಾಗಿದೆ. ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದ ಪ್ರಗತಿಪರ ಸಹ ಪ್ರಾಧ್ಯಾಪಕರಾದ ಡಾ. ಪ್ರಶಾಂತ್ ಕೆ. ಸಿ. ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.  

ಇದು ಅವರ ಶ್ರದ್ಧೆ, ಪರಿಶ್ರಮ ಮತ್ತು ಪ್ರತಿಭೆಗೆ ಸಲ್ಲುವ ಸರಿಯಾದ ಗೌರವದ ಕ್ಷಣವಾಗಿದೆ. 


ಸುದ್ದಿ ಓದಿ