ರಾಷ್ಟ್ರೀಯ ರೋಡ್ ಸೈಕ್ಲಿಂಗ ಚಾಂಪಿಯನಶೀಪಗೆ ಆಯ್ಕೆಯಾದ ಹೊನ್ನಪ್ಪ ಧರ್ಮಟ್ಟಿ
ಮಹಾಲಿಂಗಪುರ 09 : ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮವಿದ್ದವರಿಗೆ ವಯಸ್ಸು, ಪ್ರದೇಶ, ಅನುಭವಗಳ ಹಂಗಿಲ್ಲದೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಲ್ಲರೂ ಎಂಬುದಕ್ಕೆ ಉತ್ತಮ ಉದಾಹರಣೆಯಾದ ಯುವಪ್ರತಿಭೆ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಸಮೀಪದ ಕಡೆಯ ಪುಟ್ಟ ಗ್ರಾಮ ಮಾರಾಪುರದ ಉದಯೋಣ್ಮುಖ ಸೈಕ್ಲಿಂಗ ಕ್ರೀಡಾಪಟು ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಎರಡನೇ ಬಾರಿಗೆ ರಾಷ್ಟ್ರಮಟ್ಟದ ರೋಡ ಸೈಕ್ಲಿಂಗ ಚಾಂಪಿಯನಶಿಪ್ ಆಯ್ಕೆ ಆಗುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಮೈಸೂರಲ್ಲಿ ನಡೆದ 16 ವರ್ಷದೊಳಗಿನ ಬಾಲಕರ ರಾಜ್ಯ ಮಟ್ಟದ 15 ನೇ ರೋಡ ಸೈಕ್ಲಿಂಗ ಚಾಂಪಿಯನಶಿಪನಲ್ಲಿ ದ್ವಿತೀಯ ಸ್ಥಾನದೊಂದಿಗೆ ಎರಡನೇ ಬಾರಿಗೆ ರಾಷ್ಟ್ರಮಟ್ಟದ ರೋಡ ಸೈಕ್ಲಿಂಗ ಚಾಂಪಿಯನಶೀಪಗೆ ಆಯ್ಕೆಯಾಗಿದ್ದಾನೆ.16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸಿದ್ದ ರಾಜ್ಯದ ವಿವಿಧ ಕ್ರೀಡಾ ಶಾಲೆಗಳ ಒಟ್ಟು 33 ಬಾಲಕರಲ್ಲಿ 21 ನಿಮಿಷ 26 ಸೆಕೆಂಡಗಳಲ್ಲಿ 30 ಕಿ ಮೀ ಕ್ರಮಿಸಿ ಇದೆ ಡಿಸೇಂಬರ 4 ರಂದು ಒರಿಸ್ಸಾದ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ರೋಡ ಸೈಕ್ಲಿಂಗ ಚಾಂಪಿಯನ ಶಿಪನಲ್ಲಿ ಭಾಗವಹಿಸಲಿದ್ದಾನೆ
ಎರಡನೇ ಬಾರಿ ಆಯ್ಕೆ : 8 ನೇ ತರಗತಿಯಲ್ಲಿ ಓದುತ್ತಿದ್ದಾಗ 2022 ರ ಜುಲೈ ತಿಂಗಳಿನಿಂದ ಚಂದರಗಿ ಕ್ರೀಡಾವಸತಿ ಶಾಲೆಯ ಸೈಕ್ಲಿಂಗ ಕೋಚ್ ಭೀಮಶಿ ವಿಜಯನಗರ ಅವರ ಮಾರ್ಗದರ್ಶನದಲ್ಲಿ ದಿನನಿತ್ಯ ಮುಂಜಾನೆ ಸಾಯಂಕಾಲ ಸೇರಿ ನಿತ್ಯ 4 ರಿಂದ 5 ಗಂಟೆಗಳ ಕಠಿಣ ಅಭ್ಯಾಸದ ಫಲವಾಗಿ ಇಂದು ರಾಷ್ಟ್ರಮಟ್ಟದ ಟ್ರಾಕ್ ಸೈಕ್ಲಿಂಗ ಸ್ಪರ್ಧೆಗೆ ಆಯ್ಕೆಯಾಗಿದ್ದು ಹೊನ್ನಪ್ಪನ ಅವಿರತ ಕಠಿಣ ಪರಿಶ್ರಮ, ಅಚಲ ಕ್ರೀಡಾಸಕ್ತಿಯೇ ಕಾರಣ. ಕಳೆದ ವರ್ಷವೂ ರಾಷ್ಟ್ರಮಟ್ಟದ ಸೈಕ್ಲಿಂಗ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಗೆದ್ದುಕೊಂಡಿದನ್ನು ಇಲ್ಲಿ ಸ್ಮರಿಸಬಹುದು.ಗ್ರಾಮೀಣ ಪ್ರತಿಭೆ : ಬಾಗಲಕೋಟ ಜಿಲ್ಲೆಯ ಗಡಿ ಗ್ರಾಮವಾದ ಮಾರಾಪುರದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಚಿದಾನಂದ ಮತ್ತು ಶಾಂತ ದಂಪತಿಗಳಿಗೆ ಜನಿಸಿದ ಹೊನ್ನಪ್ಪ ಸದ್ಯ ಹತ್ತನೆಯ ತರಗತಿ ಓದುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆ 1ರಿಂದ 5 ನೇ ತರಗತಿಯನ್ನು ಸಮೀರವಾಡಿಯ ಕೆ ಜಿ ಸೋಮಯ್ಯಾ ಸಿ ಬಿ ಎಸ್ ಸಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿಗೊಳಿಸಿ ನಂತರ 6 ನೇ ತರಗತಿಯಿಂದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾನೆ. ಮೊದಲಿನಿಂದಲೂ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಬ್ಯಾಡಮಿಂಟನ ಆಟದಲ್ಲಿ ಆಸಕ್ತಿ ಹೊಂದಿದ್ದ.ಆದರೆ ಕೋವಿಡ ಕಾರಣ ಎರಡು ವರ್ಷ ಯಾವುದೇ ಕ್ರೀಡಾ ಚಟುವಟಿಕೆ ನಡೆಯಲಿಲ್ಲ ನಿರಾಸೆ ಅನುಭವಿಸಿದ ಸರಿಯಾದ ಕೋಚ್ ಸಿಗದೇ ಕಾರಣ ಅನಿವಾರ್ಯವಾಗಿ ಕಳೆದ ಎರಡು ವರ್ಷಗಳಿಂದ ಸೈಕ್ಲಿಂಗ ತರಬೇತಿ ಪಡೆಯುತ್ತಿದ್ದಾನೆ. ಹೊನ್ನಪ್ಪ
ಹೆಚ್ಚಿನ ತರಬೇತಿ ಅವಶ್ಯಕತೆ : ಈ ಗ್ರಾಮೀಣ ಪ್ರತಿಭೆಗೆ ಉನ್ನತ ತರಬೇತಿ ಕೊಟ್ಟರೆ ಈ ಹೊನ್ನಪ್ಪ ನಮ್ಮ ದೇಶದ ಸೈಕ್ಲಿಂಗ ಕ್ಷೇತ್ರದ ಅಪ್ಪಟ ಚಿನ್ನಪ್ಪ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಹೊನ್ನಪ್ಪ ಕಳೆದ ಎರಡು ವರ್ಷದಿಂದ ನಮ್ಮ ಶಾಲೆಯ ವಿದ್ಯಾರ್ಥಿ ಸೈಕ್ಲಿಂಗ ಕ್ರೀಡೆಯಲ್ಲಿ ತನ್ನನ್ನು ತಾನು ಅರ್ಿಸಿಕೊಂಡು ಸಾಧಿಸಬೇಕೆಂಬ ಅಚಲ ಹಂಬಲದಿಂದ, ಕಠಿಣ ಪರಿಶ್ರಮ,ನಿರಂತರ ಅಭ್ಯಾಸ,ಶಾಲೆಯ ಸಹಕಾರ ಪೋಷಕರ ಸಹಾಯದೊಂದಿಗೆ ಸತತವಾಗಿ ಎರಡನೇ ಬಾರಿಗೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ.ಶಾಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆತರೆ ರಾಷ್ಟ್ರೀಯ ಸೈಕ್ಲಿಂಗ ಪಟು ಆಗುವುದರಲ್ಲಿ ಎರಡು ಮಾತ್ತಿಲ್ಲ. "ಭೀಮಶಿ ವಿಜಯನಗರ ಸೈಕ್ಲಿಂಗ ತರಬೇತುದಾರ ಕ್ರೀಡಾ ವಸತಿ ಶಾಲೆ ಕೆ ಚಂದರಗಿ