ಗ್ರಾಮ ಪಂಚಾಯತಿ ಹಕ್ಕುಗಳಿಗಾಗಿ ಪ್ರಾಮಾಣಿಕ ಪ್ರಯತ್ನ- ಕೆ.ಸಿ.ಕೊಂಡಯ್ಯ
ಹಗರಿಬೊಮ್ಮನಹಳ್ಳಿ 27: 2021ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಿದರೆ ಗ್ರಾಮ ಪಂಚಾಯತಿ ಹಕ್ಕುಗಳಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಂಗ್ರೇಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಹೇಳಿದರು.
ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಕಾಂಗ್ರೇಸ್ ಪಕ್ಷದ 2021ರ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೆ.ಸಿ.ಕೊಂಡಯ್ಯಪರ ಮತಯಾಚನೆ ಮಾಡಿ ಮಾತನಾಡಿದರು, ಪಕ್ಷದಲ್ಲಿ ಅವಿರತವಾಗಿ ಶ್ರಮಿಸಿದ ಪರಿಣಾಮ ತಿರಸ್ಕರಿಸದೇ ಅಭ್ಯರ್ಥಿಯನ್ನಾಗಿ ಪಕ್ಷ ಘೋಶಿಸಿದೆ, ಪಕ್ಷ ನೀಡಿದ ಕಾರ್ಯವನ್ನು ಚಾಚು ತಪ್ಪದೇ ಮಾಡಿದ್ದು ಕಟ್ಟ ಕಡೆಯ ವ್ಯೆಕ್ತಿಯನ್ನು ಗಣನೆಗೆ ತೆಗೆದುಕೊಂಡು, ಅಧಿಕಾರದಲ್ಲಿದ್ದಾಗ ಪಕ್ಷ ಯಾವುದೆಂದು ನೋಡದೇ ತಾರತಮ್ಯ ಮಾಡದೇ ಕಾರ್ಯನಿರ್ವಹಿಸಿದ್ದೇನೆ, 2018ರಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಸ್ಥಳೀಯ ಸಂಸ್ಥೆಗಳ ಹಕ್ಕುಗಳಿಗಾಗಿ ಪ್ರಮಾಣಿಕವಾಗಿ ಹೋರಾಡಿದ್ದೆನೆ, ಗಾಮ ಪಂಚಾಯತಿಗಳಲ್ಲಿ ಕೆಡಿಪಿ ಸಭೆಯನ್ನು ನಡೆಸಿಕೊಳ್ಳುವುದನ್ನು ಪ್ರೇರೇಪಿಸಿದ್ದೆನೆ,ಗ್ರಾ.ಪಂ.ಅಭಿವೃಧ್ಧಿ ಪಡಿಸುವುದಕ್ಕೆ ಮುಂದಾಗಿದ್ದೆನೆ, ಮತ್ತೊಮ್ಮೆ ತಮ್ಮ ಸೇವೆ ಮಾಡಲು ಆಯ್ಕೆ ಮಾಡುವಂತೆ ಕೋರಿದರು.ಪ್ರತಿ ಪಂಚಾಯತಿಗೆ ಭೇಟಿ ನೀಡಿದ್ದೆನೆ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತಿದ್ದು ಸಮಸ್ಯೆಗಲಿಗೆ ಸೂಕ್ತ ಪರಿಹಾರವನ್ನು ನಿಡಿದ್ದು ಮಗದೊಮ್ಮೆ ಅವಕಾಶ ಕೋರಿದರು.ಬಿಜೆಪಿ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಒಬ್ಬ ಅಬ್ಯರ್ಥಿಯನ್ನು ಹಾಕಿದ್ದು ತಳಬುಡ ತಿಳಿಯದವರಿಗೆ ಮತ ನೀಡಿ ಅಬಿವೃಧ್ಧಿ ಕಾರ್ಯಗಳಿಗೆ ಕಡಿವಾಣ ಹಾಕದಂತೆ ಮನವಿ ಮಾಡಿದರು.
ಶಾಸಕ ಎಸ್.ಭೀಮಾನಾಯ್ಕ್ ಮಾತನಾಡಿ ಬಿಜೆಪಿ ಪಕ್ಷವು ಮನೆಯೊಂದು ಮೂರು ಬಾಗಿಲು ಆಗಿವೆ, ಮಠಾಧೀಶರನ್ನು ಒಲೈಕೆ ಮಾಡುವುದಕ್ಕೆ ಬಿಜೆಪಿ ಟೆಂಪಲ್ ರನ್ ಮಾಡುತ್ತಿದ್ದಾರೆ, ಅಖಂಡ ಬಳ್ಳಾರಿ ಜಿಲ್ಲೆ ಕಾಂಗ್ರೇಸ್ ಪಕ್ಷವು ಒಗ್ಗಟ್ಟಾಗಿದೆ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಕಳೆದ ಬಾರಿಗಿಂತ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಭರವಸೆಯನ್ನು ನೀಡಿದರು. ಪ್ರಸ್ತುತ ಜಿಲ್ಲಾ ಉಸ್ತವಾರಿ ಸಚಿವರು ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿದರೆ ಕಸದ ಬುಟ್ಟಿಗೆ ಮತ ನೀಡಿದಂತೆ ಎಂಬ ಹೇಳಿಕೆಗೆ ಉತ್ತರಿಸಿ 2018ರಲ್ಲಿ ಗೆದ್ದು ಬೀಗಿದ್ದು ಇದೇ ಕಸದ ಬುಟ್ಟಿಯಿಂದ ಎಂಬುದನ್ನು ಮರೆಯದಿರಲಿ ಎಂದರು.
ಬಳ್ಳಾರಿ ಗ್ರಾಮೀಣ ಭಾಗದ ಶಾಸಕ ನಾಗೇಂದ್ರ ಮಾತನಾಡಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೇಸ್ ಪಕ್ಷದ ಸದಸ್ಯರುಗಳ ಸೇರಿದಂತೆ ಶಾಸಕರ ಕ್ಷೇತ್ರಗಳಿಗೆ ಅನುದಾನಗಳನ್ನು ನೀಡುತ್ತಿಲ್ಲ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಯಾವ ಪಕ್ಷ ಎಂದು ನೋಡದೆ ಅವರ ಕೆಲಸಗಳನ್ನು ಮಾಡಿಕೊಟ್ಟಿರುವ ವ್ಯಕ್ತಿ ಎಂದರೆ ಅದು ಕೆ.ಸಿ.ಕೊಂಡಯ್ಯರವರು, ಬಿಜೆಪಿಯ ಬುಡುಬಡುಕೆ ಕತೆಗಳಿಗೆ ತಮ್ಮ ಮತಗಳನ್ನು ಮಾರಿಕೊಳ್ಳದೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೋರಿದರು. ಕಾಂಗ್ರೇಸ್ ಪಕ್ಷವು ಜಿಲ್ಲೆಗೆ 371ಜೆ ಎಂಬ ಕೊಡುಗೆ ನೀಡಿದೆ, ಆಮೀಷಕ್ಕೆ,ಅಸೆಗಳಿಗೆ ಬಲಿಯಾಗದೇ ಎಚ್ಚರ ವಹಿಸಲು ಕರೆ ನೀಡಿ ಕೊಂಡಯ್ಯ ಅವರ ಪರ ಮತಯಾಚನೆ ಮಾಡಿದರು.
ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಅಲ್ಲ ವೀರಭದ್ರಪ್ಪ, ರಾಜ್ಯ ಸಭಾ ಸದಸ್ಯ ಸಯ್ಯದ್ ನಾಸೀರ್ ಹುಸೇನ್,ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರವೀಂದ್ರ ನಾಯ್ಕ್, ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ರಫೀಕ್, ಅಶೋಕ್, ಎಂ.ಎಂ.ಜೆ. ಹರ್ಷವರ್ಧನ್ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.