ಹೋಳಿ ಹಬ್ಬ: ರಂಗದೋಕುಳಿಯಲ್ಲಿ ಮಿಂದೆದ್ದ ಯುವಜನ
ಮಹಾಲಿಂಗಪುರ 27: ಸ್ಥಳೀಯ ಬಿಜೆಪಿ ಮುಖಂಡ ಶಿವಾನಂದ ಅಂಗಡಿ ನೇತೃತ್ವದಲ್ಲಿ ನಡುಚೌಕಿಯಲ್ಲಿ ಭರ್ಜರಿ ಹೋಳಿ ಹಬ್ಬ ಆಚರಿಸಲಾಯಯಿತು.
ಸಾವಿರಾರು ಸಂಖ್ಯೆಯಲ್ಲಿ ಯುವಕರು, ಮಕ್ಕಳು, ಮಹಿಳೆಯರೂ ಸೇರಿದಂತೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ಬಣ್ಣದಲ್ಲಿ ಮಿಂದೆದ್ದು, ಡಿಜೆ ಸೌಂಡ್ಗೆ ಹೆಜ್ಜೆ ಹಾಕಿ ಅದ್ಧೂರಿ ಆಚರಣೆ ಮಾಡಿದರು.
ಮುಖಂಡರಾದ ಶಿವಾನಂದ ಅಂಗಡಿ, ರಾಜು ಚಮಕೇರಿ, ಯಲ್ಲಪ್ಪ ಹಟ್ಟಿ, ಸುರೇಶ ಹೊಸೂರ, ಶಂಕರ ಕೋಳಿಗುಡ್ಡ, ಭೀಮಶಿ ಬಡಿಗೇರ, ಸಂತೋಷ ಹುದ್ದಾರ, ಮುತ್ತಪ್ಪ ದಲಾಲ, ಮಲ್ಲು ದಲಾಲ, ಬಸವರಾಜ ಪರೀಟ ಸೇರಿದಂತೆ ಸಾವಿರಾರು ಜನರಿಂದ ಸಂಗೀತದ ನಿನಾದ, ನೃತ್ಯ ಬೀದಿ ತುಂಬಿ ತುಳುಕುತ್ತಾ ಹೊಸ ಲೋಕವನ್ನೇ ಸೃಷ್ಠಿಸಿತ್ತು.