ಮಹಲಿಂಗಪುರ

ಹೋಳಿ ಹುಣ್ಣಿಮೆ: ಬೃಹತ್ ಹಲಗೆ ಹಬ್ಬ

ಹೋಳಿ ಹುಣ್ಣಿಮೆ: ಬೃಹತ್ ಹಲಗೆ ಹಬ್ಬ
ಹಲಗೆ ಹಬ್ಬದಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

ಮಹಾಲಿಂಗಪುರ27:  ಸ್ಥಳೀಯ ಸ್ವಾಮಿ ವಿವೇಕಾನಂದ ಪ್ರತಿಷ್ಠಾ ನ, ಹಿಂದೂ ಜಾಗರಣಾ ವೇದಿಕೆ, ವಿಶ್ವ ಹಿಂದೂ ಪರಿಷತ್ ಭಜರಂಗದಳ, ಶ್ರೀರಾಮ ಸೇನೆ ಮತ್ತು ಶ್ರೀರಾಮ ಸೇನಾ ಹಿಂದೂಸ್ಥಾನ ಹಾಗೂ ಇತರೆ ಹಿಂದೂ ಸಂಘಟನೆಗಳ ಸಹಯೋಗದಲ್ಲಿ ಹೋಳಿ ಹುಣ್ಣಿಮೆ (ಹಬ್ಬದ)ಪ್ರಯುಕ್ತ ಬೃಹತ್ ಹಲಗೆ ಹಬ್ಬ ಆಚರಿಸಲಾಯಿತು.

ಸ್ವಾಮಿ ವಿವೇಕಾನಂದರ ಬೃಹತ್ ಮೂರ್ತಿಯ ಮೆರವಣಿಗೆಗೆ ಶಾಸಕ ಹಾಗೂ ಕೆಎಚ್ ಡಿಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ ಮುಂತಾದ ಗಣ್ಯರು ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಹಲಗೆ ಬಾರಿಸುವುದರೊಂದಿಗೆ ಬಸವೇಶ್ವರ ವೃತ್ತದಲ್ಲಿ ಚಾಲನೆ ನೀಡಿದರು.

ವೃತ್ತದಿಂದ ಜೋಡುರಸ್ತೆ, ವಿವೇಕಾನಂದ ವೃತ್ತ, ನಡುಚೌಕಿ, ಜವಳಿ ಬಜಾರ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಗಾಂಧಿ ವೃತ್ತದವರೆಗೆ ಸಾಗಿತು.

ಸುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಕುದುರೆ ಕುಣಿತ, ಹಲಗೆ ಮೇಳ, ಕರಡಿ ಮೇಳ, ಡೊಳ್ಳು ವಾದನ ಹಾಗೂ ಭಗವಾಧ್ವಜಗಳು ಗಮನ ಸೆಳೆದವು.

ಪಿ ಎಸ್ ಐ ಜಿ.ಎಸ್.ಉಪ್ಪಾರ, ಪುರಸಭಾ ಸದಸ್ಯರಾದ ಚನ್ನಬಸು ಯರಗಟ್ಟಿ, ಶಿವಾನಂದ ಅಂಗಡಿ, ಶಿವಲಿಂಗ ಘಂಟಿ, ಭೀಮಶೀ ಗೌಂಡಿ, ರಾಜು ಚಮಕೇರಿ, ಹನುಮಂತ ಬುರುಡ, ರವಿ ಜವಳಗಿ, ಮಹಾಲಿಂಗಪ್ಪ ಗುಂಜಿಗಾವಿ, ಪ್ರಕಾಶ ಜೀರಗಾಳ, ಶಿವನಗೌಡ ಪಾಟೀಲ, ವಿಷ್ಣುಗೌಡ ಪಾಟೀಲ, ಶಂಕರಗೌಡ ಪಾಟೀಲ, ಅನಿಲ್ ಮಮದಾಪುರ, ರಾಜು ಕೋಳಿಗುಡ್ಡ,ರಾಜು ತಾಳಿಕೋಟೆ, ಬಾಳಕೃಷ್ಣ ಮಾಳವದೆ, ಶೇಖರ ಮಗದುಮ್, ಭೈರೇಶ ಆದೆಪ್ಪನವರ, ಬಸವರಾಜ ಮಡಿವಾಳರ, ಮಂಜು ಸಿಂಪಿ, ಅನಿಲ ಕಿರಿಕಿರಿ, ನಾಗರಾಜ ಭಜಂತ್ರಿ, ಭರತ್ ಕದ್ದಿಮನಿ, ಮಹಾಂತೇಶ ಗುಡೇಜಾಡರ, ಬಸವರಾಜ ಗಿರಿಸಾಗರ,ಮುರಿಗೇಶ ಬಿರಾದಾರ,ಅಭಿಷೇಕ ಹಾಸಲಕರ, ನಂದು ಲಾತೂರ ಇತರರು ಇದ್ದರು. 

ನಮ್ಮ ಯುವಕರು ಇಂದು ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ನಮ್ಮ ಹಬ್ಬ, ಹರಿದಿನ, ಸಂಸ್ಕೃತಿ, ಸಂಪ್ರದಾಯ ಮರೆಯುತ್ತಿದ್ದಾರೆ ಹಾಗಾಗಿ ನಮ್ಮ ಸನಾತನ ಸಂಸ್ಕೃತಿ ಪರಂಪರೆ ಉಳಿಸುವ ಜಾಗೃತಿ ನಿಟ್ಟಿನಲ್ಲಿ ಈಗ್ಗೆ 4 ವರ್ಷದಿಂದ ಈ ಬೃಹತ್ ಹಲಗೆ ಹಬ್ಬ ಆಚರಿಸಿಕೊಂಡು ಬಂದಿದ್ದೇವೆ, ಇದು ನಿರಂತರವಾಗಿ ಮುಂದುವರೆಯುತ್ತದೆ

ರವಿ ಜವಳಗಿ,

ಪುರಸಭಾ ಸದಸ್ಯರು.

ಸುದ್ದಿ ಓದಿ