ಹಿರೇಬಾಗೇವಾಡಿ ಬಳಿ ಟಿಪ್ಪರ ಮತ್ತು ಟ್ರ್ಯಾಕ್ಟರ್ ನಡುವೆ ರಸ್ತೆ ಅಪಘಾತ : ಓರ್ವನ ಸಾವು
ಬೆಳಗಾವಿ, ಜ, 25 : ಟಿಪ್ಪರ ಹಾಗೂ ಟ್ರ್ಯಾಕ್ಟರ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿಯು ಸ್ಥಳದಲ್ಲಿ ಯೇ ಮೃತಪಟ್ಟಿರುವ ಘಟನೆ ಹಿರೇಬಾಗೇವಾಡಿ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಬೆಳಗಾವಿಯ ಸುವರ್ಣ ಸೌಧದಿಂದ 2 ಕಿಮಿ ಅಂತರದಲ್ಲಿನ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಮಕಾರಟ್ಟಿ ಗ್ರಾಮದ ಸಮೀಪ ಕಿರಿದಾದ ಸೇತುವೆ ಬಳಿ ಬುಧವಾರ ಬೆಳಗ್ಗೆ ಟಿಪ್ಪರ ಹಾಗೂ ಟ್ರ್ಯಾಕ್ಟರ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು ತಿಳಿದು ಬಂದಿದೆ.
ಕಲ್ಲು ಖಡಿ ತುಂಬಿದ ವಾಹನ ಪಲ್ಟಿಯಾದ ಕಾರಣ ಖಡಿಯಲ್ಲಿ ಹೂತುಹೋಗಿದ್ದ ಮೃತನ ಶವವನ್ನು ಹೊರತೆಗೆಯಲಾಗಿದೆ. ಮೃತನ ಮಾಹಿತಿ ತಿಳಿದು ಬರಬೇಕಿದೆ. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.