ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ ಹಿಂದೂ ಸಮ್ಮೇಳನ: ಶೋಭಾ ಯಾತ್ರೆಯ ಅದ್ದೂರಿ ಮೆರವಣಿಗೆ

ರಾಣೆಬೆನ್ನೂರಲ್ಲಿ ಹಿಂದೂ ಸಮ್ಮೇಳನ: ಶೋಭಾ ಯಾತ್ರೆಯ ಅದ್ದೂರಿ ಮೆರವಣಿಗೆ

 ರಾಣೇಬೆನ್ನೂರು 08:  ಇಲ್ಲಿನ ಕೆಇಬಿ ದೇವಸ್ಥಾನ ಆವರಣದಿಂದ ರವಿವಾರ ಸಂಜೆ ನಗರದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ವಿಭಾಗದ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ, ಹಿಂದೂ ಸಮ್ಮೇಳನ ಸಮಿತಿಯು ಅದ್ದೂರಿ ಮೆರವಣಿಗೆ ಆಯೋಜಿಸಿತ್ತು, ಮೆರವಣಿಗೆಗೆ ಪುರ ಜನರು ಪೂಜೆ ಸಲ್ಲಿಸಿ ಭವ್ಯ  ಚಾಲನೆ ನೀಡಿದರು. ಬ್ರಹತ ರೂಪದಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುರುಷರು ಮಹಿಳೆಯರು, ಯುವಕ ಯುವಕ ಯುವತಿಯರು  ಪಾಲ್ಗೊಂಡಿದ್ದರು. ಮುಂಚೂಣಿಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆರಾಧಕ ಮಂಜುನಾಥ ಸ್ವಾಮಿ ಮಣೇಗಾರ, ಸಮಿತಿಯ ಮುಖಂಡರಾದ ರಾಜು ರೇವಣಕರ್, ಕೆ ಶಿವಲಿಂಗಪ್ಪ, ಪ್ರಕಾಶ್ ಬುರಡಿಕಟ್ಟಿ, ನವೀನ ಬಾಳನಗೌಡ್ರ, ಗೀರೀಶ ಬ್ಯಾಡಗಿ, ಸಂದೀಪ ಕುರುಡೇಕರ, ಪ್ರದೀಪ ಮಜ್ಜಿಗಿ, ವಿನಾಯಕ ಜೋಶಿ, ಯುವರಾಜ್ ಬ್ಯಾಡಗಿ, ನಾಗರಾಜ ಕೊರವರ, ಗಂಗಮ್ಮ ಹಾವನೂರ, ಪವಿತ್ರ ಹುಲ್ಮನಿ,

ಮಂಜುಳಾ ಹತ್ತಿ, ಗೀತಾ ಜಂಬಿಗಿ, ಭಾರತಿ ಜಂಬಿಗಿ, ಕೊಟ್ರೇಶಪ್ಪ ಎಮ್ಮಿ, ಡಾ. ಸಂಜಯ ನಾಯಕ, ಸರೋಜಾ ಉದಗಟ್ಟಿ ಸೇರಿದಂತೆ ನಗರ ಮತ್ತು ತಾಲೂಕಿನ ನೂರಾರು ಮುಖಂಡರು, ಗಣ್ಯರು ಉದ್ಯಮಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು. ಯುವಕ ಯುವತಿಯರು ಪಾಲ್ಗೊಂಡಿದ್ದರು. ಅದ್ದೂರಿಯಾಗಿ ಜರುಗಿದ ಮೆರವಣಿಗೆಗೆ ಪ್ರಸಿದ್ಧ ಅಟವಾಳಗಿ ವೀರಗಾಸೆ,ಸಮಾಳ ವಾದ್ಯ  ಮೇಳ ತಂಡಗಳು,ಭಜನೆ, ಜಾನಪದ ನೃತ್ಯ ತಂಡಗಳು, ತಮಾಷಾ ಗೊಂಬೆಗಳು, ಮತ್ತಿತರ ವಾದ್ಯ ಮೇಳಗಳು ಜನಪದ ಸಂಸ್ಕೃತಿ ಪ್ರತಿಬಿಂಬಿತ  ಕಲಾತಂಡಗಳು, ಮೆರಗು ನೀಡಿದವು. ದೇವಸ್ಥಾನ ಆವರಣದಿಂದ ಹೋರಾಟ ಭವ್ಯ ಭಾರಿ ಮೆರವಣಿಗೆಯು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹವಾಲ್ದಾರ ಹೊಂಡದ ವಾಲಿ ಜಮೀನಿನಲ್ಲಿ ಸಮ್ಮೇಳನವು ಸಮಾವೇಶಗೊಂಡಿತು. ರಾಣೆಬೆನ್ನೂರು ನಗರದಲ್ಲಿ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ ರವಿವಾರ ಸಂಜೆ ಆಯೋಜಿಸಿದ್ದ, ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ಭಾರಿ ನಾಗರಿಕ ಸಮುದಾಯ. 


ಸುದ್ದಿ ಓದಿ