ರಾಣೆಬೆನ್ನೂರಲ್ಲಿ ಮಾರ್ಚ್ 8,ರಂದು ಹಿಂದೂ ಜಾಗೃತಿ ಮಹಾ ಸಮ್ಮೇಳನ : ಶೋಭಾ ಯಾತ್ರೆ
ರಾಣೆಬೆನ್ನೂರು 07 : ಹಿಂದೂ ಸಮಾವೇಶವ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ ಸಮಗ್ರ ಭಾರತೀಯರ ಉತ್ಸವವಾಗಿ ಕಂಗೂ ಳಿಸಿದಾಗ ಮಾತ್ರ ಭಾರತೀಯರು ಪರಿಪೂರ್ಣರಾದಂತೆ ಅದಕ್ಕಾಗಿ ಹಿಂದೂ ಜಾಗೃತಿ ಸಮಾವೇಶವು ಇಂದಿನ ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆರಾಧಕರಾದ ಮಂಜುನಾಥ ಮಣೇಗಾರ ಗುರು ಸ್ವಾಮಿಗಳು ಹೇಳಿದರು. ಅವರು ಗುರುವಾರ ಸಬಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಸಂಸ್ಕೃತಿ ಮತ್ತು ಸಂಸ್ಕಾರ ಭಾರತೀಯರ ಪರಂಪರೆ. ಮನೆ ಮನೆಯಲ್ಲಿ ಪ್ರತಿಯೊಬ್ಬ ಭಾರತೀಯರು ಇಲ್ಲಿನ ಆಚಾರ, ವಿಚಾರ ಮತ್ತು ಸಂಸ್ಕೃತಿ ಸಂಸ್ಕಾರ ಅಳವಡಿಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದ ಅವರು, ಮಾರ್ಚ್ 8,2026 ರಂದು ರವಿವಾರ ದಕ್ಷಿಣ ಭಾಗದ ಹಿಂದೂ ಸಮ್ಮೇಳನವು ನಡೆಯಲಿದೆ ಎಂದರು. ಇನ್ನೂರ್ವ ಮುಖಂಡ, ಹಿರಿಯ ನ್ಯಾಯವಾದಿ, ಕೆ. ಶಿವಲಿಂಗಪ್ಪ ಅವರು, ಕಳೆದ ತಿಂಗಳು ಒಂದು ಬಾರಿ ಹಿಂದೂ ಸಮ್ಮೇಳನ ಅದ್ದೂರಿಯಾಗಿ ಜರುಗಿದೆ. ಪ್ರಸ್ತುತ ನಡೆಯಲಿರುವ ಸಮ್ಮೇಳನವು ದಕ್ಷಿಣ ಭಾಗದ್ದಾಗಿದೆ. ಸಮಗ್ರ ಭಾರತೀಯರು ದೇಶದ ಮತ್ತು ನಾಡಿನ ಅಭಿಮಾನ ಹೊಂದಬೇಕು .
ಇದು ಯಾವುದೇ ಜಾತಿ ಮತ ಪಂಥ ಪಕ್ಷಕ್ಕೆ ಸೀಮಿತವಾಗಿಲ್ಲ ಪ್ರತಿಯೊಬ್ಬ ಭಾರತೀಯನ ಅಭಿಮಾನದ ಸಂಕೇತವಾಗಬೇಕು. ನಡೆಯಲಿರುವ ಸಮ್ಮೇಳನವು ಈಗಾಗಲೇ ಸಿದ್ಧತೆ ನಡೆದಿದ್ದು, ಪ್ರತಿಯೊಬ್ಬ ನಾಗರಿಕರು ಭಾಗವಹಿಸಬೇಕು ಎಂದು ಕರೆ ನೀಡಿದರು. ರವಿವಾರ ಮಧ್ಯಾಹ್ನ 4: ಗಂಟೆಗೆ ಕೆ. ಇ.ಬಿ. ವಿನಾಯಕ ದೇವಸ್ಥಾನದಿಂದ ಶೋಭಾ ಯಾತ್ರೆ, ಬೈಕ್ ರ್ಯಾಲಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಾಲಿಯವರ ಜಮೀನಿನಲ್ಲಿ ಮುಕ್ತಾಯಗೊಂಡು ಸಮಾವೇಶಗೊಳ್ಳಲಿದೆ, ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿಯೊಬ್ಬ ನಾಗರಿಕರು ಪಾಲ್ಗೊಳ್ಳಬೇಕೆಂದು ಸಮಿತಿಯ ಉಪಾಧ್ಯಕ್ಷ ರಾಜು ರೇವಣಕರ್ ಕೋರಿದರು. ಮಾಧ್ಯಮಗೋಷ್ಠಿಯಲ್ಲಿ ಮುಖಂಡರಾದ, ಪ್ರಕಾಶ ಬುರಡಿಕಟ್ಟಿ, ಗೀರೀಶ್ ಮಜ್ಜಿಗಿ, ವಿನಾಯಕ ಜೋಶಿ, ಯುವರಾಜ್ ಬ್ಯಾಡಗಿ, ವಿನಯ್ ಬಾಳನಗೌಡ್ರ ಗಂಗಮ್ಮ ಹಾವನೂರ, ಮಂಜುಳಾ ಹತ್ತಿ ಸೇರಿದಂತೆ ಮತ್ತು ಇತರರು ಇದ್ದರು.