ಪದ್ಮಾವತಿ ದೇವಿಯ ದರ್ಶನ ಪಡೆಯಲು ಪಾದಯಾತ್ರೆ
ಶಿಗ್ಗಾವಿ 26: ಕ್ಷೇತ್ರ ಹೊಂಬುಜಿ ಪದ್ಮಾವತಿ ದೇವಿಯ ದರ್ಶನ ಪಡೆಯಲು ಪ್ರತಿ ವರುಷದಂತೆ ಈ ವರುಷವು ಪಾದಯಾತ್ರೆ ಮೂಲಕ ತಾಲೂಕಿನ ದುಂಡಸಿ ಅ.ಮ. ಕೊಪ್ಪದಿಂದ 50 ಜನ ಜೈನ ದಿಗಂಬರ ಭಕ್ತಾಧಿಗಳು ಪಾದಯಾತ್ರೆ ಕೈಗೊಂಡರು.
ತಾಲೂಕಿನ ದುಂಡಶಿಯಿಂದ ಕೋಣನಕೇರಿ ಮಾರ್ಗವಾಗಿ ಹಾನಗಲ್ಲ ಸಿರಾಳಕೊಪ್ಪ ಮಾರ್ಗವಾಗಿ ಒಟ್ಟು 160 ಕಿಲೋಮೀಟರ ನಾಲ್ಕು ದಿನ ಕಾಲನಡುಗೆ ಪಾದಯಾತ್ರೆ ಮೂಲಕ ಶ್ರೀ ಕ್ಷೇತ್ರ ಹೊಂಬುಜಿ ಶ್ರೀದೇವಿ ಪದ್ಮಾವತಿ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗಿ ಬರುತ್ತೇವೆಂದು ದೇವಿ ಭಕ್ತ ಪ್ರಶಾಂತ ಬಿಸಟ್ಟಿ ಹೇಳಿದರು.
ನಂತರ ರಸ್ತೆಯ ಮಾರ್ಗ ಮಧ್ಯದಲ್ಲಿ ದೇವಿಯ ಭಕ್ತಾದಿಗಳು ಊಟದ ವ್ಯವಸ್ಥೆ ಮಾಡಿರುತ್ತಾರೆ ಶ್ರದ್ಧೆ ಭಕ್ತಿಯಿಂದ ದೇವಿಯ ದರ್ಶನ ಯಾರ ಪಡಿಯುತ್ತಾರೋ ಆ ದೇವಿಯ ಆಶೀರ್ವಾದ ಸದಾ ಅವರ ಮೇಲೆ ಇರುತ್ತದೆ ಎಂದು ಬ್ರಮ್ಮಾನಂದ ಪುಟ್ಟಣ್ಣವರ ಹೇಳಿದರು.
ಈ ಸಂದರ್ಭದಲ್ಲಿ ಜನ ಜೈನ ದಿಗಂಬರ ಭಕ್ತಾಧಿಗಳು ಉಪಸ್ಥಿತರಿದ್ದರು.