ಹೇಮರೆಡ್ಡಿ ಮಲ್ಲಮ್ಮನ ಜಯಂತೋತ್ಸವ: ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
್ಧ ಹೇಮರೆಡ್ಡಿ ಮಲ್ಲಮ್ಮನ ಜಯಂತೋತ್ಸವ: ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಕುಕನೂರು 12: ತಾಲೂಕಿನ ಅಡೂರು ಗ್ರಾಮದಲ್ಲಿ ಮಹಾಸಾಧ್ಧಿ ಹೇಮರೆಡ್ಡಿ ಮಲ್ಲಮ್ಮನ 603ನೇ ಜಯಂತೋತ್ಸವ ರೆಡ್ಡಿ ಸಮಾಜದ ನಿವೃತ್ತ ನೌಕರರಿಗೆ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಗ್ಗೆ ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ 101 ಕುಂಭ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು.
ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟನೆಯನ್ನು ದಿವ್ಯ ಸಾನಿಧ್ಯ ವಹಿಸಿದ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಧರಮುರುಡಿ ಹಿರೇಮಠ ಮಹಾಸ್ವಾಮಿಗಳು ಯಲಬುರ್ಗಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೌಟುಂಬಿಕ ಸಂಕಷ್ಟಗಳ ನಡುವೆ ತಾಳ್ಮೆಯಿಂದ ಆಧ್ಯಾತ್ಮಿಕ ಸಾಧನೆ ಮಾಡಿದ ಹೇಮರೆಡ್ಡಿ ಮಲ್ಲಮ್ಮ, ನಿಜಶರಣೆ ಮಲ್ಲಮ್ಮ ಅವರಿಗೆ ಮನೆಯಲ್ಲಿ ಗಂಡ, ಅತ್ತೆ ಮಾವ, ನಾದಿನಿ ಸಹಿತ ಹಲವರು ತೊಂದರೆ ಕೊಡುತ್ತಿದ್ದರು.
ಅವುಗಳನ್ನೆಲ್ಲ ಸಹಿಸಿಕೊಂಡೇ ಕುಟುಂಬವನ್ನು ತ್ಯಜಿಸದೇ, ಸಂಸಾರವೇ ದೈವಸ್ವರೂಪ ಎಂದು ಬಗೆದರು ಹೇಮರೆಡ್ಡಿ ಮಲ್ಲಮ್ಮ ಸಂಸಾರಿಯಾಗಿ ಸಂಕಷ್ಟಗಳನ್ನು ಉಂಡು ಕಾಯಕದಲ್ಲಿ ದೇವರ ಕಂಡರು. ಅಂತಹ ಮಹಾನ್ ಸಾಧನೀಯ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಆಶಿರ್ವಚನ ನೀಡಿದರು. ದಿವ್ಯ ಸಾನಿಧ್ಯವನ್ನು ವಹಿಸಿದ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಗುಳೇದಗುಡ್ಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿಓದದಿದ್ದರೂ, ವಚನಗಳನ್ನು ರಚಿಸದಿದ್ದರೂ ಮೈದುನ ವೇಮನನ್ನು ಸರಿದಾರಿಗೆ ತಂದು ಕವಿ, ತತ್ವಜ್ಞಾನಿಯನ್ನಾಗಿಸಿದರು. ಬೇಡಿ ಬಂದವರಿಗೆ ಕೊಡುಗೈ ದಾನಿಯಾದರು.
ಜೀವನದಲ್ಲಿ ಎಲ್ಲವನ್ನ ಸಹಿಸಿಕೊಂಡು ಮೇಲೆ ಬಂದಂತಹ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶಗಳನ್ನು ಎಲ್ಲಾ ಮಹಿಳೆಯರು ಅನುಸರಿಸಬೇಕು ಎಂದು ಆಶಿರ್ವಚನ ನೀಡಿದರು. ನಂತರ ಶಿಕ್ಷಕರಾದ ಬಸವರಾಜ ಮೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಾಸ್ತಾವಿಕ ನುಡಿಗಳನ್ನು ರುದ್ರ್ಪ ಶಿರೂರ ಶಿಕ್ಷಕರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಶರಣಪ್ಪ ವೀರಾಪುರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಸರಕಾರಿ ನೌಕರಿಯಲ್ಲಿ ನಿವೃತ್ತಿಯಾದ ಅಧಿಕಾರಿ ವರ್ಗದವರಿಗೂ ಹಾಗೂ ಸೈನಿಕರಿಗೂ ಸಾಧಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವಪ್ಪ ದ್ವಿತೀಯ ದರ್ಜೆಯ ಗುತ್ತಿಗೆದಾರರು, ಅಶೋಕ್ ಮಾದೇನೂರು, ಬಸವರಡ್ಡಿ ಬೇಡನಾಳ, ಹೇಮರೆಡ್ಡಿ ಬೆಟಗೇರಿ, ಬಸವರಾಜ ಹೊಸಳ್ಳಿ, ಈರ್ಪ ಮುತ್ತಾಳ, ಕಳಕಪ್ಪ ಶಿರೂರು, ಶರಣಪ್ಪ ಲಿಂಗಾರೆಡ್ಡಿ, ಸಂಗಪ್ಪ ಅರಿಕೇರಿ, ಶಶಿಧರ ಶಿರೂರು, ಮತ್ತು ಅಡೂರು ಗ್ರಾಮದ ರೆಡ್ಡಿ ಸಮಾಜದ ಗುರು ಹಿರಿಯರು ಇತರರು ಇದ್ದರು.