ಮಹಾ ಮಳೆಯಿಂದ ಹಿರಣ್ಯಕೇಶಿ ನದಿಗೆ ಪ್ರವಾಹ : ಮನೆಗಳು ಜಲಾವೃತ, ಶಂಕರಾಚಾರ್ಯ ಮಠಕ್ಕೆ ಜಲದಿಗ್ಭಂಧನ

ಮಹಾ ಮಳೆಯಿಂದ ಹಿರಣ್ಯಕೇಶಿ ನದಿಗೆ ಪ್ರವಾಹ : ಮನೆಗಳು ಜಲಾವೃತ,  ಶಂಕರಾಚಾರ್ಯ ಮಠಕ್ಕೆ ಜಲದಿಗ್ಭಂಧನ

ಬೆಳಗಾವಿ /ಸಂಕೇಶ್ವರ : ನೆರೆಯ ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆದ ಅರ್ಭಟಕ್ಕೆ ಸಂಕೇಶ್ವರದಲ್ಲಿ ಹಿರಣ್ಯ ಕೇಶಿ ನದಿಗೆ ಪ್ರವಾಹ ಉಂಟಾಗಿದ್ದು, ನದಿಯ ದಡದಲ್ಲಿ ಬರುವ ಶ್ರೀ ಶಂಕರಾಚಾರ್ಯರ ಮಠಕ್ಕೆ ಜಲದಿಗ್ಭಂಧನ ಉಂಟಾಗಿದ್ದು, ಪಟ್ಟಣದ ಮಠ ಗಲ್ಲಿ ಹಾಗೂ ನದಿ ಗಲ್ಲಿಯ ಕೆಲವು ಮನೆಗಳು ಜಲಾವೃತವಾಗಿವೆ. 


     ಮಹಾರಾಷ್ಟ್ರ ದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಂಕೇಶ್ವರ ಪಟ್ಟಣದ ಬಳಿ ಹಾಯ್ದು ಹೋಗುವ ಹಿರಣ್ಯಕೇಶಿ ನದಿಗೆ ಪ್ರವಾಹ ಉಂಟಾಗಿದ್ದು, ಪ್ರವಾಹದ ನೀರಿನಲ್ಲಿ ಮಠ ಗಲ್ಲಿ ಹಾಗೂ ನದಿ ಗಲ್ಲಿ ಸೇರಿದಂತೆ ಕೆಲವು ಪ್ರದೇಶಗಲ್ಲಿ ಮನೆಗಳಿಗೆ ನದಿ ನೀರು ನುಗ್ಗಿ ಜಲಾವೃತಗೊಂಡಿವೆ. 


   ಮಳೆಯ ಆರ್ಭಟವು ಇನ್ನು ಕೂಡಾ ಮುಂದೆ ವರೆದಿದ್ದು, ಪ್ರವಾಹ ಪರಿಸ್ಥಿತಿ ಇನ್ನು ಹೆಚ್ವಾಗುವ ಸಂಭವ ಇದೆ ಎನ್ನಲಾಗುತ್ತಿದೆ. 

ಸುದ್ದಿ ಓದಿ