ಎಗ್ಗಿಲ್ಲದೇ ಸುರಿದ ಮಳೆ: ಜನ ಜೀವನ ಅಸ್ಥವ್ಯಸ್ಥ ; ಮಾದೂರು ಡಿಎಸ್ಎಸ್ ಗ್ರಾಮ ಘಟಕದಿಂದ ಪಿಡಿಒಗೆ ಮನವಿ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 11: ತಾಲೂಕಿನಲ್ಲಿ ಎಗ್ಗಿಲ್ಲದೇ ಸುರಿದಿರುವ ಮಳೆಯಿಂದ ಜನ ಜೀವನ ಅಸ್ಥವ್ಯಸ್ಥವಾಗಿದ್ದು, ಮಳೆ ನೀರು ಮನೆಗಗಳಿಗೆ ನುಗ್ಗಿದೆ ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮಾದೂರು ಗ್ರಾಮದ ಡಿಎಸ್ಎಸ್ ಗ್ರಾಮ ಘಟಕದಿಂದ ಮಾದೂರು ಗ್ರಾಮ ಪಂಚಾಯತಿ ಪಿಡಿಒ ಹುಚ್ಚಪ್ಪ ಅವರಿಗೆ ಮಂಗಳವಾರ ಮನವಿ ನೀಡಿದರು.
ಈ ವೇಳೆ ಡಿಎಸ್ಎಸ್ನ ಜಿಲ್ಲಾ ಸಂಚಾಲಕ ಮಹೇಶ್ವರ ಮಾದೂರು ಮಾತನಾಡಿ ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಮಾದೂರು ಗ್ರಾಮದ ಎಸ್ಸಿ ಕಾಲೋನಿಯ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿದ್ದು ಜೀವನ ಅಸ್ಥವ್ಯೆಸ್ಥವಾಗಿದೆ ಈ ಬಗ್ಗೆ ಹಲವಾರು ಬಾರಿ ಇಲ್ಲಿನ ಪಂಚಾಯತಿ ಪಿಡಿಒ ಅವರ ಗಮನಕ್ಕೆ ವಿಷಯ ಮುಟ್ಟಿಸಿದರೂ ಗಣನೆಗೆ ತೆಗೆದುಕೊಳ್ಳದೇ ನೀಡಿದ ಮನವಿಗಳನ್ನು ಮೂಲೆಗುಂಪು ಮಾಡುತ್ತಿದ್ದು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ, ಇಲ್ಲಿನ ಎಸ್ಸಿ ಕಾಲೋನಿಯ ಸುಮಾರು 200ರಿಂದ300 ಮನೆಗಳಿಗೆ ಸೂಕ್ತ ನಿವೇಶನದ ಅವಶ್ಯಕತೆಯಿದ್ದು ಶೀಘ್ರವೇ ಇದಕ್ಕೆ ಸಂಭಂಧಿಸಿದ ಅಧಿಕಾರಿಗಳು ಗಮನಹರಿಸಿ ಸೂರು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಮಾದೂರು ಗ್ರಾಮದ ಸಮೀಪದಲ್ಲಿ ವಾಸವಿದ್ದು ಕುಟುಂಬದ ಮನೆಯೊಳಗೆ ಸೋಮವಾರ ಸುರಿದ ಮಹಾಮಳೆಗೆ ನೀರು ಮನೆಯೊಳಗೆ ನುಗ್ಗಿದ್ದು ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತಾತದರೂ ಮನೆಯಲ್ಲಿನ ದಿನಿತ್ಯದ ಉಪಯೋಗಿಸುವ ಪದಾರ್ಥಗಳು ಮಣ್ಣುಪಾಲಾಗಿವೆ ಮುಂದಿನ ಜೀವನ ಕಷ್ಟಕರವಾಗಿದ್ದು ಇವರಿಗೆ ಸೂಕ್ತ ವ್ಯೆವಸ್ಥೆ ಕಲ್ಪಿಸುವ ಕೆಲಸವಾಗಬೇಕಿದೆ ಎಂದರು.
ತಹಶಿಲ್ದಾರ್,ಇಒ ಗ್ರಮಕ್ಕೆ ಭೇಟಿ : ಸೋಮವಾರ ಸುರಿದ ಮಳೆಗೆ ಮಾದೂರು ಗ್ರಾಮದ ಕುಟುಂಬವೊಂದರ ಮನೆಗೆ ಮಳೆ ನೀರು ನುಗ್ಗಿದ ಪರಿಣಾಮ ತಹಶಿಲ್ದಾರ್ ಕಾರ್ತೀಕ್ ಹಾಗೂ ಇಒ ಪರಮೇಶ್ವರ್ಪ ಭೇಟಿ ನೀಡಿದ್ದು ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಅಲ್ಲಿನ ಅಂಬೇಡ್ಕರ್ ಭವನದಲ್ಲಿ ನೆಲೆಸಿರುವಂತೆ ಸದ್ಯದ ಮಟ್ಟಿಗೆ ವ್ಯೆವಸ್ಥೆ ಕಲ್ಪಿಸಿದರು.
ಗ್ರಾಮದಲ್ಲಿನ ಎಸ್ಸಿ ಕಾಲೋನಿಯಲ್ಲಿನ ನಿವಾಸಿಗಳಿಗೆ ಸೂಕ್ತ ವ್ಯೆವಸ್ಥೆ ಅವಶ್ಯಕವಾಗಿದ್ದು ಅಧಿಕಾರಿಗಳು ಆಪತ್ಕಾಲದಲ್ಲಿ ಬಂದು ನೆರವು ನೀಡುವುದಕ್ಕಿಂತ ಇಲ್ಲಿನ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿಕೊಂಡು ಸೂರು ಕಲ್ಪಿಸುವ ಕೆಲಸಕ್ಕೆ ಮುಂದಾಗಬೇಕೆಂಬುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ.