ಮಳೆಯ ಆರ್ಭಟ : ಪೂನಾ‌ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೀರು, ಸಣ್ಣ ವಾಹನಗಳ ಸವಾರರ‌ ಪರದಾಟ

ಮಳೆಯ ಆರ್ಭಟ : ಪೂನಾ‌ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ನೀರು, ಸಣ್ಣ ವಾಹನಗಳ ಸವಾರರ‌ ಪರದಾಟ

ಬೆಳಗಾವಿ : ಸತತವಾಗಿ ಸುರಿದ ಧಾರಕಾರ ಮಳೆಯ ಅರ್ಭಟಕ್ಕೆ ಮಳೆಯ ನೀರು ಕಾಮಗಾರಿ ನಡೆಯುತ್ತಿರುವ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಖಾನಾಪೂರ ಮತ್ತು ಚಿಕ್ಕಾಲಗುಡ್ಡ ಬಳಿ ನಡೆದಿದೆ. ಇದರಿಂದ ಸಣ್ಣಪುಟ್ಟ ವಾಹನಗಳ ಸವಾರರು ಪರದಾಡುತ್ತಿದ್ದ ಘಟನೆ ವರದಿಯಾಗಿದೆ.


    ಸದ್ಯ ಬೆಳಗಾವಿಯಿಂದ ಕೊಲ್ಲಾಪುರ ವರೆಗಿನ ಪೂನಾ ಬೆಂಗಳೂರು ‌ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಮತ್ತು ಖಾನಾಪೂರ ನಡುವೆ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. 

   ಆದರೆ ಶುಕ್ರವಾರ ಸಂಜೆ 6ರಿಂದ ರಾತ್ರಿ 8 ಗಂಟೆಯ ವರೆಗೆ ಸತತವಾಗಿ ಸುರಿದ ಧಾರಕಾರ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಹೆದ್ದಾರಿ ರಸ್ತೆಗೆ ಮಳೆಯ ನೀರು ನುಗ್ಗಿದೆ. ಅಲ್ಲದೆ ಕಾಮಗಾರಿ ಹಿನ್ನೆಲೆ ಎಲ್ಲ ವಾಹನಗಳು ಸಾಗಲು ಸರ್ವೀಸ್ ರಸ್ತೆಯ ಮೂಲಕ ಪರ್ಯಾಯ ವ್ಯವಸ್ಥೆ ‌ಮಾಡಲಾದ ಸರ್ವೀಸ್ ರಸ್ತೆಗೆ ಮಳೆಯ ನೀರು ನುಗ್ಗಿದ ಹಿನ್ನೆಲೆಯಲ್ಲಿ ದೊಡ್ಡ ಗಾತ್ರದ ವಾಹನಗಳು ಮಾತ್ರ ಸಂಚರಿಸುತ್ತಿದ್ದು, ಸಣ್ಣ ಮತ್ತು ದ್ವಿಚಕ್ರ ವಾಹನಗಳು ಸಂಚರಿಸದೆ ಸವಾರರು ಪರದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.

ಸುದ್ದಿ ಓದಿ