ರಕ್ತದಾನದಿಂದ ಆರೋಗ್ಯ ವೃದ್ಧಿ: ಅಕ್ಕಿ ತೋಟೇಶ್
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 20: ಇಂದಿನ ವೈಜ್ಞಾನಿಕ ಯುಗದಲ್ಲಿ ಅವಶ್ಯಕತೆಗಳನ್ನು ಕೃತಕವಾಗಿ ಸೃಷ್ಟಿಸಿ ಜೀವನ ಸರದೂಗಿಸಬಹುದಾಗಿದೆ ಆದರೆ ಅವಶ್ಯಕವಾಗಿರುವ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ, ರಕ್ತದಾನದಿಂದ ಆರೋಗ್ಯ ವೃದ್ಧಿ ಅಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಕ್ಕಿ ತೋಟೇಶ್ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದ ಮೈಲಾರ ಲೀಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ರಕ್ತನಿಧಿ ಮತ್ತು ರಕ್ತ ವಿಭಜನೆ ಘಟಕದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ ವೈಜ್ಞಾನಿಕವಾಗಿ ಬಹಳಷ್ಟು ಮುಂದುವರೆದಿದ್ದೇವೆ, ಯಾವುದೇ ರೀತಿಯ ಅಭಾವಗಳನ್ನು ಕೃತಕವಾಗಿ ಉತ್ಪಾದಿಸಿ ಸರಿದೂಗಿಸುವ ತಂತ್ರಜ್ಞಾನ ಬಳಕೆ, ವಿವಿಧ ರೀತಿಯ ಸಂಶೋದನೆಗಳು ಸೇರಿದಂತೆ ಹಲವಾರು ರೀತಿಯಲ್ಲಿ ದಾಪುಗಾಲು ಇಟ್ಟಿದ್ದೇವೆ ಆದರೆ ಮನುಷ್ಯನ ದೇಹದಲ್ಲಿ ಇರುವ ರಕ್ತವನ್ನು ಮಾತ್ರ ಕೃತಕವಾಗಿ ಉತ್ಪಾದಿಸುವುದು ಅಸಾಧ್ಯ ಎಂಬುದಂತೂ ಸತ್ಯ, ಹಾಗಾಗಿ ರಕ್ತದಾನ ಮಹಾ ದಾನವಾಗಿದೆ, ರಕ್ತದಾನ ಮಾಡಿ ಮನಷ್ಯತ್ವ ಉಳಿಸಬೇಕಿದೆ, ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆಗೆ ಪ್ರಚೋದನೆ ದೊರಕುತ್ತದೆ, ಜ್ಞಾಪಕ ಶಕ್ತಿ ವೃಧ್ಧಿಯಾಗುತ್ತದೆ, ರಕ್ತದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡಬಹುದು, ರಕ್ತದಾನದಿಂದ ಹೃದಯಾಘಾತ ಮರಣಗಳನ್ನು ಶೇಕಡಾ 80ರಷ್ಟು ತಡೆಯಬಹುದಾಗಿದೆ, ರಕ್ತದ ಒತ್ತಡ ಸೇರಿದಂತೆ ಇನ್ನಿತರೆ ರೋಗಗಳಿಗೆ ತುತ್ತಾಗುವುದುನ್ನು ತಪ್ಪಿಸಬಹುದಾಗಿದೆ, ಹಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ತಿಳಿಸಿದರು.
ಈ ಸಂಧರ್ಭದಲ್ಲಿ ಆಯುಷ್ ಅಧಿಕಾರಿ ಡಾ.ಸಿದ್ದರಾಮಸ್ವಾಮಿ, ಬಣಕಾರ ಕೊಟ್ರೇಶ್, ಗ್ರಾ.ಪಂ.ಸದಸ್ಯೆ ಬಸಮ್ಮ ಬಣಕಾರ, ಮುಖಂಡರಾದ ಅಕ್ಕಿ ಸಣ್ಣ ಕೊಟ್ರೇಶಪ್ಪ, ಕಡ್ಡಿ ಚನ್ನಬಸಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯಮುನಾ ಉಪ್ಪಾರ, ತಂಬ್ರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಇದ್ದರು.