ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮಹಾಲಿಂಗಪುರ 14: ಸಮೀಪದಲ್ಲಿರುವ ಸಂಗಾನಟ್ಟಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ ಆಶ್ರಯದಲ್ಲಿ "ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ" ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ನೀಲಣ್ಣವರ ಯೋಗ ಶಿಕ್ಷಕರು ಸಮುದಾಯದ ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಮತ್ತು ಕೌಟುಂಬಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ಪ್ರೌಢಾವಸ್ಥೆಯಲ್ಲಿ ನಾವು ಅರಿಯದೆ ತಂಬಾಕು ಉತ್ಪನ್ನಗಳಿಗೆ ಬಲಿಯಾದರೆ ಮುಂದಿನ ನಮ್ಮ ಜೀವನ ನರಕವಾಗುತ್ತದೆ. ಆದ್ದರಿಂದ ನಮ್ಮ ಮನೆಯಲ್ಲಿ ಯಾರೇ ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿದ್ದರೆ. ಅವರಿಗೆ ಮನವರಿಕೆ ಮಾಡಿ. ನಮ್ಮ ಮನೆಯಲ್ಲಿ ಒಬ್ಬ ಸದಸ್ಯ ತಂಬಾಕು ಸೇದುತ್ತಿದ್ದರೆ, ಮನೆಯ ಎಲ್ಲಾ ಸದಸ್ಯರು ಅದರ ದುಷ್ಪರಿಣಾಮಕ್ಕೆ ಒಳಗಾಗುತ್ತಾರೆ. ಆದ್ದರಿಂದ ಚಂಚಲ ಮನಸ್ಸನ್ನು ಯೋಗ ದಿಂದ ಸ್ಥಿರಗೊಳಿಸಿ ತಮ್ಮ ಸಂಪೂರ್ಣ ಶ್ರಮವನ್ನು ಶಿಕ್ಷಣಕ್ಕಾಗಿ ಮಾತ್ರ ಮೀಸಲಿಡಿ, ಶಿಕ್ಷಣವೇ ನಮ್ಮ ಬಾಳನ್ನು ಬೆಳಗಿಸುವ ಅಸ್ತ್ರವಾಗಿದೆ ಎಂದು ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯರಾದ ಎಸ್.ಬಿ.ಮಲಬಾದಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸಾರ್ವಜನಿಕ ವಲಯದಲ್ಲಿ ಅತಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಬಡ ಜನತೆಗೆ ಬಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶೈಕ್ಷಣಿಕ ಸೌಲಭ್ಯಗಳನ್ನು ಸಾರ್ವಜನಿಕರು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಘದ ವಲಯ ಮೇಲ್ವಿಚಾರಕರಾದ ರೇಣುಕರಾಜ್ ಎಂ.ಕೆ ರವರು ಪ್ರಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಮ್ಮಿಕೊಂಡ ಎಲ್ಲ ಯೋಜನೆಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.ಶಿಕ್ಷಕ ಹನಮಂತ ಎನ್ ಬ್ಯಾಕೋಡ ರವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿ ವಂದಿಸಿದರು.ಇದೇ ಸಂಧರ್ಬದಲ್ಲಿ ಶ್ರೆಯಾನ ನದಾಫ್, ಎಂ ಡಿ ಬುದ್ನಿ,ಎಸ್ ಎಸ್ ಸಂರಟ್ಟಿ, ಎನ್ ವಾಯ್ ಪಾಟೀಲ,ಪ್ರಭಾಕರ ಕುಂದರಗಿ,ಬಿ ಎಂ ಗೆಂಡೆ ಭಾಗಿಯಾಗಿದ್ದರು.