ಹಗರಿಬೊಮ್ಮನಹಳ್ಳಿಯಲ್ಲಿ 29ರಂದು ಆರೋಗ್ಯ ಮೇಳ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 26: ಪಟ್ಟಣದ ಗಂಭೀ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಎಪ್ರಿಲ್ 29ರ ಶುಕ್ರವಾರ ಆರೋಗ್ಯ ಮೇಳ ನಡೆಸಲಾಗುತ್ತಿದ್ದು ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಶಿವರಾಜ್ ತಿಳಿಸಿದರು.
ಇಲ್ಲಿನ ತಹಶಿಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಆರೋಗ್ಯ ಮೇಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಆರೋಗ್ಯದ ದವಿಷಯದಲ್ಲಿ ತಾತ್ಸಾರ ಬೇಡ, ಖಾಯಿಲೆ ಯಾವುದೇ ಇರಲಿ ಮೇಳದಲ್ಲಿ ಭಾಗವಹಿಸಿ ಆರೋಗ್ಯವನ್ನು ಕಾಪಾಡುಕೊಳ್ಳುವಂತೆ ಕರೆ ನೀಡಿದರು.ಮದ್ಯಮ ವರ್ಗದ ಜನತೆ ಆಸ್ಪತ್ರೆಗಳ ಭಾರಿ ವೆಚ್ಚವನ್ನು ಭರಿಸದೇ ಖಾಯಿಲೆ ಇದ್ದರೂ ಚಿದಕಿತ್ಸೆಗೆ ಮುಂದಾಗದಿರುವುದು ಸಾಮಾನ್ಯವಾಗಿದ್ದು ಇದಕ್ಕೆ ಸರಕಾರದಿಂದ ಅವರಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ, ಖಾಸಗಿ ವೈದ್ಯರು ಸರಿದಂತೆ ಹಲವು ತಜ್ಞರು ಈ ಮೇಳದಲ್ಲಿ ಭಾಗವಹಿಸಲಿದ್ದು ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಈ ಮೇಳದಲ್ಲಿ ವಿವಿಧ ರೀತಿಯ ಕಾಯಿಲೆಗಳ ತಜ್ಞರು ಚಿಕಿತ್ಸ ನೀಡಲು ಬರುತ್ತಿದ್ದು , ಕೆಲ ಪ್ರಮುಖ ಖಾಯಿಲೆಗಳಿಗೆ ಹೆಚ್ಚುವರಿ ಚಿಕಿತ್ಸೆ ಬೇಕಿದ್ದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳಿಗೆ ಸರಕಾರ ನಿಯಮಾನುಸಾರ ಖರ್ಚಿನಲ್ಲಿ ಚಿಕಿತ್ಸೆ ನೀಡುವ ಕುರಿತು ಆಸ್ಪತ್ರೆಯಿಂದ ರೆಫರ್ ಮಾಡಲಾಗುವುದು ಎಂದು ಬೆಣಕಲ್ಲು ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್ ತಿಳಿಸಿದರು.
ರಕ್ತದಾನ ಶಿಬಿರ, ನೇತ್ರ ತಪಾಸಣೆ ಸೇರಿದಂತೆ ಶಸ್ತ್ರ ಚಿಕಿತ್ಸೆಯು ಲಭ್ಯವಿದ್ದು, ತಾಲೂಕಿನ 550 ನೇತ್ರ ಚಿಕಿತ್ಸೆಯಲ್ಲಿ 400 ಜ8ನಕ್ಕೆ ಚಿಕಿತ್ಸೆ ಆಗಿದ್ದು ಉಳಿದ 150ಜನಕ್ಕೆ ಚಿಕಿತ್ಸೆ ಅಂದು ನಡೆಸಲಾಗುವುದು, ತಾಲೂಕಿನ ಅಪೌಷ್ಠಿಕ ಮಕ್ಕಳಿಗೆ ಕಿಟ್ ವಿತರಣೆ, ಯೋಗಶಿಬಿರ ಹಾಗೂ ತಾಲೂಕಾಸ್ಪತ್ರೆಯಲ್ಲಿ ಮಾಹೆಯ ನಾಲ್ಕನೇ ಸೋಮವಾರ ನೇತ್ರ ಶಸ್ತ್ರ ಚಿಕಿತ್ಸೆಯು ನಡೆಯುತ್ತದೆ ಹೊಸಪೇಟೆಯ ವೈದ್ಯರು ಚಿಕಿತ್ಸೆಯಲ್ಲಿ ಪಾಲ್ಗೊಳ್ಳುತ್ತಾರೆ ಸಾರ್ವಜನಿಕ ಆಸ್ಪತ್ರೆಯಲ್ಲಿನ ಈ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಭೆಯಲ್ಲಿ ವೈದ್ಯರು ತಿಳಿಸಿದರು.ಮೇಳದಲ್ಲಿ ಭಾಗವಹಿಸುವವರು ಆಧಾರ ಕಾರ್ಡ್ ಹಾಗೂ ಪಡಿತರ ಕಾರ್ಡ್ ತರುವಂತೆ ತಿಳಿಸಿದರು.ಈಗಾಗಲೇ ಆಶಾ ಕಾರ್ಯಕರ್ತೆಯರು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾ ಹತ್ತಾರು ಖಾಯಿಲೆ ಸೇರಿದಂತೆ ಕಣ್ಣು, ಹೃದೃಗ, ಅಪೌಷ್ಠಿಕ ಮಕ್ಕಳ ಸರ್ವೆ ಕಾರ್ಯವನ್ನು ಮಾಡುತ್ತಿದ್ದಾರೆ, ಖಾಯಿಲೆ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಈ ಮೇಳ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.ಅಲಬೂರು ವೈದ್ಯ ರಘುವೀರ ಇದ್ದರು.