ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ಬಳ್ಳಾರಿ 27: ರಸ್ತೆಯಲ್ಲಿರುವ ಜಯಪ್ರಕಾಶ್ ನಾರಾಯಣ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಹೊಸಪೇಟೆ 02 ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಲ್ಹಾರ ಕ್ಲಿನಿಕ ಇವರ ಸಹಯೋಗದೊಂದಿಗೆ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗಡೆರವರ ಮಾರ್ಗದರ್ಶನದೊಂದಿಗೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಒಂದು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸುಮಾರು 12 ವರ್ಷಗಳಿಂದ ಇಡೀ ರಾಜ್ಯದಾದ್ಯಂತ ಮಹಿಳಾ ಸಬಲೀಕರಣಕ್ಕಾಗಿ ಬಹಳಷ್ಟು ಶ್ರಮ ಪಡುತ್ತಿದ್ದು ಅದರಲ್ಲೂ ಈ ನಮ್ಮ ವಿಜಯನಗರ ಕ್ಷೇತ್ರದಲ್ಲೂ ಅವರ ಸೇವೆಯ ಕಾರ್ಯಕ್ರಮಗಳು ಅಪಾರವಾಗಿರುತ್ತದೆ.
ಅದರಲ್ಲೂ ಬಡಜನರು ಹಾಗೂ ಮಾಧ್ಯಮ ವರ್ಗದವರು ಕುಡಿತದ ದುಶ್ಚಟಕ್ಕೆ ಬಲಿಯಾಗಿ ಕುಟುಂಬ ಗೌರವ, ತನು, ಮನ, ಧನ, ಸಮಯ, ವಯಸ್ಸು, ಆರೋಗ್ಯ, ವಿದ್ಯಾಭ್ಯಾಸ, ಮಾನ, ಮರ್ಯಾದೆ, ಆತ್ಮ ಸಂಯಮ, ಆತ್ಮ ಗೌರವ, ಕೊನೆಗೆ ಸರ್ವಸ್ವವನ್ನು ಕಳೆದುಕೊಂಡು ಇಡೀ ಕುಟುಂಬವನ್ನು ಬೀದಿಗೆ ತಂದುಬಿಡುತ್ತಾರೆ.
ಈ ನಿಟ್ಟಿನಲ್ಲಿ ಕಾಳಜಿ ಹೊಂದಿರುವ ಈ ಸಂಸ್ಥೆಯು ಪ್ರತಿ ವರ್ಷ 15 ದಿನಗಳು ಪಾನಮುಕ್ತ ಕಾರ್ಯಕ್ರಮವನ್ನು ಹಮ್ಮಿಕೊಂಡು ಕುಡಿತದ ಚಟವನ್ನು ಬಿಡಿಸಿರುತ್ತಾರೆ. ಜೀವನದಲ್ಲಿ ಪ್ರತಿಯೊಬ್ಬರು ಅರೋಗ್ಯ ಕಾಪಾಡುವುದು ಅತೀ ಮುಖ್ಯ ಇಂತಹ ಶಿಬಿರದಲ್ಲಿ ಮಹಿಳೆಯರು ಸದಪಯೋಗ ಪಡೆದುಕೊಳ್ಳಬೇಕು ಇವರ ಈ ಕಾರ್ಯಕ್ರಮಕ್ಕೆ ಇಡೀ ವಿಜಯನಗರ ಜಿಲ್ಲೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಅನಂತ ಅನಂತ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಇದೇ ಸಂಧರ್ಭದಲ್ಲಿ ಯೋಜನೆಯ ನಿರ್ದೇಶಕರಾದ ಸತೀಶ್ ಶೆಟ್ಟಿ ಅರ್.ಸಿ.ಹೆಚ್.ಅಧಿಕಾರಿಯಾದ ಡಾ. ಜಂಬಯ್ಯ ವಿ.ಪರಶುರಾಮ ಹಾಗೂ ವೈದ್ಯರಾದ ಡಾ. ರೇಖಾ. ಡಾ. ರಾಜಶೇಖರ. ಡಾ. ಕವಿತಾ, ಹಾಗೂ ಯೋಜನಾಧಿಕಾರಿಗಳಾದ ರಾಘವೇಂದ್ರ ಎಸ್. ಹಾಗೂ ಮೇಲ್ವಿಚಾರಕರಾದ ಭಾಗ್ಯಮ್ಮ ಆಂತರಿಕ ಲೆಕ್ಕ ಪರಿಶೋಧಕರಾದ ನಿಂಗಪ್ಪ ಹಾಗೂ ವಲಯ ಸೇವಾ ಪ್ರತಿನಿಧಿಗಳು ಹಾಗು ತಂಡದ ಸದಸ್ಯರು ಹಾಗೂ 200 ಜನ ಮಹಿಳೆಯರು ಭಾಗವಹಿಸಿದ್ದರು