ಉದ್ಯಮ ಸಾಧನೆಯಲ್ಲಿ ಫಲದೊಡ್ಡಿ ಅವರಿಗೆ ಕೇಂದ್ರ ಎಂಎಸ್‌ಎಂಇ ಪ್ರಶಸ್ತಿ

ಉದ್ಯಮ ಸಾಧನೆಯಲ್ಲಿ ಫಲದೊಡ್ಡಿ ಅವರಿಗೆ ಕೇಂದ್ರ ಎಂಎಸ್‌ಎಂಇ ಪ್ರಶಸ್ತಿ

ಉದ್ಯಮ ಸಾಧನೆಯಲ್ಲಿ ಫಲದೊಡ್ಡಿ ಅವರಿಗೆ ಕೇಂದ್ರ ಎಂಎಸ್‌ಎಂಇ ಪ್ರಶಸ್ತಿ 

ಗದಗ 06 : ದೆಹಲಿಯ ಕೆಂಪುಕೋಟೆ ಮೈದಾನದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರೋತ್ಸವ ಬಳಿಕ ಉದ್ಯಮ ವಿವಿಧ ಕೇಂದ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಉದ್ಯಮಿಗಳನ್ನು ಆಹ್ವಾನಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಕೆಂಪುಕೋಟೆಗೆ ತೆರಳಿದ ಉದ್ಯಮಿಗಳ ತಂಡದ ನೇತೃತ್ವವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮದ್ಯಮ ಉದ್ಯಮಗಳ ಸಚಿವಾಲಯದ ಕ್ಷೇತ್ರದಲ್ಲಿ ಸಾಧನೆಗೈದ ಗದಗ ಬೆಟಗೇರಿಯ ಯುವಕ ಯುವ ಉದ್ಯಮಿ ಹನಮಂತ ಸೋಮಣ್ಣ ಫಲದೊಡ್ಡಿ ಬೆಟಗೇರಿ ಗದಗ ಅವರಿಗೆ ಕೇಂದ್ರ ಎಂಎಸ್‌ಎಂಇ ಪ್ರಶಸ್ತಿ ನೀಡಿ ಗೌರವಿಸಿದರು. 

2017-18 ಇದಕ್ಕಿಂತ ಮುಂಚೆ ಕರ್ನಾಟಕದ ಸರ್ಕಾರ ಆಯೋಜಿಸಿದ್ದ ಶ್ರೇಷ್ಠ ಉತ್ಪಾದನಾ ಪ್ರಶಸ್ತಿಯನ್ನು ಪಡೆದು ಗದಗ ಜಿಲ್ಲಾ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ 2017-18ನೇ ಸಾಲಿನ ರಾಜ್ಯ ಮಟ್ಟದ ಸರ್ ಎಂ. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿಯನ್ನು ಜಿಲ್ಲೆಯ ಸೌಮ್ಯಶ್ರೀ ಹ್ಯಾಂಡ್ ಲೂಮ್ಸ್‌ ಮತ್ತು ಪವರ್ ಲೂಮ್ಸ್‌ ವರ್ಕ್‌ ಬೆಟಗೇರಿ ಮಾಲೀಕ ಹನುಮಂತಪ್ಪ ಸೋಮಪ್ಪ ಫಲದೊಡ್ಡಿ ಪಡೆದುಕೊಂಡಿದ್ದಾರೆ.ಅತೀ ಬಡತನದಲ್ಲಿ ಬೆಳೆದಂತಹ ಈ ಯುವಕ ಗದಗ ಜಿಲ್ಲಾಯ ಉದ್ಯಮಿ ಕ್ಷೇತ್ರದಲ್ಲಿ ಸಾಧನೆಗೈದ ಜನರ ಮೆಚ್ಚುಗೆ ಪಡೆದುಕೊಂಡಿದ್ದಾನೆ. 


ಸುದ್ದಿ ಓದಿ