ಮಹಲಿಂಗಪುರ

ಹಜರತ್ ಟಿಪ್ಪುಸುಲ್ತಾನ್ ಜಯಂತಿ

ಹಜರತ್ ಟಿಪ್ಪುಸುಲ್ತಾನ್ ಜಯಂತಿ


ಮಹಾಲಿಂಗಾಪುರ 10: ದಲಿತ ಸಂಘರ್ಷ ಸಮಿತಿ, ಮತ್ತು ಟಿಪ್ಪು ಸುಲ್ತಾನ್ ಸಂಘಟನೆಗಳ ಸಹಯೋಗದಲ್ಲಿ ಕೆಂಗೇರಿಮಡ್ಡಿ ಬಡಾವಣೆಯ ಸಾಯಿ ಸರ್ಕಲ್ ಹತ್ತಿರದ ಅಂಬೇಡ್ಕರ ಭಾವಚಿತ್ರದ ಬಳಿ ಹಜರತ್ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಸದಾಶಿವ ಪೂಜೇರಿ ಅವರು ಟಿಪ್ಪು ಸುಲ್ತಾನ್ ರ ಸಮಾನತೆಯ ಆಧಾರದ ಮೇಲೆ ನಡೆಸಿದ ಆಡಳಿತ ಕಾರ್ಯವೈಕರಿಯನ್ನು ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ನೀಡಿದ ಯೋಗದಾನದ ಬಗೆಗೆಯೂ ವಿವರ ನೀಡಿದರು.  

 ತಾಲೂಕಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪರಶುರಾಮ ಮೇತ್ರಿ, ಭೀಮ ಆರ್ಮಿ ಅಧ್ಯಕ್ಷ ಮತ್ತು ಮಾಜಿ ಯೋಧ ವಿಜಕುಮಾರ ಗಸ್ತಿ, ತೇರದಾಳ ಮತ ಕ್ಷೇತ್ರ ಅಧ್ಯಕ್ಷ ಭೀಮಸಿ ಮಾವಿನಹಿಂಡಿ, ತಾಹೀರ್ ಸೌದಾಘರ, ಬಾಷಾಸಾಬ ಬಿಸ್ತಿ, ಶೇರಲಿ ಶೇಕ್, ಚನ್ನಪ್ಪ ರಾಮೋಜಿ, ಈರ​‍್ಪ ದಿನ್ನಿಮನಿ, ಬುಡ್ಡಾ ಕೌಜಲಗಿ, ಬಸು ಮಾವಿನಹಿಂಡಿ, ಹುಸೇನಸಾಬ ಉಕ್ಕಲಿ, ಹಾಫೀಜ್ ಮೇಹಬೂಬ, ದಾನೇಶ ಮೇತ್ರಿ ಮುಂತಾದವರು ಪಾಲ್ಗೊಂಡಿದರು. 


ಸುದ್ದಿ ಓದಿ