ಸಿಂಧಗಿ

ವಿದ್ಯಾರ್ಥಿಗಳು ಕ್ರೀಡೆಗಳತ್ತ ಒಲವು ತೋರಿಸಿ: ಶಾಸಕ ಭೂಸನೂರ

ವಿದ್ಯಾರ್ಥಿಗಳು ಕ್ರೀಡೆಗಳತ್ತ ಒಲವು ತೋರಿಸಿ: ಶಾಸಕ ಭೂಸನೂರ

ಸಿಂದಗಿ : ವಿದ್ಯಾರ್ಥಿಗಳಲ್ಲಿ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕ್ಕಾಗಿ ಕ್ರೀಡೆಗಳತ್ತ ಒಲವು ತೋರಿಸಬೇಕು ಎಂದು ಶಾಸಕ ರಮೇಶ ಭೂಸನೂರ ಹೇಳದರು. 

ಶನಿವಾರ ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಶಾಸಕ ರಮೇಶ ಭೂಸನೂರ ಅವರ ವಿಜಯೋತ್ಸವದ ಅಂಗವಾಗಿ ಹಮ್ಮಿಕೊಂಡ ಒಪನ್ ಟೆನ್ನಿಸ ಬಾಲ್ ಟೂರ್ನಾಮೆಂಟನಲ್ಲಿ ಕ್ರೀಕೆಟ್ ಕ್ರೀಡೆಯಲ್ಲಿ ಭಾಗಿಯಾಗಿ ಬಾಟಿಂಗ್ ಮಾಡುವ ಮೂಲಕ ಟೂರ್ನಾಮೆಂಟ ಉದ್ಘಾಟಿಸಿದರು. 

ಯುವಕರು ಕ್ರೀಡೆಯಲ್ಲಿ ಪಾಲ್ಗೊಳ್ಳುವದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಸದೃಢ ದೇಹ ಸದೃಡ ಮನುಷ್ಯನನ್ನಾಗಿ ಮಾಡುತ್ತದೆ ಎಂದು ಹೇಳಿದರು. 

ಸಾನಿಧ್ಯ ವಹಿಸಿದ ಗೋಲಗೇರಿ ಗ್ರಾಮದ ಭಂಡಾರಿದೇವಿ ಶಕ್ತಿಪೀಠದ ಮುನೇಂದ್ರಸ್ವಾಮಿಗಳು, ಬಿಜೆಪಿ ಸಿಂದಗಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಸಂತೋಷ ಮಣಗಿರಿ, ಶ್ರೀಶೈಲ ಚಳ್ಳಗಿ, ರವಿಕುಮಾರ ನಾಯ್ಕೋಡಿ, ಮಲ್ಲಿಕಾರ್ಜುನ ಬಿರಾದಾರ, ಗೌಡಣ್ಣ ಆಲಮೇಲ, ಜಿ.ಆರ್‌. ಮಲ್ಲನಗೌಡ ಬಡಗಿ, ಶಿವಣ್ಣ ಮಾರಲಬಾವಿ ಸೇರಿದಂತೆ ಕ್ರೀಡಾ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ